Ultraviolette: 343 ಕಿ.ಮೀ ರೇಂಜ್.. ಅಲ್ಟ್ರಾವೈಲೆಟ್ ಎಕ್ಸ್47 ವೆನಂ ಇ-ಬೈಕ್ ಬಿಡುಗಡೆ.. ಬೆಲೆ ಎಷ್ಟು?

Ultraviolette X47 Venom: ನೂತನ 'ಅಲ್ಟ್ರಾವೈಲೆಟ್ ಎಕ್ಸ್47 ವೆನಂ' ಇ-ಬೈಕ್ ಗುರುವಾರ ಬಿಡುಗಡೆಗೊಂಡಿದೆ.

Oct 23, 2026 - 19:10
Ultraviolette: 343 ಕಿ.ಮೀ ರೇಂಜ್.. ಅಲ್ಟ್ರಾವೈಲೆಟ್ ಎಕ್ಸ್47 ವೆನಂ ಇ-ಬೈಕ್ ಬಿಡುಗಡೆ.. ಬೆಲೆ ಎಷ್ಟು?

Ultraviolette X47 Venom: ಯುವಕರಿಗೆ ಭರ್ಜರಿ ಸಿಹಿಸುದ್ದಿ ಲಭ್ಯವಾಗಿದೆ. ಹೊಚ್ಚ ಹೊಸ 'ಅಲ್ಟ್ರಾವೈಲೆಟ್ ಎಕ್ಸ್-47 ವೆನಂ' ಗುರುವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು, ನವೆಂಬರ್ ತಿಂಗಳಲ್ಲಿ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. 

ಇದು ರೂ.2,65,000 ಲಕ್ಷದಿಂದ ರೂ.3,99,900 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎಕ್ಸ್47 ವೆನಂ (X47 Venom), ಎಕ್ಸ್47 ವೆನಂ ಪ್ಲಸ್ (X47 Venom+), ಎಕ್ಸ್47 ವೆನಂ ರೆಕಾನ್ (X47 Venom Recon) ಹಾಗೂ ಎಕ್ಸ್47 ವೆನಂ ರೆಕಾನ್ ಪ್ಲಸ್ (X47 Venom Recon+) ಎಂಬ ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 

ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲೈಟ್ ಮತ್ತು ಎಲ್ಇಡಿ  ಟೇಲ್‌ಲೈಟ್ ಆಯ್ಕೆಯನ್ನು ಹೊಂದಿದೆ. ಆಫ್ಟರ್‌ಬರ್ನರ್ ಯೆಲ್ಲೋ, ಟರ್ಬೊ ರೆಡ್, ಕಾಸ್ಮಿಕ್ ಬ್ಲ್ಯಾಕ್ ಮತ್ತು ಸ್ಟೆಲ್ಲಾರ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 

ನೂತನ 'ಅಲ್ಟ್ರಾವೈಲೆಟ್ ಎಕ್ಸ್-47 ವೆನಂ' ಇ-ಬೈಕ್, 7.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 11 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. 227 ರಿಂದ 343 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 

ಇದು 155 ಕೆಎಂಪಿಹೆಚ್ ಟಾಪ್ ಸ್ಪೀಡ್ ಒಳಗೊಂಡಿದ್ದು, ಬರೀ 2.7 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಟಿಎಫ್‌ಟಿ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕನ್ಸೋಲ್, ಇಂಟಿಗ್ರೇಟೆಡ್ ಫ್ರಂಟ್ & ರಿಯರ್ ಡ್ಯಾಶ್‌ಕ್ಯಾಮ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಪಾರ್ಕ್ ಅಸಿಸ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.