‘ಬಘೀರ’ ಚಿತ್ರದ ಆ ಒಂದು ದೃಶ್ಯಕ್ಕೆ ಟೀಕೆ
‘ರುಕ್ಮಿಣಿ ವಸಂತ್ಗೆ ನ್ಯಾಯ ಕೊಡಿಸಿ’
ನಟಿ ರುಕ್ಮಿಣಿ ವಸಂತ್ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಇದಕ್ಕೆಲ್ಲ ಕಾರಣ ಆಗಿದ್ದು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ. ಈ ಚಿತ್ರದಲ್ಲಿ ಪ್ರಿಯಾ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಈಗ ರುಕ್ಮಿಣಿ ವಸಂತ್ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ‘ಬಘೀರ’ ಚಿತ್ರ ಕೂಡ ಒಂದು. ಈ ಚಿತ್ರದ ಒಂದು ದೃಶ್ಯದ ಬಗ್ಗೆ ಅವರ ಅಭಿಮಾನಿಗಳಲ್ಲಿ ಅಪಸ್ವರ ಎದ್ದಿದೆ.‘ಬಘೀರ’ ಚಿತ್ರದ ಟ್ರೇಲರ್ ಅಕ್ಟೋಬರ್ 21ರಂದು ರಿಲೀಸ್ ಆಗಿದೆ. ಈ ಟ್ರೇಲರ್ನಲ್ಲಿ ಶ್ರೀಮುರಳಿ ಅವರು ರುಕ್ಮಿಣಿ ವಸಂತ್ ಕೆನ್ನೆಗೆ ಹೊಡೆಯೋ ದೃಶ್ಯ ಇದೆ. ಇದು ತಪ್ಪು ಎಂದು ಅನೇಕರು ಖಂಡಿಸಿದ್ದಾರೆ. ಈ ರೀತಿಯ ದೃಶ್ಯ ಇರಬಾರದಿತ್ತು ಎಂದು ಅವರ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಟೌನ್ ಹಾಲ್ ಎದುರು ನಿಂತು ಪ್ರತಿಭಟನೆ ಮಾಡುತ್ತಿರುವ ಫೋಟೋನ ಎಡಿಟ್ ಮಾಡಲಾಗಿದೆ. ಇದರಲ್ಲಿ ‘ರುಕ್ಮಣಿ ವಸಂತ್ಗೆ ನ್ಯಾಯ ಬೇಕು’ ಎಂದು ಬರೆಯಲಾಗಿದೆ. ‘ಆಫೀಸರ್ ಬಘೀರ ರುಕ್ಮಿಣಿ ವಸಂತ್ ಮೇಲೆ ಕೈ ಮಾಡಿದ್ದಾರೆ. ಟೌನ್ ಹಾಲ್ ಎದುರು ಪ್ರತಿಭಟನೆ ಮಾಡಲಾಗಿದೆ’ ಎಂದು ಕ್ಯಾಪ್ಶನ್ ನೀಡಲಾಗಿದೆ. ಇನ್ನೂ ಕೆಲವರು ಶ್ರೀಮುರಳಿಯನ್ನು ಪ್ರಶ್ನೆ ಮಾಡಿದ್ದಾರೆ.