ಡೇ2ಡೇ ನ್ಯೂಸ್‌ & ಎಸ್‌ಎಲ್‌ ಶೇಟ್‌ ಸಹಯೋಗದ ಮುದ್ದುಕೃಷ್ಣ ಫೋಟೊ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ನಟಿ ಗಾನ ಭಟ್‌ 

ಡೇ2ಡೇ ನ್ಯೂಸ್‌ ಮಾಧ್ಯಮ ಸಂಸ್ಥೆಯು ಎಸ್‌ಎಲ್‌ ಶೇಟ್‌ ಡೈಮಂಡ್‌ ಹೌಸ್‌ ಸಹಯೋಗದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮವು ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿರುವ ಮಾನಸ ವಾಟರ್‌ ಪಾರ್ಕ್‌ನಲ್ಲಿ ಗುರುವಾರ ಬಹಳ ಅರ್ಥಪೂರ್ಣವಾಗಿ ನಡೆಯಿತು.

Oct 11, 2024 - 15:54
Oct 11, 2024 - 16:32
 28
ಡೇ2ಡೇ ನ್ಯೂಸ್‌ & ಎಸ್‌ಎಲ್‌ ಶೇಟ್‌ ಸಹಯೋಗದ ಮುದ್ದುಕೃಷ್ಣ ಫೋಟೊ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ನಟಿ ಗಾನ ಭಟ್‌ 
ಡೇ2ಡೇ ನ್ಯೂಸ್‌ & ಎಸ್‌ಎಲ್‌ ಶೇಟ್‌ ಸಹಯೋಗದ ಮುದ್ದುಕೃಷ್ಣ ಫೋಟೊ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ನಟಿ ಗಾನ ಭಟ್‌ 
ಡೇ2ಡೇ ನ್ಯೂಸ್‌ & ಎಸ್‌ಎಲ್‌ ಶೇಟ್‌ ಸಹಯೋಗದ ಮುದ್ದುಕೃಷ್ಣ ಫೋಟೊ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ನಟಿ ಗಾನ ಭಟ್‌ 
ಡೇ2ಡೇ ನ್ಯೂಸ್‌ & ಎಸ್‌ಎಲ್‌ ಶೇಟ್‌ ಸಹಯೋಗದ ಮುದ್ದುಕೃಷ್ಣ ಫೋಟೊ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ನಟಿ ಗಾನ ಭಟ್‌ 
ಡೇ2ಡೇ ನ್ಯೂಸ್‌ & ಎಸ್‌ಎಲ್‌ ಶೇಟ್‌ ಸಹಯೋಗದ ಮುದ್ದುಕೃಷ್ಣ ಫೋಟೊ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ನಟಿ ಗಾನ ಭಟ್‌ 

ಡೇ2ಡೇ ನ್ಯೂಸ್‌ & ಎಸ್‌ಎಲ್‌ ಶೇಟ್‌ ಸಹಯೋಗದ ಮುದ್ದುಕೃಷ್ಣ ಫೋಟೊ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ನಟಿ ಗಾನ ಭಟ್‌

ಮಕ್ಕಳು-ಪೋಷಕರು ಮಾನಸ ವಾಟರ್‌ ಪಾರ್ಕ್‌ನಲ್ಲಿ ಇಡೀ ದಿನ ಎಂಜಾಯ್‌ ಮಾಡಿದ ಅವಿಸ್ಮರಣೀಯ ಕಾರ್ಯಕ್ರಮ

ಮಂಗಳೂರು: ಡೇ2ಡೇ ನ್ಯೂಸ್‌ ಮಾಧ್ಯಮ ಸಂಸ್ಥೆಯು ಎಸ್‌ಎಲ್‌ ಶೇಟ್‌ ಡೈಮಂಡ್‌ ಹೌಸ್‌ ಸಹಯೋಗದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮವು ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿರುವ ಮಾನಸ ವಾಟರ್‌ ಪಾರ್ಕ್‌ನಲ್ಲಿ ಗುರುವಾರ ಬಹಳ ಅರ್ಥಪೂರ್ಣವಾಗಿ ನಡೆಯಿತು.

ಡೇ2ಡೇ ನ್ಯೂಸ್‌ನ ಈ ಚೊಚ್ಚಲ ಕೃಷ್ಣ ವೇಷ ಸ್ಪರ್ಧೆಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ನಗದು ಬಹುಮಾನ ಹಾಗೂ ಸಮಾಧಾನಕರ ಬಹುಮಾನ ಪಡೆದಿರುವ ಒಟ್ಟು 16 ಮಕ್ಕಳಿಗೆ ಹಾಗೂ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ 381 ಮಕ್ಕಳಿಗೂ ಪ್ರಶಂಸಾ ಪತ್ರ ನೀಡುವ ಈ ಕಾರ್ಯಕ್ರಮವು ಮಕ್ಕಳು ಹಾಗೂ ಪೋಷಕರ ಪಾಲಿಗೆ ಅತ್ಯಂತ ಸ್ಮರಣೀಯ ಕಾರ್ಯಕ್ರಮವನ್ನಾಗಿಸುವುದು ಆಯೋಜಕರ ಉದ್ದೇಶವಾಗಿತ್ತು. ಅದಕ್ಕಾಗಿ ಬಹುಮಾನವನ್ನು ಪಡೆದ ಬಳಿಕ ಮಕ್ಕಳು ಇಡೀದಿನ ಮಾನಸ ವಾಟರ್‌ ಪಾರ್ಕ್‌ನಲ್ಲಿ ನೀರಿನಲ್ಲಿ ಆಟವಾಡುವ ಮೂಲಕ ಅವರೆಲ್ಲವೂ ಆ ಖುಷಿಗೆ ಸಾಕ್ಷಿಯಾಗಿದ್ದರು. ಇದಕ್ಕಾಗಿ ಮಾನಸ ವಾಟರ್‌ ಪಾರ್ಕ್‌ ಸಂಸ್ಥೆಯವರು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಮಕ್ಕಳಿಗೂ ಉಚಿತ ಪ್ರವೇಶ ಹಾಗೂ ಪೋಷಕರಿಗೆ ಶೇ.50ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪೋಷಕರೊಂದಿಗೆ ಆಗಮಿಸುವ ಮೂಲಕ ಈ ಬಹುಮಾನ ವಿತರಣಾ ಕಾರ್ಯಕ್ರಮದ ಯಶಸ್ವಿಗೂ ಕಾರಣರಾದರು.

ಈ ಬಹುಮಾನ ವಿತರಣಾ ಸಮಾರಂಭವನ್ನು ಕನ್ನಡ, ತುಳು, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಹಾಗೂ ವೆಬ್‌ಸೀರಿಸ್‌ನಲ್ಲಿ ನಟಿಸಿರುವ ಕರಾವಳಿಯ ಬೆಡಗಿ ಗಾಯ ಭಟ್‌ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪೋಷಕರು ಹೆಚ್ಚು ಆಸಕ್ತಿ ವಹಿಸಿದ ಕಾರಣ ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳ ಫೋಟೊಗಳು ಅದ್ಭುತವಾಗಿ ಮೂಡಿ ಬಂದಿದೆ. ಈ ಹಿನ್ನಲೆಯಲ್ಲಿ ವಿಜೇತ ಮಕ್ಕಳಿಗೆ ಅಭಿನಂದನೆ ಸಲ್ಲಿಸುವ ಜತೆಗೆ ಹೀಗೊಂದು ವಿನೂತನ ಸ್ಪರ್ಧೆ ಆಯೋಜಿಸಿದ ಡೇ2ಡೇ ನ್ಯೂಸ್‌ ಸಂಸ್ಥೆಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ನಮಗೆ ಸುದ್ದಿಯನ್ನು ಸುಧೀರ್ಘವಾಗಿ ಓದಿಕೊಂಡು ಕುಳಿತುಕೊಳ್ಳುವಷ್ಟು ಸಮಯದ ಕೊರತೆ ಇದೆ. ಹೀಗಿರುವಾಗ, ಕರ್ನಾಟಕದಲ್ಲಿ ನಮ್ಮ ತುಳುನಾಡಿನವರು ಸೇರಿಕೊಂಡು ವಿಭಿನ್ನ ರೀತಿಯ ಡೇ2ಡೇ ನ್ಯೂಸ್‌ನ್ನು ಆರಂಭಿಸಿರುವುದು ನಿಜಕ್ಕೂ ಖುಷಿ ತಂದಿದೆ. ನಾನು ಕೂಡ ಡೇ2ಡೇ ನ್ಯೂಸ್‌ ಡೌನ್‌ಲೋಡ್‌ ಮಾಡಿಕೊಂಡು ನೋಡಿದ್ದು, ಸುದ್ದಿಗಳನ್ನು ಕೇವಲ 65 ಪದಗಳನ್ನು ನೀಡುವ ಮೂಲಕ ಪ್ರತಿ ನ್ಯೂಸ್‌, ವಿಡಿಯೋವನ್ನು ಸ್ಕ್ರೋಲ್‌ ಮಾಡಿಕೊಂಡು ನೋಡುವುದಕ್ಕೆ ಬಹಳ ಸುಲಭವೆನಿಸುತ್ತದೆ. ಡೇ2ಡೇ ನ್ಯೂಸ್‌ ಸ್ಟಾರ್ಟಪ್‌ ಕರ್ನಾಟಕದಲ್ಲಿ ದೊಡ್ಡ ಡಿಜಿಟಲ್‌ ಮಾಧ್ಯಮ ಸಂಸ್ಥೆಯಾಗಿ ಬೆಳೆಯಲಿ ಎಂದು ಗಾನ ಭಟ್‌ ಅವರು ಶುಭ ಹಾರೈಸಿದರು.

ಎಸ್‌ಎಲ್‌ ಶೇಟ್‌ ಡೈಮಂಡ್‌ ಹೌಸ್‌ ಲೇಡಿಹಿಲ್‌ ಮಾಲೀಕರಾದ ರವೀಂದ್ರ ಶೇಟ್‌ ಅವರು ಮಾತನಾಡಿ, ಡೇ2ಡೇ ನ್ಯೂಸ್‌ನವರು ಮುದ್ದು ಮಕ್ಕಳ ಈ ಫೋಟೊ ಸ್ಪರ್ಧೆಯನ್ನು ನಮ್ಮ ಸಂಸ್ಥೆ ಜತೆ ಆಯೋಜಿಸಿರುವುದು ಬಹಳ ಖುಷಿ ತಂದಿದೆ. ಅದರಲ್ಲಿಯೂ ಮಾನಸ ವಾಟರ್‌ ಪಾರ್ಕ್‌ನಲ್ಲಿ ಹೀಗೊಂದು ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮುದ್ದು ಮಕ್ಕಳ ಖುಷಿಯನ್ನು ಹಿಮ್ಮಡಿಗೊಳಿಸುವ ಈ ಬಹುಮಾನ ವಿತರಣಾ ಸಮಾರಂಭ ನಿಜಕ್ಕೂ ಅರ್ಥಪೂರ್ಣವೆನಿಸಿದೆ. ಡೇ2ಡೇ ನ್ಯೂಸ್‌ ಕರ್ನಾಟಕದಲ್ಲೇ ದೊಡ್ಡ ಡಿಜಿಟಲ್‌ ಮಾಧ್ಯಮ ಸಂಸ್ಥೆಯಾಗಿ ಬೆಳೆಯಲಿ ಎಂದರು.

ಮಾನಸ ವಾಟರ್‌ ಪಾರ್ಕ್‌ನ ಎಂಡಿ ಜಯೇಶ್‌ ಸಬ್ಯಾಸ್ಟಿಯನ್‌ ಮಾತನಾಡಿ, ಮಾನಸ ವಾಟರ್‌ ಪಾರ್ಕ್‌ಗೆ ಬರುವ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಡೀ ದಿನ ಎಂಜಾಯ್‌ ಮಾಡುವುದಕ್ಕೆ ಕರ್ನಾಟಕದ ಅತಿದೊಡ್ಡ ವೇವ್‌ಪೂಲ್‌ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳು ಇಲ್ಲಿವೆ. ಇಂಥಹ ಪರಿಸರದಲ್ಲಿ ಡೇ2ಡೇ ನ್ಯೂಸ್‌ ಮುದ್ದು ಮಕ್ಕಳಿಗೆ ಬಹುಮಾನ ನೀಡುವ ಕಾರ್ಯಕ್ರಮನ್ನು ಬಹಳ ಔಚಿತ್ಯಪೂರ್ಣವಾಗಿ ಆಯೋಜಿಸಿದ್ದು, ಈ ಮಾಧ್ಯಮ ಸಂಸ್ಥೆ ಕೂಡ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಡೀನೆಟ್‌ ಪ್ರೈವೆಟ್‌ ಲಿಮಿಟೆಡ್‌ನ ಮಾಲೀಕರಾದ ಸಂದೇಶ್‌ ಡಿ. ಪೂಜಾರಿ ಹಾಗೂ ಡೇ2ಡೇ ನ್ಯೂಸ್‌ನ ಸಿಇಒ ಸುರೇಶ್‌ ಪುದುವೆಟ್ಟು, ಸಂಸ್ಥೆ ಸಹೋದ್ಯೋಗಿಗಳು, ಮಾನಸ ವಾಟರ್‌ ಪಾರ್ಕ್‌ನ ನಿರ್ದೇಶಕರಾದ ಆಂಟ್ಯನಿ ಹಾಗೂ ಬಿಎನ್‌ಐನ ಪ್ರಮುಖರಾದ ಗಣೇಶ್‌ ಅವರು ಉಪಸ್ಥಿತರಿದ್ದರು. ಪ್ರಜ್ಞಾ ಓಡಿನ್ನಾಲಾ ಅವರು ಕಾರ್ಯಕ್ರಮ ನಿರೂಪಿಸಿದರು. 

ಸ್ಪರ್ಧೆ ವಿಜೇತ ಮಕ್ಕಳಿಗೆ ಸೀನಿಯರ್‌ & ಜ್ಯೂನಿಯರ್‌ ವಿಭಾಗದಲ್ಲಿ ಪ್ರಥಮ 5555ರೂ., ದ್ವಿತೀಯ 3333ರೂ. ನಗದು, ಬಂಪರ್‌ ಬಹುಮಾನವಾಗಿ ಎರಡೂ ವಿಭಾಗದಲ್ಲಿ ತಲಾ 5555ರೂ. ನಗದು ಜತೆಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಕೃಷ್ಣವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೂ ವೇದಿಕೆಯಲ್ಲೇ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಬಳಿಕ ಮಕ್ಕಳು ಹಾಗೂ ಪೋಷಕರು ಮಾನಸ ವಾಟರ್‌ ಪಾರ್ಕ್‌ನಲ್ಲಿ ಎಂಜಾಯ್‌ ಮಾಡಿದರು.