ಏರ್ ಟ್ರಾಫಿಕ್ ಕಂಟ್ರೋಲ್‌ನಲ್ಲಿ ತಾಂತ್ರಿಕ ಅಡಚಣೆ: ಅಮೆರಿಕದಾದ್ಯಂತ ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ
US: ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಕೇಂದ್ರದಲ್ಲಿ ಉಂಟಾದ ತಾಂತ್ರಿಕ ಅಡಚಣೆ ಉಂಟಾಗಿದ್ದು, ಅಮೆರಿಕದಾದ್ಯಂತ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಅಮೆರಿಕ: ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಕೇಂದ್ರದಲ್ಲಿ ಉಂಟಾದ ತಾಂತ್ರಿಕ ಅಡಚಣೆಯಿಂದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ದೇಶಾದ್ಯಂತ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.
ಇದರಿಂದ 11,000ಕ್ಕೂ ಹೆಚ್ಚು ವಿಮಾನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸಾವಿರಾರು ಪ್ರಯಾಣಿಕರು ಪರದಾಡಿದರು. ಸುಮಾರು ನಾಲ್ಕು ಗಂಟೆಗಳ ಬಳಿಕ ಎಫ್‌ಎಎ ವಿಮಾನಗಳ ಹಾರಾಟ ತಡೆ ನಿರ್ಬಂಧವನ್ನು ತೆರವುಗೊಳಿಸಿ, ವಾಯು ಪ್ರದೇಶವನ್ನು ಪುನಃ ತೆರೆಯಿತು.
ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಕನಿಷ್ಠ 827 ವಿಮಾನಗಳನ್ನು ಮಾರ್ಗ ಬದಲಾವಣೆ ಮಾಡಯಿತು. ಅವುಗಳಲ್ಲಿ 670 ವಿಮಾನಗಳನ್ನು ಮೂಲ ನಿರ್ಗಮನ ವಿಮಾನ ನಿಲ್ದಾಣಗಳಿಗೆ ಹಿಂತಿರುಗಿಸಲಾಯಿತು. 157 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು.
ಈ ಅಡಚಣೆಗೆ ಹಳೆಯದಾದ ಎಟಿಸಿ ವ್ಯವಸ್ಥೆ ಮೇಲೆ ಹೊಸ ತಂತ್ರಜ್ಞಾನದ ಹೊರೆ ಹೆಚ್ಚಾದದ್ದೇ ಕಾರಣ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ತಿಳಿಸಿದ್ದಾರೆ.
ಇದೊಂದು ದುರುದ್ದೇಶಪೂರಿತ ದಾಳಿ ಎಂಬ ಸಾಧ್ಯತೆಯನ್ನು ತಳ್ಳಿಹಾಕಿದ್ದು, 'ಇದು ಮತ್ತೊಂದು 9/11 ಘಟನೆಯಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.