ದುಬೈ ಗಡಿನಾಡ ಉತ್ಸವ :ಕಾಸರಗೋಡು ಮೂಲದ ಉದ್ಯಮಿ ಶಿವಶಂಕರ ನೆಕ್ರಾಜೆ ಸೇರಿ ಹಲವು ಸಾಧಕರಿಗೆ ಸನ್ಮಾನ

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕ ಹಮ್ಮಿಕೊಂಡಿದ್ದ ಅದ್ದೂರಿ ಕಾರ್ಯಕ್ರಮ

Oct 16, 2024 - 12:21
Oct 16, 2024 - 12:39
ದುಬೈ ಗಡಿನಾಡ ಉತ್ಸವ :ಕಾಸರಗೋಡು ಮೂಲದ ಉದ್ಯಮಿ ಶಿವಶಂಕರ ನೆಕ್ರಾಜೆ ಸೇರಿ ಹಲವು ಸಾಧಕರಿಗೆ ಸನ್ಮಾನ

ಉದ್ಯಮಿ ಶಿವಶಂಕರ್‌ ನೆಕ್ರಾಜೆ ಅವರಿಗೆ ದುಬೈ ಗಡಿನಾಡ ಉತ್ಸವದಲ್ಲಿ ಸನ್ಮಾನಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕ ದುಬೈಯಲ್ಲಿ ಆಯೋಜಿಸಿದ್ದ ದುಬೈ ಗಡಿನಾಡ ಉತ್ಸವದಲ್ಲಿ ಯುವ ಉದ್ಯಮಿ, ಕಾಸರಗೋಡು ಮೂಲದ ಶಿವಶಂಕರ್‌ ನೆಕ್ರಾಜೆ ಅವರನ್ನು ಉದ್ಯಮ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಗೆ ಸನ್ಮಾನಿಸಲಾಯಿತು. ಯುಎಇ ಆಕ್ಮೇ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರೀಶ್‌ ಶೇರಿಗಾರ್‌ ಸೇರಿ ಹಲವು ಮಂದಿ ಗಣ್ಯರ ಸಮ್ಮುಖದಲ್ಲಿ ಶಿವಶಂಕರ್‌ ಅವರ ಸಾಧನೆ ಗುರುತಿಸಲಾಗಿದೆ. ಶಿವಶಂಕರ್‌ ಅವರು ದುಬೈನಲ್ಲಿ ಹಲವು ವರ್ಷಗಳಿಂದ ಉದ್ಯಮ ನಡೆಸುವ ಮೂಲಕ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ಸಮಾಜ ಸೇವಕ ಲಿತೇಶ್‌ ನಾಯ್ಕಾಪು, ಶಾರ್ಜಾದ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್‌ ಪೂಜಾರಿ, ವೈಎಸ್‌ಎಂ ಟೆಕ್ಸ್‌ಟೈಲ್ಸ್‌ ಎಲ್‌ಎಲ್‌ಸಿ ದುಬೈನ ಯೂಸುಫ್‌ ಸಾಗ್‌ ಹಾಗೂ ಬ್ಲ್ಯೂ ರಾಯಲ್‌ ಗ್ರೂಪ್‌ ದುಬೈನ ರೊನಾಲ್ಡ್‌ ಮಾರ್ಟಿಸ್‌ ಅವರನ್ನು ಕೂಡ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧನೆಗಾಗಿ ಅಭಿನಂದಿಸಲಾಯಿತು.

ಕಾಸರಗೋಡು ಹಾಗೂ ಕರಾವಳಿ ನೆಲದ ಕಲೆಗಳನ್ನು ಜಗತ್ತಿನಾದ್ಯಂತ ಪಸರಿಸುವ, ಗಡಿನಾಡಲ್ಲಿ ಕನ್ನಡ ಭಾಷೆಯನ್ನು ಉಳಿಸುವ ಹಾಗೂ ಬಹು ಭಾಷೆಗಳ ಸಂಗಮ ನೆಲದಲ್ಲಿ ವೈವಿದ್ಯ ಸಂಸ್ಕೃತಿ ಸಂವರ್ಧನೆಯ ಉದ್ದೇಶದೊಂದಿಗೆ ಕಾರ್ಯಾಚರಿಸುವ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಈಗಾಗಲೇ ಗಡಿಯ, ರಾಜ್ಯದ, ದೇಶದ ಎಲ್ಲೆಯನ್ನು ಮೀರಿ ಯುಎಇ, ಮಸ್ಕತ್ ಮೊದಲಾದೆಡೆಗಳಲ್ಲಿ ಘಟಕಗಳನ್ನು ಸ್ಥಾಪಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.  ಆ ಪ್ರಕಾರ ಮೂರನೇ ದುಬೈ ಗಡಿನಾಡ ಉತ್ಸವವನ್ನು ಯುಎಇಯ ಸಮಸ್ತ ಕನ್ನಡಿಗರ ಪಾಲ್ಗೊಳ್ಳುವಿಕೆಯೊಂದಿಗೆ ಅಂತಾರಾಷ್ಟ್ರೀಯ ಕನ್ನಡ ಉತ್ಸವವನ್ನಾಗಿ ಅದ್ಧೂರಿಯಾಗಿ ಆಚರಿಸಲಾಯಿತು.

ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣಬೇವಿನ ಮರದ, ಶಾಸಕರಾದ ಶ್ರೀ ಸತೀಶ್ ಸೈಲ್ ಹಾಗೂ ಎ.ಕೆ.ಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇಬ್ರಾಹಿಂ ಫಾರೂಖ್ ಕೆ.ಸಿ ರೋಡ್, ಸಂದೀಪ್ ಜೆ.ಅಂಚನ್ ಮುಲ್ಕಿ, ಶಿವರೆಡ್ಡಿ ಖ್ಯಾಡೆದ್, ರಶೀದ್ ಬಾಯಾರ್, ಅಯೂಬ್ ಅಟ್ಟೆಗೋಳಿ, ಸಿದ್ಧಿಖ್ ಅಜ್ಮಾನ್, ರಿಯಾಝ್ ಅಹಮ್ಮದ್ ಗುಲ್ ಫರಾಸ್, ಹನುಮಪ್ರಸಾದ್ ತಂಗಿರಾಳ, ಆಸಿಫ್ ಮೇಲ್ಪರಂಬ, ಅಬ್ದುಲ್ಲ ಕಾಂಡೆಲ್ ಪಚ್ಚಂಬಳ, ಎನ್.ಚನಿಯಪ್ಪ ನಾಯ್ಕ, ಮುನೀರ್ ಪಾರ ಕುೂಣೂರು, ಸಿರಾಜ್ ಗುದುರು ಮುಂತಾದವರು ಪಾಲ್ಗೊಂಡಿದ್ದರು.


ಹಿರಿಯ ಕನ್ನಡ ಪರ ಸಂಸ್ಥೆಯಾದ ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ, ದಿ ಸ್ಪೀಚ್ ಕ್ಲಿನಿಕ್ ದುಬೈ ಇವರನ್ನು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣಬೇವಿನ ಮರದ ಸನ್ಮಾನಿಸುವರು. ಶಾಸಕರಾದ ಶ್ರೀ ಸತೀಶ್ ಸೈಲ್ ಹಾಗೂ ಎ.ಕೆ.ಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇಬ್ರಾಹಿಂ ಫಾರೂಖ್ ಕೆ.ಸಿ ರೋಡ್, ಸಂದೀಪ್ ಜೆ.ಅಂಚನ್ ಮುಲ್ಕಿ, ಶಿವರೆಡ್ಡಿ ಖ್ಯಾಡೆದ್, ರಶೀದ್ ಬಾಯಾರ್, ಅಯೂಬ್ ಅಟ್ಟೆಗೋಳಿ, ಸಿದ್ಧಿಖ್ ಅಜ್ಮಾನ್, ರಿಯಾಝ್ ಅಹಮ್ಮದ್ ಗುಲ್ ಫರಾಸ್, ಹನುಮಪ್ರಸಾದ್ ತಂಗಿರಾಳ, ಆಸಿಫ್ ಮೇಲ್ಪರಂಬ, ಅಬ್ದುಲ್ಲ ಕಾಂಡೆಲ್ ಪಚ್ಚಂಬಳ, ಎನ್.ಚನಿಯಪ್ಪ ನಾಯ್ಕ, ಮುನೀರ್ ಪಾರ ಕುೂಣೂರು, ಸಿರಾಜ್ ಗುದುರು ಮುಂತಾದವರು ಅತಿಥಿಗಳಾಗಿ ಭಾಗವಹಿಸುವರು.