ದಾವಣಗೆರೆಯಲ್ಲೊಂದು ಸುಂದರ ಗಾಜಿನ ಮನೆ..!

Davanagere: ದಾವಣಗೆರೆ ತೋಟಗಾರಿಕೆ ಇಲಾಖೆಯ ಗಾಜಿನ ಮನೆ ವೃಕ್ಷೋದ್ಯಾನ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಕುಮಾರ್ ಪೆರ್ನಾಜೆ ಅವರು ವಿಶೇಷ ಲೇಖನ ಬರೆದಿದ್ದಾರೆ.

Nov 13, 2026 - 14:14
Nov 13, 2026 - 14:16
ದಾವಣಗೆರೆಯಲ್ಲೊಂದು ಸುಂದರ ಗಾಜಿನ ಮನೆ..!

Davanagere Glass House: ಉದ್ಯಾನವನ ಎಂಬುದು ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುತ್ತದೆ. ದಾವಣಗೆರೆ ತೋಟಗಾರಿಕೆ ಇಲಾಖೆಯ ಗಾಜಿನ ಮನೆ ವೃಕ್ಷೋದ್ಯಾನ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. 

ಗಾಜಿನ ಮನೆ ಒಳಗೆ ವೃತ್ತಾಕಾರದಲ್ಲಿ ಬೆಂಚಿನ ಜೋಡಣೆ ಕುಳಿತುಕೊಳ್ಳಲು ಅವಕಾಶವಿದೆ. ಒಳಗೆ-ಹೊರಗು ಗಿಡಗಳು, ಅಲ್ಲದೆ ಮನೆಯಂತೆ ಬಾಸವಾಗುವ ಕೋಣೆ, ಸೆಲ್ಫಿ ಕಾರ್ನರ್ ಕೂಡ ಇದ್ದು, ರೂ.20 ಪ್ರವೇಶ ಶುಲ್ಕವಿದೆ. 

ಬೇಸಿಗೆ ಕಾಲದಲ್ಲಿ ಬಿಸಿಲಿನ ಕಾವು ಸ್ವಲ್ಪ ಹೆಚ್ಚಾಗಿರುತ್ತದೆ. ಬೆಂಗಳೂರಲ್ಲಿ ಗಾಜಿನ ಮನೆ ಕೇಳಿದ್ದೇವೆ. ಹಾಗೆ ಈಗ ಮಡಿಕೇರಿಯಲ್ಲಿ ಗಾಜಿನ ಸೇತುವೆಯಿದೆ. ಕಲಾಕುಂಜ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆಯಲ್ಲಿ ನಮ್ಮ ಸ್ವರ ಸಿಂಚನ ಕಲಾತಂಡವನ್ನು ಗೌರವಿಸಿ, ಸನ್ಮಾನಿಸಿದ ಸುಸಂದರ್ಭ ಇದನ್ನು ನೋಡುವ ಅವಕಾಶ ನಮಗೆಲ್ಲರಿಗೂ ಬಂತು. ಇಲ್ಲಿ ಕಣ್ಮನ ಸೆಳೆಯುವ ನೂರಾರು ಮರಗಳ ಕಣ್ತುಂಬಿಕೊಂಡೆವು.

ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ:

ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನೂ ವಿಪುಲ ಅವಕಾಶಗಳು ಕರ್ನಾಟಕದಲ್ಲಿವೆ. ನಮ್ಮ ಅತ್ಯದ್ಭುತ ಪ್ರದೇಶಗಳು, ಕರಾವಳಿ ತೀರ ಪ್ರದೇಶಗಳು ಮತ್ತು ಬಯಲುಸೀಮೆ ಪ್ರದೇಶಗಳಲ್ಲೂ ಇಂತಹ ಹೊಸ ಚಟುವಟಿಕೆಗಳನ್ನು ಶುರು ಮಾಡಬಹುದು. ಇವುಗಳ ಜೊತೆ ಚಾರಣ ಸಹ ಇತ್ತೀಚಿನ ಟ್ರೆಂಡ್, ಅನೇಕ ಜನರು ರಾಜ್ಯದ ನಾನಾ ಕಡೆ ಚಾರಣ ಹೋಗಲು ಆಸಕ್ತಿಯನ್ನು ತೋರುತ್ತಿದ್ದಾರೆ. 

ಬಹುಮುಖ್ಯವಾಗಿ ಪರಿಸರ ಪ್ರವಾಸೋದ್ಯಮವೆಂದರೆ, ಒಂದೆರಡು ದಿನಗಳ ಕಾಲ ಕಾಡಿನಲ್ಲಿ ವಾಸ್ತವ್ಯ ಮಾಡಿ ಬರೋದು ಅಷ್ಟೇ ಅಲ್ಲ.. ಗಿಡ, ಮರ, ಪಕ್ಷಿ ಪ್ರಾಣಿಗಳನ್ನು ಕಣ್ಣು ತುಂಬಿಕೊಂಡು ಬರುವುದು ಈಗ ಹೊಸ ಟ್ರೆಂಡ್. ಉಳಿದೆಲ್ಲ ಕ್ಷೇತ್ರಗಳನ್ನು ಹಿಂದಿಕ್ಕಿ, ಸದ್ಯ ಪರಿಸರ ಪ್ರವಾಸ ಉದ್ಯಮ ಬಹಳಷ್ಟು ಮುಂಚೂಣಿಗೆ ಬಂದಿದೆ.

ಹೀಗಾಗಿ, ಅರಣ್ಯ ಇಲಾಖೆ ಉದ್ಯಮ ಸ್ಥಿತಿಯನ್ನು ಅಳವಡಿಸಿಕೊಂಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋದಲ್ಲಿ ಎಲ್ಲರಿಗೂ ಅನೇಕ ಹೊಸ ಅವಕಾಶ ಮತ್ತು ಅನುಕೂಲಗಳನ್ನು ತೆರೆದಿಡಲಿದೆ.

ಅರಣ್ಯ ಇಲಾಖೆ ರಾಜ್ಯದಲ್ಲಿ ಸದ್ದಿಲ್ಲದೆ ನಗರ ಪ್ರದೇಶಗಳಲ್ಲಿ ಹೊಸ ಹೊಸ ಮಾದರಿಯ ಹಸಿರು ಕ್ರಾಂತಿಯನ್ನು ಮಾಡುತ್ತಿದೆ. ಕಾಡನ್ನು ಸಂರಕ್ಷಣೆ ಮಾಡಿ ವನ್ಯಜೀವಿಗಳಿಗೆ ಭದ್ರತೆ ಒದಗಿಸುವ ಜೊತೆಗೆ, ನಗರ ಮತ್ತು ಪಟ್ಟಣ ಪ್ರದೇಶಗಳ ಜನರಿಗೂ ಪರಿಸರ ಲಾಭ ಸಿಗಲಿ ಎನ್ನುವ ಉದ್ದೇಶದಿಂದ ವೃಕ್ಷೋದ್ಯಾನ ಯೋಜನೆಯನ್ನು ವೇಗವಾಗಿ ಜಾರಿಗೊಳಿಸುತ್ತಿದೆ.

ದೈವಿವನ ವೃಕ್ಷೋದ್ಯಾನ ಮತ್ತು ನಗರ ವನಗಳ ಹೆಸರಿನಲ್ಲಿ ನಾನಾ ಕಡೆ  ಹಸಿರಿಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಾಲುಮರದ ತಿಮ್ಮಕ್ಕ ಕೊಡುಗೆಯನ್ನು ನೆನಪಿಸಲು ರಾಜ್ಯದ ಬಹುತೇಕ ಎಲ್ಲಾ ಪಟ್ಟಣ ಮತ್ತು ನಗರಗಳಲ್ಲಿ ಅವರ ಹೆಸರಲ್ಲಿ ವೃಕ್ಷೋದ್ಯಾನಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಜನರಿಗೆ ಉತ್ತಮ ಮತ್ತು ಆರೋಗ್ಯಕರ ಪರಿಸರವನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ.  

ಇದರಿಂದ ಹಲವರ ಜೀವನ ಮಟ್ಟವು ಸುಧಾರಿಸುತ್ತದೆ. ಕಬ್ಬಿನ ಹಾಲು, ಐಸ್ ಕ್ರೀಮ್ ಹಾಗೂ ಚುರುಮುರಿಯನ್ನು ಮಾರಾಟ ಮಾಡುವವರಿಗೂ  ಉದ್ಯೋಗ ಸೃಷ್ಟಿಯಾಗುತ್ತದೆ.  

ಸದ್ಯ ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ವೃಕ್ಷೋದ್ಯಾನಗಳನ್ನು ಸ್ಥಾಪಿಸಲಾಗಿದೆ. ಅದೆಷ್ಟೋ ಸ್ಥಳೀಯ ಜಾತಿ ಗಿಡ ಮರಗಳನ್ನು ರಕ್ಷಿಸುವುದರೊಂದಿಗೆ, ಅಲಂಕಾರಿಕ ಹೂವಿನ ಗಿಡಗಳನ್ನು ಸಹ ಅಲ್ಲಿ ಬೆಳೆಸಲಾಗುತ್ತದೆ. ಜನರಿಗೆ ವಾಕಿಂಗ್ ಮಾಡಲು ರಸ್ತೆ ಹಾಗೂ ದೈಹಿಕ ಚಟುವಟಿಕೆಗೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. 

ಈ ಹಿನ್ನೆಲೆ, ಹೆಚ್ಚಿನ ಸಂಖ್ಯೆಯಲ್ಲಿ ವೃಕ್ಷೋದ್ಯಾನಗಳು ಪ್ರಾರಂಭವಾಗಲಿ ಎಂದು ಆಶಿಸೋಣ.

ಬರಹ: ಕುಮಾರ್ ಪೆರ್ನಾಜೆ, ಪುತ್ತೂರು 
ಚಿತ್ರ: ನಂದನ್ ಕುಮಾರ್ ಪೆರ್ನಾಜೆ 
ಪೆರ್ನಾಜೆ ಮನೆ, ಕಾವು ಪುತ್ತೂರು ತಾಲೂಕು ದ.ಕ 574223
ಮೋ:9480240643

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.