Under-19 Asia Cup 2026: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ

Under-19 Asia Cup 2026: ಭಾರತದ ಅಂಡರ್-19 ಪುರುಷರ ತಂಡವು 2026ರ ಏಷ್ಯಾ ಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Nov 14, 2026 - 21:21
Nov 14, 2026 - 21:24
Under-19 Asia Cup 2026: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ

ಓಮನ್‌: ಭಾರತದ ಅಂಡರ್-19 ಪುರುಷರ ತಂಡವು 2026ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಲ್ ಅಮೇರತ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 1 ವಿಕೆಟ್‌ನಿಂದ ಸೋಲಿಸಿ, ಈ ಪ್ರಶಸ್ತಿ ಜಯಿಸಿದೆ. 

ಟಾಸ್ ಗೆದ್ದ ಪಾಕಿಸ್ತಾನ ಮೊದಲ ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಪೇರಿಸಿತು. ಉಸ್ಮಾನ್ ಖಾನ್ 107, ಅಬ್ದುಲ್ ಖಾದಿರ್ 80 ಹಾಗೂ ಫರ್ಹಾನ್ ಯೂಸುಫ್ 63 ರನ್ ಸಿಡಿಸಿದರು. 

ಭಾರತದ ಪರ ಬೌಲಿಂಗ್‌ನಲ್ಲಿ ಕಾವ್ಯ ಪಟೇಲ್ 4 ಹಾಗೂ ವೆಂಕಟ 3 ವಿಕೆಟ್ ತೆಗೆದು ಮಿಂಚಿದರು. 

338 ರನ್‌ಗಳ ಬೃಹತ್ ಗುರಿಯನ್ನು ಭಾರತ ಬೆನ್ನಟ್ಟಿತು. ಕೊನೆ ಎಸೆತದಲ್ಲಿ ಮೋಹಿತ್ ಉಲ್ವಾ (ಅಜೇಯ 49) ಅವರು, ಬಾರಿಸಿದ ಬೌಂಡರಿಯ ನೆರವಿನಿಂದ 339/9 ರನ್ ಗಳಿಸಿ, ಗೆದ್ದು ಬೀಗಿತು. ನಾಯಕ ಲಕ್ಷ್ಯ ರೈಚಂದಾನಿ 80 ಮತ್ತು ಆರ್ಯವೀರ್ ಸೆಹ್ವಾಗ್ 58 ರನ್ ಸಿಡಿಸಿದರು. 

ಈ ಟೂರ್ನಿಯಲ್ಲಿ ಒಟ್ಟು 361 ರನ್ ಗಳಿಸಿದ ಆರ್ಯವೀರ್ ಸೆಹ್ವಾಗ್ 'ಸರಣಿ ಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು. 

ಗುಂಪು ಹಂತದಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಭಾರತ, ನೇಪಾಳ ಹಾಗೂ ಯುಎಇ ವಿರುದ್ಧ ಜಯ ಗಳಿಸಿ, ಸೆಮಿಫೈನಲ್ ಪ್ರವೇಶಿಸಿತ್ತು. ಅಫ್ಘಾನಿಸ್ತಾನವನ್ನು ಸೋಲಿಸಿ, ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇದರೊಂದಿಗೆ ಅಂಡರ್-19 ಏಷ್ಯಾ ಕಪ್ ಟೂರ್ನಿಯಲ್ಲಿ 9ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.