India vs Zimbabwe Women T20: ಭಾರತ ಹಾಗೂ ಜಿಂಬಾಬ್ವೆ ಮಹಿಳಾ ತಂಡಗಳ ಮಧ್ಯೆ 3 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ನಾಳೆ (ಅ.18) ರಾಯ್ಪುರದಲ್ಲಿ ಎರಡನೇ ಪಂದ್ಯವು ಜರುಗಲಿದೆ.
ನಿನ್ನೆ ನಡೆದ ಪ್ರಥಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರು ಜಯಿಸಿದ್ದು, 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 114 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತ, 15.4 ಓವರ್ಗಳಲ್ಲಿ 116/6 ಬಾರಿಸಿ ಗೆದ್ದು ಬೀಗಿತು.
ಅನುಭವಿ ಆಟಗಾರ್ತಿ ದೀಪ್ತಿ ಶರ್ಮಾ (49 ರನ್) ಹಾಗೂ ಕರ್ನಾಟಕದ ನಿಕಿ ಪ್ರಸಾದ್ (ಅಜೇಯ 39 ರನ್) ತಂಡಕ್ಕೆ ನೆರವಾದರು.
ಸಂಭಾವ್ಯ ಪ್ಲೇಯಿಂಗ್ 11:
ಭಾರತ: ಸ್ಮೃತಿ ಮಂದಾನ (ನಾಯಕಿ), ಶಫಾಲಿ ವರ್ಮಾ, ಅನುಷ್ಕಾ ಶರ್ಮಾ, ಹರ್ಮನ್ಪ್ರೀತ್ ಕೌರ್, ನಿಕಿ ಪ್ರಸಾದ್, ರಿಚಾ ಘೋಷ್ (ವಿಕೆಟ್ ಕೀಪರ್), ರಿಚಾ ಘೋಷ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಶ್ರೀಚರಣಿ, ನಂದನಿ ಶರ್ಮಾ ಹಾಗೂ ಕ್ರಾಂತಿ ಗೌಡ್.
ಜಿಂಬಾಬ್ವೆ: ಕೆಲ್ಲಿಸ್ ನ್ಡ್ಲೋವು, ಬೆಲವೆಡ್ ಬಿಜಾ, ಚಿಪೊ ಮುಗೇರಿ-ಟಿರಿಪನೊ, ಶಾರ್ನ್ ಮೇಯರ್ಸ್, ಮಿಶೆಲ್ ಮಾವುಂಗ, ನ್ಯಾಶಾ ಗ್ವಾಂಜುರಾ, ಜೋಸೆಫೀನ್ ಎನ್ಕೊಮೊ (ನಾಯಕಿ), ಮಾಡೆಸ್ಟರ್ ಮುಪಾಚಿಕ್ವಾ (ವಿಕೆಟ್ ಕೀಪರ್), 9. ಫ್ರಾನ್ಸಿಸ್ಕಾ ಚಿಪಾರೆ, ಒಲಿಂಡಾ ಚಾರೆ ಮತ್ತು ತೆಂಡೈ ಮಕುಶಾ.
ಪಂದ್ಯ ಆರಂಭ: ಸಂಜೆ 7 ಗಂಟೆ, ಸ್ಟಾರ್ ಸ್ಪೋರ್ಟ್ಸ್ 1 ಚಾನೆಲ್ಗಳಲ್ಲಿ ಲೈವ್ ನೋಡಬಹುದು.