ಕೊಂಕಣಿ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಭಾಗವಹಿಸಿದ ಪುತ್ತೂರಿನ ಸಂತ ಫಿಲೋಮಿನಾ(ಸ್ವಾಯತ್ತ) ಕಾಲೇಜು

12 ದಿನಗಳು , 12 ಗಂಟೆಗಳು ಮತ್ತು 12 ನಿಮಿಷಗಳ ಗಾಯನ ಮ್ಯಾರಥಾನ್ ನಿರಂತರವಾಗಿ ಸುಮಾರು 300 ಗಂಟೆಗಳ ಕಾಲ ಈ ಕೊಂಕಣಿ ಗಾಯನವನ್ನು ಪ್ರಸ್ತುತಪಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. 300 ಗಾಯನ ತಂಡಗಳು ಭಾಗವಹಿಸಿ, 4,500ಕ್ಕೂ ಹೆಚ್ಚು ಕೊಂಕಣಿ ಗೀತೆಗಳನ್ನು ನಿರಂತರವಾಗಿ ಹಾಡಿ, 6,700ಕ್ಕೂ ಹೆಚ್ಚು ಗಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Nov 12, 2026 - 19:29
ಕೊಂಕಣಿ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಭಾಗವಹಿಸಿದ ಪುತ್ತೂರಿನ ಸಂತ ಫಿಲೋಮಿನಾ(ಸ್ವಾಯತ್ತ) ಕಾಲೇಜು

ಪುತ್ತೂರು: ಮಂಗಳೂರಿನ ಪುರಭವನದಲ್ಲಿ ಮಾಂಡ್ ಸೊಭಾಣ್ ವತಿಯಿಂದ ನವೆಂಬರ್ 3 ರಿಂದ ನವೆಂಬರ್ 15 ರ ವರೆಗೆ  ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದಲ್ಲಿ ಪುತ್ತೂರಿನ ಸಂತ ಫಿಲೋಮಿನಾ(ಸ್ವಾಯತ್ತ) ಕಾಲೇಜು ನವೆಂಬರ್ 8ರಂದು ಭಾಗವಹಿಸಿತು.

12 ದಿನಗಳು , 12 ಗಂಟೆಗಳು ಮತ್ತು 12 ನಿಮಿಷಗಳ ಗಾಯನ ಮ್ಯಾರಥಾನ್ ನಿರಂತರವಾಗಿ ಸುಮಾರು 300 ಗಂಟೆಗಳ ಕಾಲ ಈ ಕೊಂಕಣಿ ಗಾಯನವನ್ನು ಪ್ರಸ್ತುತಪಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. 300 ಗಾಯನ ತಂಡಗಳು ಭಾಗವಹಿಸಿ, 4,500ಕ್ಕೂ ಹೆಚ್ಚು ಕೊಂಕಣಿ ಗೀತೆಗಳನ್ನು ನಿರಂತರವಾಗಿ ಹಾಡಿ, 6,700ಕ್ಕೂ ಹೆಚ್ಚು ಗಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾಂಡ್ ಸೊಭಾಣ್ ವತಿಯಿಂದ ಆಯೋಜಿಸಿದ ಈ ಅದ್ಧುರಿಯಾದ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸಂತ ಫಿಲೋಮಿನಾ (ಸ್ವಾಯತ್ತ )ಕಾಲೇಜು ಭಾಗವಹಿಸಿ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಒಟ್ಟು 24 ಜನರ ತಂಡ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಮಹಾಸಮ್ಮೇಳನದ ಈ ಐತಿಹಾಸಿಕ ಪಯಣದಲ್ಲಿ ಸಂಸ್ಥೆಯು ತೋರಿದ ಒಗ್ಗಟ್ಟು, ಸಮರ್ಪಣಾ ಭಾವ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.