Premada Oorali: 'ಪ್ರೇಮದ ಊರಲಿ' ಚಿತ್ರಕ್ಕೆ ಮನಸೋತ ಪ್ರೇಕ್ಷಕರು.. ಭರ್ಜರಿ ಕಲೆಕ್ಷನ್!
Premada Oorali: ಕನ್ನಡದ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ.
Premada Oorali: ಇದೇ ಸೆ.25 ರಂದು ಬರೀ 60 ಶೋ ಪ್ರದರ್ಶನದೊಂದಿಗೆ ಬಿಡುಗಡೆಗೊಂಡ ಕನ್ನಡದ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಮ್ಯೂಸಿಕಲ್ ರೋಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾಕ್ಕೆ ಪ್ರೇಕ್ಷಕರು ಕೂಡ ಮನಸೊತ್ತಿದ್ದಾರೆ.
ಈ ಚಿತ್ರವು ಮೊದಲ ವಾರವೇ ಹೊಸ ದಾಖಲೆ ಬರೆದಿದ್ದು, ಒಟ್ಟು 1,703 ಶೋಗಳು ಪ್ರದರ್ಶನಗೊಂಡಿವೆ. ನಿನ್ನೆ ಅಂದರೆ 7ನೇ ದಿನದವರೆಗೆ ರೂ.7.92 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂಬ ವಿವರಗಳು ಸಿಕ್ಕಿವೆ.
ಇದು ಹಳ್ಳಿಯೊಂದರ ತಂದೆ-ಮಗನ ಕಥೆಯಾಗಿದೆ. ಶ್ರೀ ಮಹದೇವ್, ರಂಗಾಯಣ ರಘು, ತಪಸ್ವಿನಿ ಪೂನಾಚ ಹಾಗೂ ರಾಮಿಕಾ ಶಿವು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಮನೋಜ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ವೆನಿಲ್ಲಾ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಜಂಟಿಯಾಗಿ ನಿರ್ಮಾಣ ಮಾಡಲಾಗಿದೆ.
ಸುನಾದ್ ಗೌತಮ್ ಮ್ಯೂಸಿಕ್ ನೀಡಿದ್ದು, ಈಗಾಗಲೇ ಸಿನಿಮಾದ ಹಾಡುಗಳು ಹಿಟ್ ಆಗಿವೆ. ರಾಜ್‌ಕಾಂತ್ ಎಸ್.ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.