ವಿಶ್ವದ ನಂ.1 ಪ್ಯಾರಾ ಆರ್ಚರ್ ಶೀತಲ್ ದೇವಿಗೆ 'ಹ್ಯುಂಡೈ ಬೇಯಾನ್' SUV ಗಿಫ್ಟ್!
Hyundai BAYON: ವಿಶ್ವದ ನಂ.1 ಪ್ಯಾರಾ ಆರ್ಚರ್ ಶೀತಲ್ ದೇವಿಗೆ 'ಹ್ಯುಂಡೈ ಬೇಯಾನ್' ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.
ನವದೆಹಲಿ: 2026ರ ಐಚಿ-ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಎರಡು ಚಿನ್ನದ ಪದಕಗಳು ಹಾಗೂ ಒಂದು ಬೆಳ್ಳಿ ಪದಕ ದ್ದ 19 ವರ್ಷದ ಶೀತಲ್ ದೇವಿಗೆ 'ಹ್ಯುಂಡೈ ಮೋಟಾರ್ ಇಂಡಿಯಾ' ಹೊಚ್ಚ ಹೊಸ 'ಬೇಯಾನ್' ಎಸ್ಯುವಿಯನ್ನು ಗಿಫ್ಟ್ ನೀಡಿದೆ. ನೂತನ ಕಾರಿನ ಹಸ್ತಾಂತರ ಸಮಾರಂಭವು ಈಚೆಗೆ ಗುರುಗ್ರಾಮ್ನಲ್ಲಿ ನಡೆಯಿತು.
ಈ ಬಗ್ಗೆ 'ಎಕ್ಸ್'ನಲ್ಲಿ ಹ್ಯುಂಡೈ ಇಂಡಿಯಾ ಪೋಸ್ಟ್ ಮಾಡಿದೆ. 'ನಮ್ಮ ಬ್ರಾಂಡ್ ಅಂಬಾಸಿಡರ್, ವಿಶ್ವದ ನಂ.1 ಪ್ಯಾರಾ ಆರ್ಚರ್ (ಪ್ಯಾರಾ ಬಿಲ್ಲುಗಾರಿಕೆ ಕ್ರೀಡಾಪಟು) ಹಾಗೂ ಅರ್ಜುನ ಪ್ರಶಸ್ತಿ ವಿಜೇತೆ ಶೀತಲ್ ದೇವಿ ಅವರ ಸಾಧನೆ ಹಾಗೂ ಕೊಡುಗೆಯನ್ನು ಗುರುತಿಸಿ, 'ಹ್ಯುಂಡೈ ಬೇಯಾನ್' (Hyundai BAYON) ಕಾರನ್ನು ನೀಡಿ, ಗೌರವಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ' ಎಂದು ಹೇಳಿದೆ.
'ಹ್ಯುಂಡೈ ಬೇಯಾನ್' ವಿಶೇಷತೆಗಳೇನು:
ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.10 ಲಕ್ಷದಿಂದ ರೂ.18 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಎಕ್ಸ್2, ಹೆಚ್ಎಕ್ಸ್3, ಹೆಚ್ಎಕ್ಸ್3 ಪ್ಲಸ್, ಹೆಚ್ಎಕ್ಸ್5, ಹೆಚ್ಎಕ್ಸ್6, ಹೆಚ್ಎಕ್ಸ್8 ಮತ್ತು ಹೆಚ್ಎಕ್ಸ್10 ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ.

ಈ ಕಾರು ವೆನ್ಯೂ ಮತ್ತು ಕ್ರೆಟಾದ ಕ್ರಾಸ್ಓವರ್ ಮಾಡೆಲ್ ಆಗಿದ್ದು, ಎಲ್ಇಡಿ ಹೆಡ್ಲ್ಯಾಂಪ್ಗಳು, 'ಎಲ್' ಆಕಾರದ ಎಲ್ಇಡಿ ಡಿಆರ್ಎಲ್ಗಳು, ಎಲ್ಇಡಿ ಟೈಲ್ಲ್ಯಾಂಪ್ಗಳು ಹಾಗೂ 17-ಇಂಚಿನ ಅಲಾಯ್ ವೀಲ್ಗಳನ್ನು ಒಳಗೊಂಡಿದೆ. ಅಟ್ಲಾಸ್ ವೈಟ್, ಟೈಟಾನಿಯಂ ಬ್ಲ್ಯಾಕ್, ಕ್ಲಾಸಿ ಬ್ಲ್ಯೂ, ಗೋಲ್ಡನ್ ಬ್ರೌನ್ ಹಾಗೂ ಇಕೋಟೋನಿಕ್ ಗ್ರೇ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ನೂತನ 'ಬೇಯಾನ್' ಬಲಿಷ್ಠವಾದ ಪವರ್ಟ್ರೇನ್ನ್ನು ಒಳಗೊಂಡಿದೆ. 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 6-ಸ್ಪೀಡ್ ಮ್ಯೂನುವಲ್ ಟ್ರಾಸ್ಮಿಷನ್/ ಸಿವಿಟಿ ಗೇರ್ಬಾಕ್ಸ್ನ್ನು ಹೊಂದಿದೆ. 18.6 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ.
ಇದು 5-ಆಸನಗಳನ್ನು ಒಳಗೊಂಡಿದ್ದು, ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 505 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ನ್ನು ಹೊಂದಿದೆ. ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (12.3-ಇಂಚು), ಪನೋರಮಿಕ್ ಸನ್ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್ಲೆಸ್ ಫೋನ್ ಚಾರ್ಜರ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಹಾಗೂ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ.
ಈ 'ಬೇಯಾನ್' ಕಾರು ಪ್ರಯಾಣಿಕರ ರಕ್ಷಣೆಯ ಸಲುವಾಗಿ 6-ಏರ್ಬ್ಯಾಗ್ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಆಲ್ ವೀಲ್ ಡಿಸ್ಕ್ ಬ್ರೇಕ್ಗಳನ್ನು ಪಡೆದಿದೆ.