ಧರ್ಮಸ್ಥಳ ಲಕ್ಷ ದೀಪೋತ್ಸವ: 5 ದಿನಗಳ ಸಾಂಸ್ಕೃತಿಕ ಹಬ್ಬ, ಇಲ್ಲಿದೆ ಸಂಪೂರ್ಣ ವಿವರ

Dharmasthala Laksha Deepotsava: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಡಿ.4 ರಿಂದ 8 ರವರೆಗೆ ನಡೆಯಲಿದೆ.

Nov 22, 2026 - 14:30
Nov 22, 2026 - 14:32
ಧರ್ಮಸ್ಥಳ ಲಕ್ಷ ದೀಪೋತ್ಸವ: 5 ದಿನಗಳ ಸಾಂಸ್ಕೃತಿಕ ಹಬ್ಬ, ಇಲ್ಲಿದೆ ಸಂಪೂರ್ಣ ವಿವರ

ಬೆಳ್ತಂಗಡಿ: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಡಿ.4 ರಿಂದ 8 ರವರೆಗೆ ನಡೆಯಲಿದೆ.

ಲಕ್ಷದೀಪೋತ್ಸವ ಕಾರ್ಯಕ್ರಮಗಳ ವಿವರ:

* ಡಿ.4 (ಶುಕ್ರವಾರ): ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆ ಮತ್ತು ವಸ್ತುಪ್ರದರ್ಶನ ವೇದಿಕೆಯಲ್ಲಿ ಪ್ರತಿದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು. 

* ಡಿ.5 (ಶನಿವಾರ): ಕೆರೆ ಕಟ್ಟೆ ಉತ್ಸವ.

* ಡಿ.6 (ಆದಿತ್ಯವಾರ): ಲಲಿತೋದ್ಯಾನ ಉತ್ಸವ, ಅಮೃತವರ್ಷಿಣಿ ವೇದಿಕೆಯಲ್ಲಿ ಲಲಿತಕಲಾ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು.

* ಡಿ.7 (ಸೋಮವಾರ): ಕಂಚಿಮಾರು ಕಟ್ಟೆ ಉತ್ಸವ, ಅಮೃತವರ್ಷಿಣಿ ವೇದಿಕೆಯಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

* ಡಿ.8 (ಮಂಗಳವಾರ): ಗೌರಿಮಾರು ಕಟ್ಟೆ ಉತ್ಸವ, ಅಮೃತವರ್ಷಿಣಿ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು.

* ಡಿ.9 (ಬುಧವಾರ): ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ.

ವಸ್ತುಪ್ರದರ್ಶನ ಮಂಟಪದ ಕಾರ್ಯಕ್ರಮಗಳು

* ಡಿ.4 (ಶುಕ್ರವಾರ): 

ಬೆಳಗ್ಗೆ 9-30 ಗಂಟೆಗೆ ರಾಜ್ಯ ಮಟ್ಟದ ವಸ್ತುಪ್ರದರ್ಶನ ಉದ್ಘಾಟನೆ, ಕೆ.ಹರೀಶ್ ಕುಮಾರ್ (ಅಧ್ಯಕ್ಷರು, ಮೆಸ್ಕಾಂ, ಮಂಗಳೂರು) ಅವರಿಂದ ಚಾಲನೆ. 
ಸಂಜೆ 6 ರಿಂದ 6.55: ದೇಶಭಕ್ತಿ ಭಾವ ಸುಧೆ - ನವೀನ್ ಪ್ರಸಾದ್ ಜಾಂಬ್ಲೆ, ಬೆಂಗಳೂರು.
ರಾತ್ರಿ 7 ರಿಂದ 7.45: ಈಶ-ವಿಷ್ಣವ್ ಭಕ್ತಿ ನೃತ್ಯಮ್ - ವಿದುಷಿ ಬಿಂದು ಶಂಕರ್, ಬೆಂಗಳೂರು.
ರಾತ್ರಿ 7.50 ರಿಂದ 8.45: ಭರತ ನೃತ್ಯ - ಕಲಾವರ್ಣ ಸ್ಕೂಲ್ ಆಫ್ ಡ್ಯಾನ್ಸ್ (ನಿರ್ದೇಶನ: ಹರ್ಷಿಣಿ ಯೋಗೀಶ್).
ರಾತ್ರಿ 8.50 ರಿಂದ 9.45: ಭರತನಾಟ್ಯ - ಶಿವಗಂಗಾ ಅಕಾಡೆಮಿ, ಬೆಂಗಳೂರು (ನಿರ್ದೇಶನ: ವಿದುಷಿ ಶ್ರೀಮತಿ ಆಶಾ ಕುಮಾರ್).
ರಾತ್ರಿ 9.50 ರಿಂದ 11: ಕಾಮಿನೀ ಕಾವಟ್ಟಿ - ಯಕ್ಷಗಾನ, ವಿದ್ಯಾರ್ಥಿಗಳು, ಎಸ್‌ಡಿಎಂ ಪ್ರೌಢ ಶಾಲೆ, ಧರ್ಮಸ್ಥಳ (ನಿರ್ದೇಶನ : ಶ್ರೀ ಲಕ್ಷ್ಮಣ ಗೌಡ, ಬೆಳಾಲು).

* ಡಿ.5 (ಶನಿವಾರ):

ಸಂಜೆ 6 ರಿಂದ 6.55: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ - ಮಂಜುಳಾ ಮುಲ್ಕಡ್ಕ ಸಂಬಾಳಮಠ (ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಸಂಗೀತ ಕಲಾವಿದರು).
ರಾತ್ರಿ 7 ರಿಂದ 7.45: ಭರತನಾಟ್ಯ - ಶಿವಪ್ರಿಯ - ಭಾರತೀ ನೃತ್ಯ ಕಲಾ ಕೇಂದ್ರ ಯಲ್ಲಾಪುರ (ನಿರ್ದೇಶನ: ವಿದುಷಿ ಶ್ರೀಮತಿ ಸುಮಾ ವೆಂಕಟ್ರಮಣ ಹೆಗಡೆ).
ರಾತ್ರಿ 7.50 ರಿಂದ 8.45: ಸ್ವರಸಮರ್ಪಣೆ - ಕುಮಾರಿ ದಿವ್ಯನಿಧಿ ಬೈಂದೂರು ಮತ್ತು ಬಳಗ.
ರಾತ್ರಿ 8.50 ರಿಂದ 9.45: ನೃತ್ಯ ನೀಲಾಂಜನ - ಶಂಕರ ಸ್ಕೂಲ್ ಆಫ್ ಡ್ಯಾನ್ಸ್, ಬೆಂಗಳೂರು (ನಿರ್ದೇಶನ: ವಿದುಷಿ ಲಕ್ಷ್ಮಿ ರಾವ್).
ರಾತ್ರಿ 10 ರಿಂದ 11: ಹಳೆಯ ಚಿತ್ರಗೀತೆಗಳ ಸುಮಧುರ ಗಾಯನ - 'ಎದೆತುಂಬಿ ಹಾಡುವೆನು' ಮತ್ತು 'ಸರಿಗಮಪ ಲಿಟ್ಲ್ ಚಾಂಪ್ಸ್' ಖ್ಯಾತಿಯ ಅನನ್ಯ ಭಟ್ ಉಜಿರೆ ಮತ್ತು ತಂಡ. 

* ಡಿ.6 (ಆದಿತ್ಯವಾರ): 

ಸಂಜೆ 5.30 ರಿಂದ 6.25: ನಾದಸುರಭಿ - ಡಾ. ವಿದ್ಯಾ ಎಸ್ ರಾವ್ ಮತ್ತು ತಂಡ, ಮಣಿಪಾಲ.
ಸಂಜೆ 6.30 ರಿಂದ 7.15: ನೃತ್ಯಸೇವೆ - ಆನಂದಿ ಸಹೋದರಿಯರು, ಬೆಳ್ಳಾರೆ.
ರಾತ್ರಿ 7.20 ರಿಂದ 8.15: ಕಳಾಸಂಗಮ - ಕಣ್ಣೀಮರ ಕಲಾ ತಂಡ, ಹೆಮ್ಮಾಡಿ.
ರಾತ್ರಿ 8.20 ರಿಂದ 9.15: ಕೃಷ್ಣಂ ವಂದೇ ಜಗದ್ಗುರುಮ್ - 'ವೈಷ್ಣವಿ ನಾಟ್ಯಾಲಯ', ಪುತ್ತೂರು (ನಿರ್ದೇಶನ: ವಿದುಷಿ ಯೋಗೀಶ್ವರಿ ಜಯಪ್ರಕಾಶ್).
ರಾತ್ರಿ 9.20 ರಿಂದ 10.30: ಭಕ್ತಿ ಭಾವ ಚಿತ್ರ ಸಂಗಮ - 'ಸರಿಗಮಪ' ಖ್ಯಾತಿಯ ರಜತ್ ಮಯ್ಯ ಸಾರಥ್ಯದಲ್ಲಿ 'ಯುವ ತರಂಗ' ತಂಡ, ಬೆಂಗಳೂರು.
 
* ಡಿ.7 (ಸೋಮವಾರ): 

ಸಂಜೆ 5.30 ರಿಂದ 6.25: ಏಕಾದಶಿ ದೇವಿಮಹಾತ್ಮೆ - ಯಕ್ಷಗಾನ - ಶ್ರೀದೇವಿ ಮಹಿಳಾ ಯಕ್ಷ ತಂಡ, ಬಾಲವನ ಪುತ್ತೂರು (ನಿರ್ದೇಶನ: ಶ್ರೀಮತಿ ಇಂದಿರಾ ಪಿ. ಆಚಾರ್ಯ).
ಸಂಜೆ 6.30 ರಿಂದ 7.25: ಭರತನಾಟ್ಯ - ವಿದುಷಿ ಅನನ್ಯ ರಂಜನಿ, ಮೂಡುಬಿದ್ರೆ.
ರಾತ್ರಿ 7.30 ರಿಂದ 8.25: ನೃತ್ಯಪ್ರದರ್ಶನ - ಸಂಕಲ್ಪ ನೃತ್ಯ ನಿರಂತರ ತಂಡ (ನಿರ್ದೇಶನ: ಶ್ರೀ ಕಾರ್ತಿಕ್ ಗೌಡ ಹೆಚ್.ಬಿ)
ರಾತ್ರಿ 8.30 ರಿಂದ 9.25: ಮಾಯಾ ಮ್ಯಾಜಿಕ್ - ಜಾದೂ ಪ್ರದರ್ಶನ - ಜಾದೂ ಮಾಂತ್ರಿಕ ಪುಷ್ಪರಾಜ ನೆಲ್ಯಾಡಿ ಮತ್ತು ಬಳಗ
ರಾತ್ರಿ 9.30 ರಿಂದ 10.30: ಸಂಗೀತ ರಸ ಸಂಜೆ - ಶ್ರೀಧರ್ ಶೆಟ್ಟಿ ಮತ್ತು ತಂಡ, ಧರ್ಮಸ್ಥಳ

* ಡಿ.8 (ಮಂಗಳವಾರ):

ಸಂಜೆ 5.30 ರಿಂದ 6.25: ಭಕ್ತಿ ಸಂಗೀತ - ಸನ್ಮಯ್ ಪುತ್ತೂರು - ಝೀ ಕನ್ನಡ 'ಸರಿಗಮಪ' ಸೆಮಿಫೈನಲಿಸ್ಟ್.
ಸಂಜೆ 6.30 ರಿಂದ 7.25: ಭರತನಾಟ್ಯ - ನಾಟ್ಯಕಲಾ ಮೈತ್ರಿ ಸ್ಕೂಲ್ ಆಫ್ ಡ್ಯಾನ್ಸ್ (ನಿರ್ದೇಶನ: ವಿದುಷಿ ಮೈತ್ರಿ ಕೃಷ್ಣ, ಬೆಂಗಳೂರು).
ರಾತ್ರಿ 7.30 ರಿಂದ 8.25: ಕ್ಲಾರಿಯೋನೆಟ್ ಮತ್ತು ವಾದ್ಯ ಸಮ್ಮಿಲನ - ಆರ್.ಮೋಹನ್, ಆಕಾಶವಾಣಿ 'ಎ' ಗ್ರೇಡ್ ಕಲಾವಿದರು ಮತ್ತು ತಂಡ, ಮೈಸೂರು.
ರಾತ್ರಿ 8.30 ರಿಂದ 9.25: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ - ವಿದುಷಿ ಸಂಗೀತಾ ರಘು ಯಲ್ಲಾಪುರ ಮತ್ತು ತಂಡ.
ರಾತ್ರಿ 9.30 ರಿಂದ 10.25: ಭರತನಾಟ್ಯ - ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್, ಮೈಸೂರು (ನಿರ್ದೇಶನ: ವಿದುಷಿ ವಿದ್ಯಾರಾವ್).
ರಾತ್ರಿ 10.30 ರಿಂದ 11.30: ಜಾನಪದ ಸಂಗೀತ ವೈಭವ - ಜಾನಪದ ಜೋಗಿ ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡ, ಮೈಸೂರು.

ಲಲಿತಕಲಾ ಗೋಷ್ಠಿ: ಡಿ.6 (ಆದಿತ್ಯವಾರ), ಅಮೃತವರ್ಷಿಣಿ ಸಭಾಭವನ

ಸಂಜೆ 5-30 ರಿಂದ 7-30: ನಾಗಸ್ವರ ವಾದನ.
ರಾತ್ರಿ 7-45 ರಿಂದ 9-15: ಕರ್ನಾಟಕ ಶಾಸ್ತ್ರೀಯ ಸಂಗೀತ, ವಿದ್ವಾನ್ ಪ್ರಿನ್ಸ್ ರಾಮ ವರ್ಮಾ, ತಿರುವನಂತಪುರಂ ಮತ್ತು ತಂಡ.
ರಾತ್ರಿ 9-15 ರಿಂದ 10-45: ಧರ್ಮಸ್ಥಳ ಕ್ಷೇತ್ರ ಮಹಾತ್ಮೆ - ನೃತ್ಯರೂಪಕ, ನಂದಗೋಕುಲ' ಶ್ವೇತಾ ಅರೆಹೊಳೆ ಮತ್ತು ತಂಡ.

ಸರ್ವಧರ್ಮ ಸಮ್ಮೇಳನ: ಡಿ.7 (ಸೋಮವಾರ) ಸಂಜೆ 5ಕ್ಕೆ, ಸ್ಥಳ - ಅಮೃತವರ್ಷಿಣಿ ಸಭಾಭವನ

ಉದ್ಘಾಟನೆ: ತೇಜಸ್ವಿ ಸೂರ್ಯ (ಸಂಸದರು, ಬೆಂಗಳೂರು).
ಅಧ್ಯಕ್ಷತೆ: ಆಚಾರ್ಯ ಡಾ.ಲೋಕೇಶ್ ಮುನಿಜಿ (ಸಂಸ್ಥಾಪಕರು, ಅಹಿಂಸಾ ವಿಶ್ವ ಭಾರತಿ & ವಿಶ್ವ ಶಾಂತಿ ಕೇಂದ್ರ).
ಉಪನ್ಯಾಸಕರು: ಮೊಹಮ್ಮದ್ ಅಸ್ಲಂ ಮೀಯಾ (ಸಾಮಾಜಿಕ ಕಾರ್ಯಕರ್ತರು), ವ.ಸ್ವಾಮಿ ಬಾಸಿಲ್ ವಾಸ್ (ನಿರ್ದೇಶಕರು, ಸಂತ ಲಾರೆನ್ಸರ ಪುಣ್ಯಕ್ಷೇತ್ರ ಬೋಂದೆಲ್, ಮಂಗಳೂರು). 
ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ 8-30ಕ್ಕೆ (ಸಂಗೀತ ಕಾರ್ಯಕ್ರಮ: ಶಿವಶ್ರೀ ತೇಜಸ್ವಿ ಸೂರ್ಯ - ಪ್ರಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು 'ಆಹುತಿ'ಯ ಸ್ಥಾಪಕಿ, ಬೆಂಗಳೂರು).

ಸಾಹಿತ್ಯ ಸಮ್ಮೇಳನ: ಡಿ.8 (ಮಂಗಳವಾರ) ಸಂಜೆ 5ಕ್ಕೆ, ಸ್ಥಳ - ಅಮೃತವರ್ಷಿಣಿ ಸಭಾಭವನ

ಉದ್ಘಾಟನೆ: ಡಾ.ಸುಧಾ ಯಾದವ್ (ರಾಜ್ಯಪಾಲರು, ಕರ್ನಾಟಕ).
ಅಧ್ಯಕ್ಷತೆ: ವೈ.ವಿ.ಗುಂಡೂರಾವ್ (ಖ್ಯಾತ ಭಾಷಣಕಾರರು ಮತ್ತು ನಿರೂಪಕರು, ಬೆಂಗಳೂರು).
ಉಪನ್ಯಾಸಕರು: ಮಂಜುನಾಥ ಅಜ್ಜಂಪುರ (ಲೇಖಕರು, ಅಂಕಣಕಾರರು ಹಾಗೂ ಸಂವಾದಕರು, ಬೆಂಗಳೂರು), ಡಾ.ವರದರಾಜ ಚಂದ್ರಗಿರಿ (ವಿಶ್ರಾಂತ ಪ್ರಾಂಶುಪಾಲರು, ಪುತ್ತೂರು), ಡಾ.ಪದ್ಮಿನಿ ನಾಗರಾಜು (ಪ್ರಾಧ್ಯಾಪಕರು, ಲೇಖಕರು ಹಾಗೂ ಸಂಘಟಕರು, ಬೆಂಗಳೂರು).
ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ 8-30ಕ್ಕೆ 'ಅನುಮಾರ್ಗ' - ರಾಧೆ ಬಗ್ಗೆ ಮತ್ತು ಪ್ರೊಜೆಕ್ಟ್ ಸಂಸ್ಕೃತಿ

ಸಮವಸರಣ ಪೂಜೆ: 

ಡಿ.9ರ ಸಂಜೆ 6-30ಕ್ಕೆ  ಮಹೋತ್ಸವ ಸಭಾಭವನದಲ್ಲಿ ಸಮವಸರಣ ಪೂಜೆ ಮತ್ತು ಹೇಮಾವತಿ ವೀ.ಹೆಗ್ಗಡೆ ಮಾರ್ಗದರ್ಶನದಲ್ಲಿ ‘ಗುಳ್ಳಕಾಯಜ್ಜಿ’ ದೃಶ್ಯ ಕಾವ್ಯ ಪ್ರದರ್ಶನಗೊಳ್ಳಲಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.