Ramayana: ರಾಮಾಯಣ ಹಿಟ್ ಆಯ್ತು.. 1,700 ಕೋಟಿ ಕ್ಲಬ್ ಸನಿಹದಲ್ಲಿ!
Ramayana: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ನಟನೆ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ'ಕ್ಕೆ ಪ್ರೇಕ್ಷಕರು 'ಜೈ' ಎಂದಿದ್ದು, ಇದರ ಕಲೆಕ್ಷನ್ 1,700 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ.
Ramayana: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ನಟನೆ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ'ಕ್ಕೆ ಪ್ರೇಕ್ಷಕರು 'ಜೈ' ಎಂದಿದ್ದು, ಬಾಕ್ಸ್ ಆಫೀಸ್‌ನಲ್ಲಿಯೂ ಅಬ್ಬರಿಸುತ್ತಿದೆ.
ಸ್ಯಾಕ್ನಿಲ್ಕ್ ಪ್ರಕಾರ, 17 ದಿನವಾದ ಶನಿವಾರದಂದು ಭಾರತದಲ್ಲಿ 15,851 ಶೋಗಳು ಪ್ರದರ್ಶನಗೊಂಡಿದ್ದು, ಬರೋಬ್ಬರಿ ರೂ.27.65 ಕೋಟಿ ನೆಟ್ ಗಳಿಕೆಯಾಗಿದೆ.
ಹಿಂದಿ ಆವೃತ್ತಿಯು 13,553 ಪ್ರದರ್ಶನಗಳಿಂದ ರೂ.20.50 ಕೋಟಿ, ಮಲಯಾಳಂ ಆವೃತ್ತಿಯು 838 ಪ್ರದರ್ಶನಗಳಿಂದ ರೂ.2.75 ಕೋಟಿ, ತಮಿಳು ಆವೃತ್ತಿಯು 601 ಪ್ರದರ್ಶನಗಳಿಂದ ರೂ.2 ಕೋಟಿ, ಕನ್ನಡ ಆವೃತ್ತಿಯು 411 ಪ್ರದರ್ಶನಗಳಿಂದ ರೂ.1.65 ಕೋಟಿ ಮತ್ತು ತೆಲುಗು ಆವೃತ್ತಿಯು ರೂ.448 ಪ್ರದರ್ಶನಗಳಿಂದ ರೂ.75 ಲಕ್ಷ ಬಾಚಿದೆ.
ಇದರೊಂದಿಗೆ ವಿಶ್ವಾದ್ಯಂತದ ಒಟ್ಟು ರೂ.1,651 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಲಂಕೇಶ್ವರ ರಾವಣನಾಗಿ ಯಶ್ ಅಬ್ಬರಿಸಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಕೊಂಡಿದ್ದಾರೆ. ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳಿದ್ದಾರೆ.
ರಾಮಾಯಣ' ಸಿನಿಮಾ ಬ್ಯಾನ್‌ಗೆ ವಿಎಚ್‌ಪಿ ಒತ್ತಾಯ:
'ರಾಮಾಯಣ' ಸಿನಿಮಾದಲ್ಲಿ ಕಟ್ಟುಕಥೆಗಳನ್ನು ಸೇರಿಸಿ, ರಾವಣನನ್ನು ವೈಭವೀಕರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆರೋಪಿಸಿದೆ. ಚಿತ್ರದ ಸೆನ್ಸಾರ್ ಪ್ರಮಾಣಪತ್ರ ರದ್ದುಗೊಳಿಸಿ, ಪ್ರದರ್ಶನ ಸ್ಥಗಿತಗೊಳಿಸುವಂತೆ ಒತ್ತಾಯಿಸಿದೆ.
ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ರಾ ಅವರ ಪ್ರಕಾರ, ಚಿತ್ರ ನಿರ್ಮಾಪಕರು ಮಹರ್ಷಿ ವಾಲ್ಮೀಕಿಯ ಮೂಲ ರಾಮಾಯಣದ ಹಲವು ಘಟನೆಗಳನ್ನು ತಿರುಚಿದ್ದು, ಕಲ್ಪಿತ ಸನ್ನಿವೇಶಗಳನ್ನು ಸೇರಿಸಿ ಪ್ರಮುಖ ಪಾತ್ರಗಳನ್ನು ಕೈಬಿಟ್ಟಿದ್ದಾರೆ. ಅಹಲ್ಯೆಯ ವಿಮೋಚನೆ, ನಿಷಾದರಾಜ ಗುಹನ ಸ್ನೇಹ ಮತ್ತು ಕೇವತ್‌ನ ಭಕ್ತಿಯಂತಹ ಪ್ರಮುಖ ಪ್ರಸಂಗಗಳನ್ನು ಚಿತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.