Ranabaali:ಮೊದಲ ದಿನ ರಣಬಾಲಿ ಕಲೆಕ್ಷನ್ ಎಷ್ಟು?

Ranabaali: ರಣಬಾಲಿ ಸಿನಿಮಾವು ಮೊದಲ ದಿನ ಡೀಸೆಂಟ್ ಕಲೆಕ್ಷನ್ ಮಾಡಿದೆ.

Oct 17, 2026 - 20:21
Oct 17, 2026 - 20:24
Ranabaali:ಮೊದಲ ದಿನ ರಣಬಾಲಿ ಕಲೆಕ್ಷನ್ ಎಷ್ಟು?

Ranabaali: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪಿರಿಯಡ್ ಆ್ಯಕ್ಷನ್ ಎಮೋಷನಲ್ ಡ್ರಾಮಾ ತೆಲುಗಿನ 'ರಣಬಾಲಿ' ಸಿನಿಮಾವು ಶುಕ್ರವಾರ (ಅ.16) ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸಿನಿಮಾವು ಮೊದಲ ದಿನ ಡೀಸೆಂಟ್ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ಪ್ರಕಾರ, ರೂ.9.25 ಕೋಟಿ ನೆಟ್ ಗಳಿಕೆ ಕಂಡಿದೆ. 2,515 ಶೋಗಳು ಪ್ರದರ್ಶನಗೊಂಡಿವೆ. ಇದರೊಂದಿಗೆ ಜಾಗತಿಕವಾಗಿ ರೂ.16.50 ಕೋಟಿ (ಗ್ರಾಸ್) ಬಾಚಿದೆ.

1870-1880ರ ದಶಕದ ಬ್ರಿಟಿಷ್ ಭಾರತದ ಹಿನ್ನೆಲೆಯಲ್ಲಿ ಈ ಚಿತ್ರದ ಕಥೆ ಸಾಗುತ್ತದೆ. ವಿಜಯ್ ದೇವರಕೊಂಡ 'ರಣಬಾಲಿ'ಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಆತನ ಪತ್ನಿ ಜಯಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಿರ್ದೇಶಕ ರಾಹುಲ್ ಸಂಕೃತ್ಯನ್ ಆಕ್ಷನ್ ಕಟ್ ಹೇಳಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಟಿ-ಸೀರೀಸ್ ಬ್ಯಾನರ್‌ನಡಿ ಜಂಟಿಯಾಗಿ ನಿರ್ಮಿಸಲಾಗಿದೆ. 

ಈ ಸಿನಿಮಾಕ್ಕೆ ಅಜಯ್-ಅತುಲ್ ಸಂಗೀತ ಸಂಯೋಜನೆ ಮಾಡಿದ್ದು, ನೀರವ್ ಶಾ/ ಕೃಷ್ಣ ಕುಮಾರ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

ಅರ್ನಾಲ್ಡ್ ವೋಸ್ಲೂ, ಈಶ್ವರಿ ರಾವ್, ಜೇಸನ್ ಶಾ, ಮೈಮ್ ಮಧು, ವಿನೋದ್ ಸಾಗರ್, ಲ್ಯೂಕ್ ಮೆಕ್‌ಗಿಬ್ನಿ ಹಾಗೂ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.