ಆಳ್ವಾಸ್ ನಲ್ಲಿ ಮರಾಠಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಗಾರ; ನಿರಂತರ ಅಧ್ಯಯನವೇ ಯಶಸ್ಸಿನ ಮೂಲಮಂತ್ರ: ಎಚ್. ರಾಜೇಶ್ ಪ್ರಸಾದ್
ಯುವ ಜನತೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಂಭೀರವಾಗಿ ತಯಾರಿ ನಡೆಸಬೇಕು. ಶಿಸ್ತು ಆತ್ಮವಿಶ್ವಾಸ ಮತ್ತು ನಿರಂತರ ಅಧ್ಯಯನವೇ ಯಶಸ್ಸಿನ ಮೂಲ ಮಂತ್ರ ಎಂದು ಹೇಳಿದರು. ಉನ್ನತ ಶೈಕ್ಷಣಿಕ ಸಾಧನೆಯೊಂದಿಗೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬೆಳೆಯುತ್ತ ಯುವಕರು ದೃಢಸಂಕಲ್ಪದೊಂದಿಗೆ ಮುಂದಾಗಬೇಕೆಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಮಾರ್ಗದರ್ಶನ ಮತ್ತು ಸಂವಾದ ಸಮುದಾಯದ ಯುವಜನಾಂಗ ಇದಕ್ಕೆ ಬೇಕಾದ ಸೂಕ್ತ ತರಬೇತಿಯನ್ನು ಪಡೆದುಕೊಂಡು ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗುವಂತೆ IAS ಆಗಿರುವ ಎಚ್. ರಾಜೇಶ್ ಪ್ರಸಾದ್ ಕರೆ
ಮೂಡುಬಿದಿರೆ: ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಕೆನರಾ ಬ್ಯಾಂಕ್ ಬೆಂಗಳೂರು ಹಾಗೂ ಮರಾಟಿ ಸಮಾಜ ಸೇವಾ ಸಂಘ ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಫೆ.1ರ ಭಾನುವಾರ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶೈಕ್ಷಣಿಕ ಕಾರ್ಯಾಗಾರ ನಡೆಯಿತು.
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಚಂಡೀಗಢ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಒಕ್ಕೂಟದ ಗೌರವಾಧ್ಯಕ್ಷರಾದ IAS ಹೆಚ್. ರಾಜೇಶ್ ಪ್ರಸಾದ್ ಅವರು, ಯುವ ಜನತೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಂಭೀರವಾಗಿ ತಯಾರಿ ನಡೆಸಬೇಕು. ಶಿಸ್ತು ಆತ್ಮವಿಶ್ವಾಸ ಮತ್ತು ನಿರಂತರ ಅಧ್ಯಯನವೇ ಯಶಸ್ಸಿನ ಮೂಲ ಮಂತ್ರ ಎಂದು ಹೇಳಿದರು. ಉನ್ನತ ಶೈಕ್ಷಣಿಕ ಸಾಧನೆಯೊಂದಿಗೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬೆಳೆಯುತ್ತ ಯುವಕರು ದೃಢಸಂಕಲ್ಪದೊಂದಿಗೆ ಮುಂದಾಗಬೇಕೆಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಮಾರ್ಗದರ್ಶನ ಮತ್ತು ಸಂವಾದ ಸಮುದಾಯದ ಯುವಜನಾಂಗ ಇದಕ್ಕೆ ಬೇಕಾದ ಸೂಕ್ತ ತರಬೇತಿಯನ್ನು ಪಡೆದುಕೊಂಡು ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಅಧ್ಯಕ್ಷ ಶ್ರೀ ಡಾ. ಕೆ.ಸುಂದರ ನಾಯ್ಕ್ ಮಾತನಾಡಿ ಉದಾತ್ತ ಆಶಯದೊಂದಿಗೆ ಬದುಕಿನ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದಾಗ ವೃತ್ತಿಜೀವನ ಹಾಗೂ ಸಾಮಾಜಿಕ ಜೀವನ ಎರಡರಲ್ಲಿಯೂ ಸಾರ್ಥಕತೆಯನ್ನು ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಮರಾಟಿ ಸಮುದಾಯಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಶ್ರೀ ರಾಮ ನಾಯ್ಕ್ ಕೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್, ಜನರಲ್ ಮ್ಯಾನೇಜರ್ ಶ್ರೀ ರಾಮ ನಾಯ್ಕ್ ಕೆ, ಸನ್ಮಾನ ಸ್ವೀಕರಿಸಿ ಬ್ಯಾಂಕ್ , ರೈಲ್ವೆ ಹಾಗೂ ಇನ್ನಿತರ ಪರೀಕ್ಷೆಗಳನ್ನು ನಿರಂತರವಾಗಿ ಎದುರಿಸಬೇಕು, ನಿರಂತರ ಪ್ರಯತ್ನದಿಂದ ಇಂತಹ ಇಲಾಖೆಗಳಲ್ಲಿ ಉದ್ಯೋಗವನ್ನು ಪಡೆಯುವಲ್ಲಿ ಸಫಲತೆ ಕಾಣಬಹುದು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ವ್ಯಕ್ತಿತ್ವವಿಕಸನ ತರಬೇತುದಾರರಾದ ಕೊಂಡಳ್ಳಿ ಶ್ರೀ ಪ್ರಭಾಕರ್ ಶೆಟ್ಟಿಯವರು ವ್ಯಕ್ತಿತ್ವ ವಿಕಸನ ಹಾಗೂ ಜೀವನ ಮೌಲ್ಯಗಳ ಬಗ್ಗೆ ತಿಳಿಸುತ್ತಾ ಪರಿಪೂರ್ಣ ಸಿದ್ದತೆಯೊಂದಿಗೆ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸುವ ಬಗೆಯನ್ನು ತಿಳಿಸಿದರು. ಒಕ್ಕೂಟದ ಪ್ರದಾನ ಕಾರ್ಯದರ್ಶಿ ಶ್ರೀ ವಾಸು ನಾಯ್ಕ್, ಮೂಡಬಿದ್ರೆ ಮರಾಟಿ ಸಂಘದ ಅಧ್ಯಕ್ಷರಾದ ಶ್ರೀ ಶಂಕರ್ ನಾಯ್ಕ ಉಪಸ್ಥಿತರಿದ್ದರು.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಗಾರದಲ್ಲಿ ಭಾಗವಹಿಸಿದರು. ಶ್ರೀಮತಿ ಶೋಭಾ ನಾಯ್ಕ್ ಮತ್ತು ಬಳಗದವರು ಪ್ರಾರ್ಥಿಸಿದರು.
ಒಕ್ಕೂಟದ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ ಸ್ವಾಗತಿಸಿದರು.
ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಸಂಘಟಕ ಶ್ರೀ ಪ್ರವೀಣ್ ಕುಮಾರ್ ಮುಗುಳಿ ಅತಿಥಿಗಳ ಪರಿಚಯ ಮಾಡಿದರು. ಜೊತೆ ಕಾರ್ಯದರ್ಶಿ ಶ್ರೀ ಪ್ರಕಾಶ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ವಾಸು ನಾಯ್ಕ್ ವಂದಿಸಿದರು.


