IPLಗೆ ವಿದಾಯ ಹೇಳಿದ ಎಂಎಸ್ ಧೋನಿ.. CSK ಮೆಂಟರ್ ಆಗಿ ನೇಮಕ

MS Dhoni: ಎಂಎಸ್ ಧೋನಿ, 'ಇಂಡಿಯನ್ ಪ್ರೀಮಿಯರ್ ಲೀಗ್' ಆಟಗಾರನಾಗಿ ತಮ್ಮ 19 ವರ್ಷಗಳ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.

Nov 17, 2026 - 16:04
Nov 17, 2026 - 16:05
IPLಗೆ ವಿದಾಯ ಹೇಳಿದ ಎಂಎಸ್ ಧೋನಿ.. CSK ಮೆಂಟರ್ ಆಗಿ ನೇಮಕ

MS Dhoni: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆಟಗಾರನಾಗಿ ತಮ್ಮ 19 ವರ್ಷಗಳ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 

2027ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ. ಡಿ.16 ರಂದು ಗೋವಾದಲ್ಲಿ ನಡೆಯಲಿರುವ ಹರಾಜಿಗೆ ಮುಂಚಿತವಾಗಿ ಆಟಗಾರರ ರಿಟೆನ್ಷನ್ ಪಟ್ಟಿ ಬಿಡುಗಡೆಗೊಳಿಸುವ 3 ಗಂಟೆಗಳ ಮೊದಲು, ಈ ಘೋಷಣೆ ಹೊರಬಿದ್ದಿದೆ.

'ಎಂಎಸ್ ಧೋನಿ ಇಲ್ಲದೆ ಸಿಎಸ್‌ಕೆ ಇಲ್ಲ. ಸುಮಾರು ಎರಡು ದಶಕಗಳಿಂದ ಗೆಲವು-ಸೋಲುಗಳಲ್ಲಿ ಜೊತೆಯಾಗಿದ್ದೆವು' ಎಂದು ತಂಡದ ಮಾಲೀಕ ಎನ್.ಶ್ರೀನಿವಾಸನ್ ಹೇಳಿದ್ದಾರೆ.

ಎಂ.ಎಸ್.ಧೋನಿ ನಾಯಕತ್ವದಲ್ಲಿ, ಸಿಎಸ್‌ಕೆ ತಂಡ ಐದು ಬಾರಿ ಅಂದರೆ 2010, 2011, 2018, 2021 ಹಾಗೂ 2023ರಲ್ಲಿ ಟ್ರೋಫಿ ಗೆದ್ದಿದೆ. 2010 ಮತ್ತು 2014ರಲ್ಲಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಜಯಿಸಿತ್ತು.

45 ವರ್ಷ ವಯಸ್ಸಿನ ಅವರು, 272 ​ಐಪಿಎಲ್ ಪಂದ್ಯಗಳನ್ನು ಆಡಿದ್ದು, ಸಿಎಸ್‌ಕೆ ಪರ ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರನಾಗಿಯೂ ದಾಖಲೆ ನಿರ್ಮಿಸಿದ್ದಾರೆ. ಒಟ್ಟು 5,314 ರನ್‌ಗಳನ್ನು ಸಿಡಿಸಿದ್ದಾರೆ. 2020ರ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.