IPL 2026: 77 ಸ್ಥಾನ, 350 ಆಟಗಾರರು, 237.55 ಕೋಟಿ ಬಜೆಟ್

Dec 15, 2025 - 20:32

IPL 2026 ರ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಇದು ಮಿನಿ ಹರಾಜಾಗಿರುವ ಕಾರಣ, ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಸಲುವಾಗಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿವೆ. ಎಲ್ಲಾ ಫ್ರಾಂಚೈಸಿಗಳಿಂದ ಒಟ್ಟಾರೆ 77 ಸ್ಥಾನಗಳು ಖಾಲಿ ಇದ್ದು, ಅಂದರೆ ಈ ಮಿನಿ ಹರಾಜಿನಲ್ಲಿ ಗರಿಷ್ಠ 77 ಆಟಗಾರರು ಹರಾಜಾಗಲಿದ್ದಾರೆ. ಈ 77 ಆಟಗಾರರಲ್ಲಿ ಒಬ್ಬರಾಗಲು 350 ಆಟಗಾರರು ಸ್ಪರ್ಧಿಸಲಿದ್ದಾರೆ. ಈ ಮಿನಿ ಹರಾಜಿನ ಬಜೆಟ್ ಒಟ್ಟು 237.55 ಕೋಟಿ ರೂಗಳಾಗಿದ್ದು, ಇಷ್ಟು ಮೊತ್ತದೊಳಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದಲ್ಲಿರುವ ಖಾಲಿ ಸ್ಥಾನಗಳನ್ನು ಭರ್ತಿ ಮಾಡಬೇಕಿದೆ.

ಐಪಿಎಲ್ 2026 ಮಿನಿ ಹರಾಜಿಗೆ 1,390 ಆಟಗಾರರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಬಿಸಿಸಿಐ 350 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಶಾರ್ಟ್‌ಲಿಸ್ಟ್ ಮಾಡಿದವರಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಸೇರಿದ್ದಾರೆ.

ಯಾವ ತಂಡದ ಬಳಿ ಎಷ್ಟು ಹಣವಿದೆ?

  • ಕೆಕೆಆರ್ 64.30 ಕೋಟಿ
  • ಸಿಎಸ್​ಕೆ 43.40 ಕೋಟಿ
  • ಎಸ್​ಆರ್​ಹೆಚ್ 25.50 ಕೋಟಿ
  • ಲಕ್ನೋ 22.95 ಕೋಟಿ
  • ಆರ್​ಸಿಬಿ 16.40 ಕೋಟಿ
  • ರಾಜಸ್ಥಾನ್ 16.05 ಕೋಟಿ
  • ಪಂಜಾಬ್ 11.50 ಕೋಟಿ
  • ಗುಜರಾತ್ ಟೈಟನ್ಸ್ 12.90 ಕೋಟಿ
  • ಟ್ರೆಡ್ ವಿಂಡೋ ಮೂಲಕ ಖರೀದಿಯಾದ ಆಟಗಾರರು ಯಾರು?

    ಐಪಿಎಲ್ 2026 ರ ಹರಾಜಿಗೂ ಮೊದಲು ಒಟ್ಟು ಎಂಟು ಆಟಗಾರರನ್ನು ಟ್ರೆಡ್ ವಿಂಡೋ ಮೂಲಕ ಖರೀದಿ ಮಾಡಲಾಗಿದೆ. ಇದರಲ್ಲಿ ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಮೊಹಮ್ಮದ್ ಶಮಿ ಮತ್ತು ಅರ್ಜುನ್ ತೆಂಡೂಲ್ಕರ್ ಹೆಸರುಗಳು ಸೇರಿವೆ.

  • ಮುಂಬೈ 2.75 ಕೋಟಿ