ಮಠ, ಎದ್ದೇಳು ಮಂಜುನಾಥ ಸೇರಿ ಹಲವು ಸಿನಿಮಾ ಕೊಟ್ಟ ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣು
ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಗುರುಪ್ರಸಾದ್ ಅವರು ಮೂರ್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೆಂಗಳೂರು: ಮಠ, ಎದ್ದೇಳು ಮಂಜುನಾಥ ಸೇರಿದಂತೆ ಕೆಲವು ಜನಪ್ರಿಯ ಸಿನಿಮಾಗಳನ್ನು ಕನ್ನಡ ಸಿನಿಮಾರಂಗಕ್ಕೆ ಕೊಟ್ಟಿರುವ ಖ್ಯಾತ ನಿರ್ದೇಶಕ ಹಾಗೂ ನಟ ಗುರುಪ್ರಸಾದ್(52) ಅವರು ಆತ್ಮಹತ್ಯೆಗೆ ಶರಣಾಗುವ ಮೂಲಕ ತಮ್ಮ ಜೀವನದ ಪಯಣವನ್ನು ಅಂತ್ಯಗೊಳಿಸಿದ್ದಾರೆ.
ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಗುರುಪ್ರಸಾದ್ ಅವರು ಮೂರ್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗುರುಪ್ರಸಾದ್ ಅವರು ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲೇ ಅವರ ಸಾವಿನ ಸುದ್ದಿಯು ಚಿತ್ರರಂಗವನ್ನು ದುಃಖ ಆವರಿಸುವಂತೆ ಮಾಡಿದೆ.
ಗುರುಪ್ರಸಾದ್ ಅವರು ಒಬ್ಬ ವಿಭಿನ್ನ ಚಿಂತನೆ-ನಿಲುವಿನ ವ್ಯಕ್ತಿಯಾಗಿ, ತಮಗೆ ಅನ್ನಿಸಿದ್ದನ್ನು ಸಮಾಜದ ಮುಂದೆ ನೇರವಾಗಿ ಹೇಳಿಕೊಳ್ಳುತ್ತಿದ್ದರು. ಕೊರೊನಾ ಸಾಂಕ್ರಾಮಿಕ ಕಾಣಿಸಿಕೊಂಡಿದ್ದಾಗ, ಜನರ(kannada film) ಆರೋಗ್ಯ ಕಾಪಾಡುವುದಕ್ಕೆ ನಿರ್ಲಕ್ಷ್ಯ ವಹಿಸಿರುವುದಾಗಿ ಹೇಳಿ ಗುರುಪ್ರಸಾದ್ ಅವರು ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ, ಹಲವು ಸಲ ಈ ರೀತಿಯ ನೇರ ಹೇಳಿಕೆಗಳಿಂದಾಗಿ ವಿವಾದಗಳನ್ನು ಕೂಡ ಮೈಮೇಲೆ ಎಳೆದುಕೊಂಡಿದ್ದರು.
ಗುರುಪ್ರಸಾದ್ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ‘ಮಠ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಗುರುಪ್ರಸಾದ್ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಕೂಡ ಪಡೆದಿದ್ದರು. ಅದಾದ ಬಳಿಕ ನಿರ್ದೇಶಿಸಿದ ‘ಎದ್ದೇಳು ಮಂಜುನಾಥ’ ಭಾರಿ ದೊಡ್ಡ ಹಿಟ್ ಆಯ್ತು, ಕಲ್ಟ್ ಕಾಮಿಡಿ ಸಿನಿಮಾ ಆಗಿ ಗುರುತಿಸಲಾಗುತ್ತಿದೆ. ಅದಾದ ಬಳಿಕ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮಾಡಿದ್ದರು. ಈ ಸಿನಿಮಾ ಮೂಲಕ ಡಾಲಿ ಧನಂಜಯ್ ನಾಯಕನಾಗಿ ಪರಿಚಯಗೊಂಡರು. ಅದಾದ ಬಳಿಕ 2017 ರಲ್ಲಿ ‘ಎರಡನೇ ಸಲ’ ನಿರ್ದೇಶಿಸಿದರು. ಆ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತ್ತು.
ಇದಾದ ಬಳಿಕ ಅವರು ನಿರ್ದೇಶನ ಮಾಡಿದ್ದ ಇತ್ತೀಚೆಗಿನ ಸಿನಿಮಾ ‘ರಂಗನಾಯಕ’ ಹೀನಾಯ ಸೋಲು ಕಂಡಿತ್ತು. ‘ರಂಗನಾಯಕ’ ಸಿನಿಮಾದ ಫ್ಲಾಪ್ ಬಳಿಕ ಗುರುಪ್ರಸಾದ್ ಸಾಲದ ಸುಳಿಗೆ ಸಿಲುಕಿದ್ದರು. ಈ ನಡುವೆ ಮೊದಲ ಹೆಂಡತಿಯಿಂದ ದೂರವಾಗಿ ಕೆಲವು ತಿಂಗಳ ಹಿಂದೆಯಷ್ಟೇ 2ನೇ ಮದುವೆ ಕೂಡ ಮಾಡಿಕೊಂಡಿದ್ದರು. (director Guruprasad)
1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದರು.
ಜಗ್ಗೇಶ್ ಜತೆಗೆ ಉತ್ತಮ ಒಡನಾಟ
‘ಗುರುಪ್ರಸಾದ್ ಬಹಳ ಒಳ್ಳೆಯ ನಿರ್ದೇಶಕ, ಪ್ರತಿಭಾಶಾಲಿ ಅವರ ಬರವಣಿಗೆ ಶೈಲಿ ಬಹಳ ಭಿನ್ನವಾಗಿತ್ತು. ಅವರು ಮನಸ್ಸು ಮಾಡಿದ್ದರೆ ಏನೋ ಸಾಧಿಸಬಹುದಾಗಿತ್ತು. ಆದರೆ ಎರಡು ವಿಷಯಗಳು ಅವರ ಬೆಳವಣಿಗೆಯನ್ನು ತಡೆದವು. ಒಂದು ಮದ್ಯ ಮತ್ತು ಇನ್ನೊಂದು ಅಹಂ. ಅವೆರಡು ಇಲ್ಲದೇ ಹೋಗಿದ್ದರೆ ಗುರುಪ್ರಸಾದ್ ರಾಜ್ಯದ ಟಾಪ್ ನಿರ್ದೇಶಕ ಆಗಿರುತ್ತಿದ್ದರು’ ಎಂದಿದ್ದಾರೆ ಜಗ್ಗೇಶ್.(actor jaggesh)
‘ಮಠ’ ಸಿನಿಮಾ ಮಾಡಬೇಕಾದರೆ ಇದ್ದ ಗುರುಪ್ರಸಾದ್ ನನಗೆ ಈಗಲೂ ನೆನಪಿನಲ್ಲಿದೆ. ಆಗ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಕೈಯಲ್ಲಿ ಕೆಲವು ಪುಸ್ತಕ ಇರುತ್ತಿತ್ತು; ಅದೇ ಕೊನೆ-ಕೊನೆಗೆ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಬ್ಯಾಗಿನಲ್ಲಿ ಬುಕ್ ಬದಲು ನಾಲ್ಕು ಮದ್ಯದ ಬಾಟಲಿ ಇರುತ್ತಿದ್ದವು. ಬೆಳಿಗ್ಗೆಯಿಂದ ಸಂಜೆ ವರೆಗೂ ಅವರಿಂದ ಮದ್ಯದ ವಾಸನೆ ಹೋಗುತ್ತಲೇ ಇರಲಿಲ್ಲ. ಇದರ ಜೊತೆಗೆ ಅಹಂ, ಸಿಟ್ಟು ಸಹ ಜಾಸ್ತಿ ಇತ್ತು. ಗುರುಪ್ರಸಾದ್ ಯಾರ ಮಾತನ್ನು ಕೂಡ ಕೇಳುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ನಾನು ಸುಮಾರು 10 ವರ್ಷಗಳಿಂದ ಅವರಿಂದ ದೂರವಾಗಿದ್ದೆ. ಆದರೆ, ಸ್ನೇಹಿತರೆಲ್ಲ ಸೇರಿಕೊಂಡು ಮತ್ತೆ ಒಂದುಗೂಡಿಸಿಕೊಂಡು ರಂಗನಾಯಕ ಸಿನಿಮಾ ಮಾಡಿದರು. ಆದರೆ, ಸಿನಿಮಾ ಮಾಡುವುದಕ್ಕೆ 90 ಲಕ್ಷ ಹಣ ಪಡೆದು ಹಣ ಹಾಕಿದವರಿಗೂ ಅನ್ಯಾಯ ಮಾಡಿರುವುದಾಗಿ ಜಗ್ಗೇಶ್ ಗುರುಪ್ರಸಾದ್ ಅವರ ಇತ್ತೀಚಿನ ವರ್ತನೆ ಬಗ್ಗೆ ಹೇಳಿಕೊಂಡಿದ್ದಾರೆ.
3 ವರ್ಷದ ಮಗುವಿಗೆ ಸಹಾಯ ಮಾಡುತ್ತೇನೆ ಎಂದ ಜಗ್ಗೇಶ್
ಗುರುಪ್ರಸಾದ್ ಅವರ ಈಗಿನ ಸ್ಥಿತಿಗೆ ಕುಡಿತದ ಚಟವೇ ಕಾರಣ. ಗುರುಪ್ರಸಾದ್ ಅದ್ಭುತ, ಪ್ರತಿಭಾವಂತ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆತ ಯಾರ ಮಾತನ್ನು ಕೂಡ ಕೇಳುತ್ತಿರಲಿಲ್ಲ. ಗುರುಪ್ರಸಾದ್ ಅವರು 2ನೇ ಮದುವೆಯಾಗಿ ಮೂರು ವರ್ಷದ ಮಗುವಿದೆ. ಅದು ಈಗ ತಬ್ಬಲಿಯಾಗಿದ್ದು, ಅದಕ್ಕೆ ಖಂಡಿತವಾಗಿಯೂ ಏನಾದರೂ ಸಹಾಯ ಮಾಡಬೇಕೆಂಬ ಸಂಕಲ್ಪ ಮಾಡಿದ್ದೇನೆ. ಆದರೆ, ಗುರುಪ್ರಸಾದ್ ಅವರ ವರ್ತನೆ, ಮಾತು ಸರಿಯಾಗಿರಲಿಲ್ಲ. ಆಗಾಗ ಬಾಯಿಗೆ ಬಂದಂತೆ ಕುಡಿದು ಬೈಯುತ್ತಿದ್ದ. ಹೀಗಾಗಿ, ನಾನು ಅವನ ಸಹವಾಸದಿಂದ ದೂರವಿರುವುದಕ್ಕೆ ನಿರ್ಧರಿಸಿದ್ದೆ ಎನ್ನುತ್ತಾರೆ ಜಗ್ಗೇಶ್.
ಕೊನೆಯ ವಾಟ್ಸಾಪ್ ಚಾಟ್ ಏನು?
ಗುರುಪ್ರಸಾದ್ ಅವರು ಸಾವಿಗೂ ಮೊದಲು ಕೊನೆಯದಾಗಿ ಫ್ರೆಂಡ್ಸ್ ಫೋರಂʼನಲ್ಲಿ ಮಾಡಿರುವ ವಾಟ್ಸಾಪ್ ಚಾಟ್ ಬಹಿರಂಗವಾಗಿದೆ. “ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದೇನೆ, ಸದ್ಯ ವಿಶಾಂತ್ರಿ ಪಡೆದುಕೊಳ್ಳುತ್ತಿದ್ದೇನೆ. ದೀಪಾವಳಿ ಹಬ್ಬದ ನಂತರ ಸಿನಿಮಾ ಚಟುವಟಿಕೆ ಮುಂದುವರಿಸೋಣ ಎಂದು ತಿಳಿಸಿದ್ದರು. ಅ.26ರ ಸಂಜೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ಅ.31ರಂದು ಮತ್ತೆ ಸಿನಿಮಾ ಕುರಿತು ಅಪ್ಡೇಟ್ ಕೊಡುವುದಾಗಿ ತಿಳಿಸಿದ್ದರು. ಇನ್ನು ಕಳೆದ ತಿಂಗಳಷ್ಟೇ ಎದ್ದೇಳು ಮಂಜುನಾಥ-2 ಸಿನಿಮಾದ ಡಬ್ಬಿಂಗ್‌ನಲ್ಲಿ ಭೇಟಿಯಾಗಿದ್ದು, ನಂತರ ನನಗೆ ಕಾಲ್ ಮಾಡಿ ಹುಷಾರ್ ಇಲ್ಲ; ಬಿಪಿ ಶುಗರ್ ಜಾಸ್ತಿಯಾಗಿ ಆಸ್ಪತ್ರೆಗೆ ದಾಖಲಾಗುವುದಾಗಿ ಕಳೆದ ತಿಂಗಳು ಹೇಳಿದ್ದರು. ಅವರಿಗೆ ಬಿಪಿ ಹಾಗೂ ಚರ್ಮ ರೋಗದ ಸಮಸ್ಯೆ ಕೂಡ ಇತ್ತು ಎನ್ನುತ್ತಾರೆ ಗುರುಪ್ರಸಾದ್ ಸಂಬಂಧಿ ರಘು ದೀಕ್ಷಿತ್.