ಸುಳ್ಯ: ಪ್ರಶಾಂತಿ ಡೆಂಟಲ್ ಕ್ಲಿನಿಕ್ ಶುಭಾರಂಭ
Sullia: ಇಲ್ಲಿ ಕಲ್ಮಡ್ಕದ ಡಾ.ಪ್ರಶಾಂತ್ ಬಿ.ಎಸ್ ಅವರ 'ಪ್ರಶಾಂತಿ ಡೆಂಟಲ್ ಕ್ಲಿನಿಕ್' ಶುಭಾರಂಭಗೊಂಡಿತು.
ಸುಳ್ಯ: ಇಲ್ಲಿನ ಚೆನ್ನಕೇಶವ ದೇಗುಲ ಸಮೀಪದ ಆಶೀರ್ವಾದ್ ಬಿಲ್ಡಿಂಗ್‌ನಲ್ಲಿ ಕಲ್ಮಡ್ಕದ ಡಾ.ಪ್ರಶಾಂತ್ ಬಿ.ಎಸ್ ಅವರ 'ಪ್ರಶಾಂತಿ ಡೆಂಟಲ್ ಕ್ಲಿನಿಕ್' ಶುಭಾರಂಭಗೊಂಡಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು.

ಪುತ್ತೂರಿನ ಪ್ರಕಾಶ್ ಡೆಂಟಲ್ ಕ್ಲಿನಿಕ್‌ನ ಡಾ.ಶ್ರೀಪ್ರಕಾಶ್ ಮುಖ್ಯ ಅತಿಥಿಯಾಗಿ ಶುಭಹಾರೈಸಿದರು. ಡೆಂಟಲ್ ಅಸೋಸಿಯೇಶನ್ ಅಧ್ಯಕ್ಷೆ ಡಾ.ವಿದ್ಯಾ ಶಾರದಾ, ಕಟ್ಟಡ ಮಾಲಕಿ ನಮಿತಾ ಜೆ ಶೆಟ್ಟಿ ಉಪಸ್ಥಿತರಿದ್ದರು.
ಗುರುಗಳಾದ ಡಾ.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.