ಎಚ್​​ಎಸ್​ಬಿಸಿ 160 ವರ್ಷ ಇತಿಹಾಸದಲ್ಲಿ ಸಿಎಫ್​ಒ ಆದ ಮೊದಲ ಮಹಿಳೆ

ಯುಕೆ ಮೂಲದ ಎಚ್​ಎಸ್​ಬಿಸಿ ಬ್ಯಾಂಕ್​ನ 159 ವರ್ಷ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಎಕ್ಸಿಕ್ಯೂಟಿವ್ ಹುದ್ದೆ ಅಲಂಕರಿಸಿದ್ದಾರೆ.

Oct 22, 2024 - 14:45
 3
ಎಚ್​​ಎಸ್​ಬಿಸಿ 160 ವರ್ಷ ಇತಿಹಾಸದಲ್ಲಿ ಸಿಎಫ್​ಒ ಆದ ಮೊದಲ ಮಹಿಳೆ

ಲಂಡನ್ : ಒಂದೂವರೆ ಶತಮಾನದಷ್ಟು ಹಳೆಯದಾದ ಎಚ್​ಎಸ್​ಬಿಸಿ ಹೋಲ್ಡಿಂಗ್ಸ್ ಸಂಸ್ಥೆಯ ಚೀಫ್ ಫೈನಾನ್ಷಿಯಲ್ ಆಫೀಸರ್ ಆಗಿ ಭಾರತ ಮೂಲದ ಪಾಮ್ ಕೌರ್ ನೇಮಕವಾಗಿದ್ದಾರೆ. ಹಲವು ಜಾಗತಿಕ ಪ್ರಮುಖ ಸಂಸ್ಥೆಗಳಿಗೆ ಭಾರತ ಮೂಲದ ಸಿಇಒಗಳೇ ಹಲವರಿದ್ದಾರೆ. ಇದರಲ್ಲೇನು ವಿಶೇಷ ಎನಿಸಬಹುದು. ಆದರೆ, ಪಾಮ್ ಕೌರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಯೂರೋಪ್​ನ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಚ್​ಎಸ್​ಬಿಸಿ ಸ್ಥಾಪನೆಯಾಗಿ 159 ವರ್ಷವಾಗಿದೆ. ಹದಿನಾರು ದಶಕಗಳಷ್ಟು ಸುದೀರ್ಘ ಇತಿಹಾಸ ಇರುವ ಎಚ್​ಎಸ್​ಬಿಸಿಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಎಕ್ಸಿಕ್ಯೂಟಿವ್ ಹುದ್ದೆ ಪಡೆದಿದ್ದಾರೆ. ಅದೂ ಆ ಸಾಧನೆ ಬಂದಿದ್ದು ಭಾರತ ಮೂಲದ ವ್ಯಕ್ತಿಯಿಂದ ಎಂಬುದು ಹೆಮ್ಮೆಯ ವಿಚಾರ.ಈ ಮುಂಚೆ ಸಿಎಫ್​ಒ ಆಗಿದ್ದ ಜಾರ್ಜಸ್ ಎಲೆಡೆರಿ  ಅವರು ಸಿಇಒ ಆಗಿ ಜವಾಬ್ದಾರಿ ಪಡೆದಿದ್ದರು. ಈ ವರ್ಷದಿಂದ ಸಿಎಫ್​ಒ ಸ್ಥಾನ ಹಾಗೇ ಉಳಿದುಕೊಂಡಿತ್ತು. 2013ರಿಂದಲೂ ಎಚ್​ಎಸ್​ಬಿಸಿ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ಪಾಮ್ ಕೌರ್ ಅವರ ಹೆಸರನ್ನು ಜಾರ್ಜಸ್ ಅವರೇ ಸೂಚಿಸಿದ್ದರು. ಅಕ್ಟೋಬರ್ 22, ಇಂದು ಕೌರ್ ಸಿಎಫ್​ಒ ಆಗಿ ನೇಮಕವಾಗಿದ್ದಾರೆ.