ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?
Daily Horoscope: ಇಂದು (ಮಂಗಳವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಮಂಗಳಮಯವಾದ ಮಂಗಳವಾರ.. ಕಟ್ಟಡ ನಿರ್ಮಾಪಕರಿಗೆ ಅನುಕೂಲ. ಕೃಷ್ಯುತ್ಪನ್ನಗಳ ಮಾರಾಟ ವೃದ್ಧಿ. ಅಪರೂಪದ ಬಂಧುಗಳ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ. ಗಣೇಶ ಸ್ತೋತ್ರ, ವಿಶ್ವನಾಥಾಷ್ಟಕ, ಶನಿಮಹಾತ್ಮೆ ಓದಿ.
ವೃಷಭ:
ಭಗವಂತನ ಅನುಗ್ರಹದಿಂದ ಹಣಕಾಸು ವ್ಯವಹಾರ ಸುಗಮ.. ಸರ್ಕಾರಿ ನೌಕರರಿಗೆ ನಿಶ್ಚಿಂತೆ. ಹಿರಿಯರ ಮನೆಯಲ್ಲಿ ದೇವತಾರಾಧನೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗೃಹೋತ್ಪನ್ನ ಖಾದ್ಯಗಳಿಂದ ಅಧಿಕ ಆದಾಯ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ಮಿಥುನ:
ಮಾನಸಿಕ ಬೇಗುದಿಯಿಂದ ಬಿಡುಗಡೆ.. ಹಿತಶತ್ರುಗಳ ಪೀಡೆ ಶಮನ. ವ್ಯವಹಾರಸ್ಥರಿಗೆ ಅನುಕೂಲದ ದಿನ. ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ. ಗೃಹಿಣಿಯರು, ಮಕ್ಕಳಿಗೆ ನೆಮ್ಮದಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಕರ್ಕಾಟಕ:
ನೌಕರ ವರ್ಗಕ್ಕೆ ಬಹಳಷ್ಟು ನೆಮ್ಮದಿ.. ಪಾಲುದಾರಿಕೆ ವ್ಯವಹಾರ ಮುನ್ನಡೆ. ಭೂಮಿ ಖರೀದಿ-ಮಾರಾಟ ವ್ಯವಹಾರಸ್ಥರಿಗೆ ಉತ್ತಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ. ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಪರಾಧ ಕ್ಷಮಾಪಣಾ ಸ್ತೋತ್ರ, ಗುರುಸ್ತೋತ್ರ ಓದಿ.
ಸಿಂಹ:
ಉದ್ಯಮ ಕ್ಷೇತ್ರದವರಿಗೆ ಲಕ್ಷ್ಮೀ ಕಟಾಕ್ಷ.. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಹತ್ತಿರದ ದೇವೀಕ್ಷೇತ್ರಕ್ಕೆ ಸಂದರ್ಶನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
ಕನ್ಯಾ:
ಅಯಾಚಿತವಾಗಿ ಧನಪ್ರಾಪ್ತಿ.. ಉದ್ಯೋಗಸ್ಥರಿಗೆ ಸಹೋದ್ಯೋಗಿಗಳ ಸಹಾಯ. ವ್ಯವಹಾರಸ್ಥರಿಗೆ ಕಾರ್ಯ ವಿಸ್ತರಿಸಲು ಉತ್ಸಾಹ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಕೇಟರಿಂಗ್ ವ್ಯವಹಾರಸ್ಥರಿಗೆ ಜಯ. ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ತುಲಾ:
ಉದ್ಯೋಗ ಸ್ಥಾನದಲ್ಲಿ ಪುನರ್ವ್ಯವಸ್ಥೆ.. ನಿವೇಶನ, ಮನೆ ಖರೀದಿ-ಮಾರಾಟ ವ್ಯವಹಾರದಲ್ಲಿ ಲಾಭ. ಕೃಷಿ ಉತ್ಪನ್ನ ಮಾರಾಟಗಾರರಿಗೆ ತೃಪ್ತಿಕರ ಲಾಭ. ಅಧ್ಯಾಪಕ ವೃತ್ತಿಯವರಿಗೆ ಕೆಲಸದ ಹೊರೆ. ಹಿರಿಯರಿಗೆ ಉಲ್ಲಾಸದ ವಾತಾವರಣ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ವೃಶ್ಚಿಕ:
ವ್ಯವಹಾರಗಳು ನಿರ್ವಿಘ್ನವಾಗಿ ಸಮಾಧಾನ.. ಮಾಲಿಕ- ನೌಕರರ ಬಾಂಧವ್ಯ ವೃದ್ಧಿ. ಆಸ್ತಿ, ಮನೆ ಮಧ್ಯವರ್ತಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ ಸ್ವಲ್ಪಮಟ್ಟಿನ ಲಾಭ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಗಣಪತಿ ಅಥರ್ವಶೀರ್ಷ, ವೆಂಕಟೇಶ್ವರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಧನು:
ಪಟ್ಟುಬಿಡದ ಪ್ರಯತ್ನದಿಂದ ಯಶಸ್ಸು.. ಸಹೋದ್ಯೋಗಿಗಳಿಂದ ಸಹಕಾರ. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಮಕ್ಕಳ ವ್ಯಾಸಂಗಾಸಕ್ತಿ ಸುಧಾರಣೆ. ಗಣೇಶ ಪಂಚರತ್ನ, ಶಿವ ಕವಚ, ಮಹಿಷಮರ್ದಿನಿ ಸ್ತೋತ್ರ ಓದಿ.
ಮಕರ:
ಉದ್ಯೋಗ ಸ್ಥಾನದಲ್ಲಿ ನೆಮ್ಮದಿ.. ಮನೆಮಂದಿಯ ಸಹಕಾರ, ಉತ್ತಮ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಹೆಚ್ಚಿನವರಿಗೆ ಮಿಶ್ರಫಲಗಳ ಅನುಭವ. ಗಣೇಶ ಕವಚ, ದೇವಿ ಕವಚ, ಹನುಮಾನ್ ಚಾಲೀಸಾ ಓದಿ.
ಕುಂಭ:
ಸಾಮಾಜಿಕ ಚಟುವಟಿಕೆಗಳ ಒತ್ತಡ.. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ ಚಟುವಟಿಕೆಗಳಿಂದ ಆಯಾಸ. ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ತ್ವರಿತಗತಿಯಿಂದ ಕಾರ್ಯಗಳ ನಿರ್ವಹಣೆ.. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯಿಂದ ವ್ಯವಹಾರದಲ್ಲಿ ಉತ್ತಮ ಸಹಕಾರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ. ಶನಿಮಹಾತ್ಮೆ ಓದಿ.