ರಾಜ್ಯಮಟ್ಟದ ಕಬಡ್ಡಿ ಸ್ಪರ್ಧೆ: ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿಗೆ ದ್ವಿತೀಯ ಸ್ಥಾನ
Vivekananda Engineering College: 'ರಾಜ್ಯ ಮಟ್ಟದ ಕಬಡ್ಡಿ' ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ತಂಡವು, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಪುತ್ತೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಈಚೆಗೆ ತುಮಕೂರಿನ ಗುಬ್ಬಿಯ ಚೆನ್ನಬಸವೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರ್ಪಡಿಸಿದ್ದ 'ರಾಜ್ಯ ಮಟ್ಟದ ಕಬಡ್ಡಿ' ಸ್ಪರ್ಧೆಯಲ್ಲಿ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ತಂಡವು, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ದ್ವಿತೀಯ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿನಿ ಅನನ್ಯಾ ಕೆ.ಬಿ ಉತ್ತಮ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಅರ್ಪಿತಾ ಬಾಲಚಂದ್ರ ನಾಯ್ಕ್ ಅವರು ಸಮರ್ಥವಾಗಿ ನಾಯಕತ್ವವನ್ನು ನಿಭಾಯಿಸಿದರು.
ಶ್ರಾವ್ಯ ಅಂಚನ್, ಸೌಮ್ಯಾ ರೈ, ರಚನಾ ಕೆ.ಡಿ, ಅನುಶ್ರೀ ಎಂ.ಹೆಚ್, ಅನನ್ಯಾ ಕೆ.ಬಿ, ತೇಜಸ್ವಿ ಯು, ಸೃಜನಾ ಎಸ್, ಮಂಜುಶ್ರೀ ಎನ್, ನಿಹಾರಿಕಾ ಎಂ.ಎಸ್, ರೇಷ್ಮಾ, ಮನೀಷಾ ಮತ್ತು ವಾಣಿ ಲಕ್ಷ್ಮಣ ಲಮಾಣಿ ಈ ತಂಡವನ್ನು ಪ್ರತಿನಿಧಿಸಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನದಲ್ಲಿ, ಅರಣ್ಯ ಇಲಾಖೆಯ ರಾಷ್ಟ್ರೀಯ ಆಟಗಾರ ಸತ್ಯಮ್ ಡಿ.ಜಿ ಮತ್ತು ಲಕ್ಷ್ಮಣ ಪಡ್ನೂರು ಅವರು ಈ ತಂಡಕ್ಕೆ ತರಬೇತಿ ನೀಡಿದ್ದರು ಎಂದು ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ತಿಳಿಸಿದ್ದಾರೆ.
ಮಂಗಳೂರು ವಿಭಾಗಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿನ ತಂಡ ಚಾಂಪಿಯನ್ ಆಗುವುದರೊಂದಿಗೆ, ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿತ್ತು.