ಭಾರತದ ವಸ್ತುಗಳಿಗೆ 50% ಸುಂಕ ವಿಧಿಸಲು ಮುಂದಾದ ಮೆಕ್ಸಿಕೋ

ಅಮೆರಿಕ ಸುಂಕ ಸಮರದ ಬೆನ್ನಲ್ಲೇ ಈಗ ಮೆಕ್ಸಿಕೋ ಭಾರತದ ಮೇಲೆ 50% ಸುಂಕ ವಿಧಿಸಲು ಮುಂದಾಗಿದೆ. 2026 ರಿಂದ ಭಾರತ, ಚೀನಾ ಸೇರಿದಂತೆ ಏಷ್ಯ ದೇಶಗಳಿಂದ ಬರುವ ಉತ್ಪನ್ನಗಳಿಗೆ 50% ಸುಂಕ ವಿಧಿಸುವ ಮಸೂದೆಗೆ ಅಲ್ಲಿನ ಮೇಲ್ಮನೆ ಒಪ್ಪಿಗೆ ನೀಡಿದೆ.

Dec 12, 2025 - 11:48
ಭಾರತದ ವಸ್ತುಗಳಿಗೆ 50% ಸುಂಕ ವಿಧಿಸಲು ಮುಂದಾದ ಮೆಕ್ಸಿಕೋ
mexico

ಅಮೆರಿಕ ಸುಂಕ ಸಮರದ ಬೆನ್ನಲ್ಲೇ ಈಗ ಮೆಕ್ಸಿಕೋ ಭಾರತದ ಮೇಲೆ 50% ಸುಂಕ ವಿಧಿಸಲು ಮುಂದಾಗಿದೆ. 2026 ರಿಂದ ಭಾರತ, ಚೀನಾ ಸೇರಿದಂತೆ ಏಷ್ಯ ದೇಶಗಳಿಂದ ಬರುವ ಉತ್ಪನ್ನಗಳಿಗೆ 50% ಸುಂಕ ವಿಧಿಸುವ ಮಸೂದೆಗೆ ಅಲ್ಲಿನ ಮೇಲ್ಮನೆ ಒಪ್ಪಿಗೆ ನೀಡಿದೆ. ಮಸೂದೆಯು ಪರವಾಗಿ 76, ವಿರುದ್ಧವಾಗಿ 5 ಮಂದಿ ಸದಸ್ಯರು ಮತ ಚಲಾಯಿಸುವ ಮೂಲಕ ಮಸೂದೆ ಪಾಸ್‌ ಆಗಿದೆ. ಡೊನಾಲ್ಡ್ ಟ್ರಂಪ್ ಅವರ ‘ಅಮೇರಿಕಾ ಫಸ್ಟ್’ ಕಾರ್ಯಸೂಚಿಯಂತೆಯೇ ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಸ್ಥಳೀಯ ಉದ್ಯಮಕ್ಕೆ ಆದ್ಯತೆ ನೀಡಲು ಏಷ್ಯನ್ ಆಮದುಗಳ ಮೇಲೆ ಹೊಸ ಸುಂಕಗಳನ್ನು ವಿಧಿಸುತ್ತಿದ್ದಾರೆ.

ಮೆಕ್ಸಿಕೋದೊಂದಿಗೆ ವ್ಯಾಪಾರ ಒಪ್ಪಂದವನ್ನು ಹೊಂದಿರದ ಏಷ್ಯನ್ ದೇಶಗಳ 1,400 ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ 5% ರಿಂದ 50% ವರೆಗಿನ ಸುಂಕ ವಿಧಿಸುವ ಮಸೂದೆಗೆ ಬುಧವಾರ ದೇಶದ ಸೆನೆಟ್ ಅಂತಿಮ ಅನುಮೋದನೆ ನೀಡಿತು.

ಕೆಳಮನೆಯಿಂದ ಮೊದಲೇ ಅಂಗೀಕರಿಸಲ್ಪಟ್ಟ ಈ ಮಸೂದೆ ಚೀನಾ, ಭಾರತ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳಿಂದ ಬರುವ ಆಟೋ ಭಾಗಗಳು, ಜವಳಿ, ಪ್ಲಾಸ್ಟಿಕ್‌ಗಳು, ಬಟ್ಟೆ ಮತ್ತು ಉಕ್ಕಿನಂತಹ ಸರಕುಗಳ ಮೇಲೆ 50% ವರೆಗೆ ಸುಂಕ ಪರಿಣಾಮ ಬೀರುವ ಸಾಧ್ಯತೆಯಿದೆ.

ಭಾರತದಿಂದ ಮೆಕ್ಸಿಕೋಗೆ ಸಾಫ್ಟ್‌ವೇರ್, ಔಷಧಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತವೆ. ಮೆಕ್ಸಿಕೊದ ಆರ್ಥಿಕ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಮೆಕ್ಸಿಕನ್ ಮಾರುಕಟ್ಟೆಗೆ ಕಳೆದ ವರ್ಷ ಭಾರತ ಒಟ್ಟು 1.3 ಬಿಲಿಯನ್ ಡಾಲರ್‌ ಮೌಲ್ಯದ ಆಟೋಮೊಬೈಲ್‌ಗಳು, 242 ಮಿಲಿಯನ್‌ ಡಾಲರ್‌ ಮೌಲ್ಯದ ದೂರವಾಣಿಗಳನ್ನು ರಫ್ತು ಮಾಡಿತ್ತು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.