Ramayana: ಇಂದು ರಾಮಾಯಣ ರಿಲೀಸ್.. ಶ್ರೀರಾಮನಾಗಿ ರಣಬೀರ್.. ರಾವಣನಾಗಿ ಯಶ್!
Ramayana: ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ' ಇಂದು (ನ.5) ವಿಶ್ವದಾದ್ಯಂತ ತೆರೆ ಕಂಡಿದೆ.
Ramayana: ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ' ಇಂದು (ನ.5) ವಿಶ್ವದಾದ್ಯಂತ ತೆರೆ ಕಂಡಿದೆ. ಈ ಚಿತ್ರವನ್ನು ಸುಮಾರು ರೂ.4,000 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಮೊದಲ ದಿನದ ಪ್ರಿ-ಬುಕ್ಕಿಂಗ್ಗಳ ಮೂಲಕ (ಬ್ಲಾಕ್ ಸೀಟ್ಗಳನ್ನು ಒಳಗೊಂಡಂತೆ) ರೂ.49.75 ಕೋಟಿ ಗಳಿಸಿದೆ.
ವಿದೇಶಗಳಲ್ಲಿ ಪ್ರಿ-ಟಿಕೆಟ್ ಮಾರಾಟವು 5.6 ದಶಲಕ್ಷ ಅಮೆರಿಕನ್ ಡಾಲರ್ಗಳನ್ನು ತಲುಪಿದೆ. ಇದರೊಂದಿಗೆ ಜಾಗತಿಕವಾಗಿ ಒಟ್ಟಾರೆ ಪ್ರಿ-ಬುಕ್ಕಿಂಗ್ ಮೊತ್ತವು ರೂ.150 ಕೋಟಿ ದಾಟಿದೆ. ಈ ಸಿನಿಮಾವು ಮೊದಲ ದಿನವೇ ವಿವಿಧ ಭಾಷೆಗಳಲ್ಲಿ ರೂ.75 ರಿಂದ 100 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
ಲಂಕೇಶ್ವರ ರಾವಣನಾಗಿ ಯಶ್ ಅಬ್ಬರಿಸಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದು, ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ ಮತ್ತು ಹನುಮಂತನಾಗಿ ಸನ್ನಿ ಡಿಯೋ ಅಭಿನಯಿಸಿದ್ದಾರೆ.
ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳಿದ್ದಾರೆ. 'ಪ್ರೈಮ್ ಫೋಕಸ್ ಸ್ಟುಡಿಯೋಸ್' ಮಾಲೀಕ ನಮಿತ್ ಮಲ್ಹೋತ್ರಾ ಜೊತೆಗೂಡಿ ತಮ್ಮದೇ ಸ್ವಂತ ಬ್ಯಾನರ್ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್'ನಡಿ ಯಶ್, ಈ ಬಿಗ್-ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹ್ಯಾನ್ಸ್ ಜಿಮ್ಮರ್ & ಎ.ಆರ್.ರೆಹಮಾನ್ ಮ್ಯೂಸಿಕ್ ನೀಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್ನಿಂದ ಹಿಡಿದು ಇನ್ಸ್ಟಾ, ಎಕ್ಸ್, ಫೇಸ್ಬುಕ್, ಯೂಟ್ಯೂಬ್, ನ್ಯೂಸ್ ಆಪ್ವರೆಗೆ ಎಲ್ಲ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.