ಡ್ರಗ್ಸ್ ಸೇವನೆ : ಇಬ್ಬರ ಬಂಧನ
ಮಂಗಳೂರು, ಮಾ.18(ಕ.ವಾ):- ಅಬಕಾರಿ ಅಧಿಕಾರಿಗಳು ತಲಪಾಡಿ ಕೆ.ಸಿ ರೋಡ್ ಬಳಿ ಮಂಗಳವಾರ ದಾಳಿ ನಡೆಸಿದ್ದು, ನಿಶಾಧ್ ಬಿನ್ ಅಬ್ದುಲ್ ಕರೀಮ್ ಹಾಗೂ ಅಹ್ಮದ್ ಇಮ್ರಾನ್ ಬಿನ್ ಅಬ್ದುಲ್ ಹಕೀಮ್ ಎಂಬ ಇಬ್ಬರು ಎಂ.ಡಿ.ಎಂ.ಎ ಮಾದಕದ್ರವ್ಯ ಸೇವಿಸುತ್ತಿದ್ದ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಅಬಕಾರಿ ಉಪಧೀಕ್ಷಕಿ ಗಾಯತ್ರಿ ಸಿ ಹೆಚ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ದತ್ತಗುರು ಹಾಗೂ ಉಪ ನಿರೀಕ್ಷಕ ಹರೀಶ್ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.
Day2Day News Bureau
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.