ಕಡಬ: ಆಸ್ತಿಗೆ ಇ-ಖಾತಾ ಮಾಡಲು ಸೂಚನೆ
Kadaba: ಕಡಬ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಲ್ಲಾ ವಸತಿ/ ವಾಣಿಜ್ಯ/ ಕೈಗಾರಿಕೆ ಉದ್ದೇಶದ ಬಳಕೆಯ ಆಸ್ತಿಯ ಮಾಲೀಕರು, ತಮ್ಮ ಆಸ್ತಿಯನ್ನು ಆನ್‍ಲೈನ್ ತಂತ್ರಾಂಶದ ಮೂಲಕ ಇ-ಖಾತಾ ದಾಖಲಿಸಬಹುದು.
ಮಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಭೂಗ್ಯಾರಂಟಿ' ಯೋಜನೆಯನ್ವಯ ಕಡಬ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಲ್ಲಾ ವಸತಿ/ ವಾಣಿಜ್ಯ/ ಕೈಗಾರಿಕೆ ಉದ್ದೇಶದ ಬಳಕೆಯ ಆಸ್ತಿಯ ಮಾಲೀಕರು, ತಮ್ಮ ಆಸ್ತಿಯನ್ನು ಆನ್‍ಲೈನ್ ತಂತ್ರಾಂಶದ ಮೂಲಕ ಇ-ಖಾತಾ ದಾಖಲಿಸಬಹುದು.
ಆಸ್ತಿಯ ಇ-ಖಾತಾ ದಾಖಲಿಸುವುದರಿಂದ ಪ್ರಯೋಜನಗಳು:
ಮಾಲಿಕತ್ವಕ್ಕೆ ಅಧಿಕೃತ ಪುರಾವೆ, ಮಾರಾಟ/ ವರ್ಗಾವಣೆ ಸುಲಭ, ಬ್ಯಾಂಕ್ ಸಾಲ ಪಡೆಯಲು ಅನುಕೂಲವಾಗುತ್ತದೆ. ಆಸ್ತಿ ತೆರಿಗೆ ಪಾವತಿ ಸುಲಭ, ಕಟ್ಟಡ ಪರವಾನಿಗೆ, ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ಪಡೆಯಲು ಸಹಾಯವಾಗಿದ್ದು, ಆಸ್ತಿಯ ಮೌಲ್ಯ ಜಾಸ್ತಿ ಆಗುತ್ತದೆ.
ಎಲ್ಲಾ ದಾಖಲೆ ಒಂದೇ ಕಡೆ ಇರುತ್ತದೆ. ಡೋರ್ ನಂಬರ್ ಇರುವ ಆಸ್ತಿಗಳು ಆಸ್ತಿ ಕಣಜ ತಂತ್ರಾಂಶದಲ್ಲಿ ಡ್ರಾಫ್ಟ್ ಖಾತಾ ದಾಖಲಾಗಿದ್ದು, ಸಾರ್ವಜನಿಕರು ಡ್ರಾಫ್ಟ್ ಖಾತಾವನ್ನು ಪರಿಶೀಲಿಸಿ ಇ-ಖಾತಾ ಪಡೆಯಲು ಈ ಕೆಳಕಂಡ ದಾಖಲೆಗಳೊಂದಿಗೆ ಆನ್‍ಲೈನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದು.
ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:
ಮಾಲಿಕತ್ವ ಸಾಬೀತು ಪಡಿಸುವ ದಾಖಲೆಗಳಾದ ಹಕ್ಕು ಪತ್ರ/ ನೋಂದಾಯಿತ ವಿಭಾಗ ಪತ್ರ/ ಕ್ರಯಸಾಧನ ಪತ್ರ/ದಾನ ಪತ್ರ ಇತ್ಯಾದಿಗಳು. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
ಎಲ್ಲಾ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಇ-ಖಾತಾ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಅರ್ಜಿಯನ್ನು ಪೋರ್ಟಲ್ www.eaasthi.karnataka.gov.in ಮೂಲಕ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕಡಬ ಪಟ್ಟಣ ಪಂಚಾಯತ್‍ನ ಕಂದಾಯ ಶಾಖೆ (9164804386), ಕಿರಿಯ ಅಭಿಯಂತರರು (9901848256) ಅಥವಾ ಸಹಾಯವಾಣಿ 08251-260020 ಸಂಪರ್ಕಿಸಬಹುದು ಎಂದು ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.