Indian Bank: ಇಂಡಿಯನ್ ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. 1,500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ನ.5 ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.
ವಿದ್ಯಾರ್ಹತೆ: ಅಂಗೀಕೃತ ವಿವಿಯಿಂದ ಯಾವುದೇ ವಿಷಯದಲ್ಲಿ ಪದವಿ (ಬ್ಯಾಚುಲರ್ ಡಿಗ್ರಿ) ಉತ್ತೀರ್ಣರಾಗಿರಬೇಕು. ಪದವಿಯ ಫಲಿತಾಂಶವು ಏಪ್ರಿಲ್ 1, 2022 ಮತ್ತು ನವೆಂಬರ್ 1, 2026ರ ಮಧ್ಯೆ ಪ್ರಕಟಗೊಂಡಿರಬೇಕು.
ವಯೋಮಿತಿ: ನವೆಂಬರ್ 1, 2026ಕ್ಕೆ ಅನ್ವಯವಾಗುವಂತೆ 20 ರಿಂದ 28 ವರ್ಷ ವಯಸ್ಸಿನವರಾಗಿರಬೇಕು. ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಅಭ್ಯರ್ಥಿಗಳಿಗೆ 5 ವರ್ಷ/ ಒಬಿಸಿಯವರಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.
ತರಬೇತಿ ಅವಧಿ/ ಸ್ಟೈಫಂಡ್: ಅಭ್ಯರ್ಥಿಗಳನ್ನು 1 ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಮೆಟ್ರೋ/ ನಗರ ಶಾಖೆಗಳಲ್ಲಿ ರೂ.15,000 ಹಾಗೂ ಗ್ರಾಮೀಣ/ ಅರೆ-ನಗರ ಶಾಖೆಗಳಲ್ಲಿ ರೂ.12,300 ಸ್ಟೈಫಂಡ್ ನೀಡಲಾಗುತ್ತದೆ.
ಇಲ್ಲಿ ನೋಂದಣಿ ಕಡ್ಡಾಯ: ಬ್ಯಾಂಕ್‌ನಲ್ಲಿ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಮೊದಲು, ಅರ್ಹ ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್ ಪೋರ್ಟಲ್‌ನಲ್ಲಿ (NATS 2.0 Portal - www.nats.education.gov.in) ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.