ದೇಶದಾದ್ಯಂತ ದೀಪಾವಳಿ: ಸಂಪ್ರದಾಯಗಳು - ಆಚರಣೆಗಳು ಹಲವು, ಆಶಯ ಒಂದೇ!

Diwali: ದೀಪಾವಳಿಯು ದೀಪಗಳ ಹಬ್ಬ ಮಾತ್ರ ಅಲ್ಲ, ಮನೆ ಮನಸ್ಸುಗಳನ್ನು ಬೆಳಗುವ ಹಬ್ಬ. ಭಾರತ ದೇಶದಲ್ಲಿ ಅಷ್ಟೆ ಅಲ್ಲದೇ ಪ್ರಪಂಚದಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.

Nov 8, 2026 - 17:48
Nov 8, 2026 - 17:48
ದೇಶದಾದ್ಯಂತ ದೀಪಾವಳಿ: ಸಂಪ್ರದಾಯಗಳು -  ಆಚರಣೆಗಳು ಹಲವು, ಆಶಯ ಒಂದೇ!

ದೀಪಾವಳಿಯು ದೀಪಗಳ ಹಬ್ಬ ಮಾತ್ರ ಅಲ್ಲ, ಮನೆ ಮನಸ್ಸುಗಳನ್ನು ಬೆಳಗುವ ಹಬ್ಬ. ಭಾರತ ದೇಶದಲ್ಲಿ ಅಷ್ಟೆ ಅಲ್ಲದೇ ಪ್ರಪಂಚದಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಸಂಸ್ಕೃತಿ, ಬಾಂಧವ್ಯ ಮತ್ತು ಸಕಾರಾತ್ಮಕತೆಯ ಪ್ರತೀಕವಾಗಿರುವ ಈ ಹಬ್ಬವು ಕತ್ತಲೆಯಿಂದ ಬೆಳಕಿ ನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಮತ್ತು ನಕಾರಾತ್ಮಕತೆಯಿಂದ ಸಕಾರಾತ್ಮಕತೆಯ ಕಡೆಗೆ ಸಾಗುವ ಸಂದೇಶವನ್ನು ಸಾರುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿಗೆ ವಿಶೇಷವಾದ ಸ್ಥಾನವಿದೆ. ಪುರಾಣಗಳ ಪ್ರಕಾರ, ಶ್ರೀರಾಮನು ರಾವಣನನ್ನು ಸಂಹರಿಸಿ, ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿದ ಸಂದರ್ಭದಲ್ಲಿ ಜನರು ದೀಪಗಳನ್ನು ಬೆಳಗಿಸಿ ಸ್ವಾಗತಿಸಿದ ದಿನವನ್ನು ದೀಪಾವಳಿಯೊಂದಿಗೆ ಸ್ಮರಿಸಲಾಗುತ್ತದೆ. ಹಾಗೆಯೇ, ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ ವಿಜಯದ ಸಂಕೇತವಾಗಿಯೂ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಹೀಗೆ ದೀಪಾವಳಿ ಧರ್ಮದ ವಿಜಯ, ಸತ್ಯದ ಶಕ್ತಿ ಮತ್ತು ಒಳಿತಿನ ಮಹತ್ವವನ್ನು ಸಾರುವ ಹಬ್ಬವಾಗಿದೆ.

ಭಾರತದ ವಿವಿಧ ಭಾಗಗಳಲ್ಲಿ ದೀಪಾವಳಿಯ ಆಚರಣೆ ವಿಭಿನ್ನ ಹೆಸರು ಮತ್ತು ಸಂಪ್ರದಾಯಗಳೊಂದಿಗೆ ಆಚರಣೆ ಮಾಡಲಾಗುತ್ತದೆ.  ಕರಾವಳಿ ಕರ್ನಾಟಕದ ತುಳುನಾಡಿನಲ್ಲಿ ಇದನ್ನು ತುಡರ್ ಪರ್ಬ ಎಂದು ಕರೆಯಲಾಗುತ್ತದೆ. ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ದೀಪಾವಳಿಯೊಂದಿಗೆ ದೇವ್ ದೀಪಾವಳಿ ಸಂಪ್ರದಾಯವೂ ಬೆಸೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ *ಕಾಳಿ ಪೂಜೆ*ಗೆ ವಿಶೇಷ ಮಹತ್ವವಿದೆ. 

ಇನ್ನು ಗೋವಾದಲ್ಲಿ ಬೃಹತ್ ರಾಕ್ಷಸ ಪ್ರತಿಕೃತಿಗಳನ್ನು ತಯಾರಿಸಿ ದಹಿಸುವ 'ನರಕಾಸುರ ದಹನ' ಪ್ರಮುಖ ಆಕರ್ಷಣೆಯಾದರೆ, ಗುಜರಾತ್‌ನಲ್ಲಿ ದೀಪಾವಳಿಯ ಮರುದಿನ 'ಬೆಸ್ತ್ ವರಸ್' ಅಂದರೆ ಹೊಸ ವರ್ಷದ ಶುಭಾರಂಭವಾಗಿ ಆಚರಿಸಲ್ಪಡುತ್ತದೆ. ದೀಪಗಳ ಹಬ್ಬಕ್ಕೆ ಹೆಸರೇನೇ ಇರಲಿ, ಆಚರಣೆಯ ಶೈಲಿ ಎಷ್ಟೇ ಭಿನ್ನವಾಗಿರಲಿ ಆದರೆ ಇರುಳಿನಿಂದ ಬೆಳಕಿನೆಡೆಗೆ ಸಾಗುವ ಮತ್ತು ಹೃದಯಗಳನ್ನು ಬೆಸೆಯುವ ದೀಪಾವಳಿಯ ಮೂಲ ಸಂದೇಶ ಮಾತ್ರ ದೇಶಾದ್ಯಂತ ಒಂದೇ ಆಗಿ ಪ್ರತಿ ಬಾರಿಯೂ ಹೊಸ ಉತ್ಸಾಹವನ್ನು ನೀಡುತ್ತದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.