Hyundai Bayon: ನೂತನ ಹ್ಯುಂಡೈ ಬೇಯಾನ್ SUV ಬಿಡುಗಡೆ.. ರೂ.10 ಲಕ್ಷ, 18.6 Km ಮೈಲೇಜ್
Hyundai Bayon: ಹೊಸ ಹ್ಯುಂಡೈ ಬೇಯಾನ್' ಎಸ್ಯುವಿ ಸೋಮವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.
Hyundai Bayon: ಹೊಚ್ಚ ಹೊಸ 'ಹ್ಯುಂಡೈ ಬೇಯಾನ್' ಎಸ್ಯುವಿ ಸೋಮವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ವೆನ್ಯೂ ಮತ್ತು ಕ್ರೆಟಾದ ಕ್ರಾಸ್ಓವರ್ ಮಾಡೆಲ್ ಆಗಿದ್ದು, ಆಕರ್ಷಕವಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ.
ಈ ಎಸ್ಯುವಿ ರೂ.10 ಲಕ್ಷದಿಂದ ರೂ.18 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಎಕ್ಸ್2 (HX2), ಹೆಚ್ಎಕ್ಸ್3 (HX3), ಹೆಚ್ಎಕ್ಸ್3 ಪ್ಲಸ್ (HX3 Plus), ಹೆಚ್ಎಕ್ಸ್5 (HX5), ಹೆಚ್ಎಕ್ಸ್6 (HX6), ಹೆಚ್ಎಕ್ಸ್8 (HX8) ಹಾಗೂ ಹೆಚ್ಎಕ್ಸ್10 (HX10) ಎಂಬ ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಬಂಪರ್ ಹಾಗೂ ದೊ ಗ್ರಿಲ್ ಅತ್ಯುತ್ತಮವಾಗಿದೆ. ಎಲ್ಇಡಿ ಹೆಡ್ಲ್ಯಾಂಪ್ಗಳು, 'ಎಲ್' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಡಿಆರ್ಎಲ್ಗಳು, ಅಗ್ರೆಸಿವ್ ಸಿಲ್ವರ್ ಸ್ಕಿಡ್ ಪ್ಲೇಟ್, ಟಾಲ್ ರೂಫ್ ರೈಲ್ಗಳನ್ನು ಹೊಂದಿದೆ. ಉತ್ತಮವಾದ ಎಲ್ಇಡಿ ಟೈಲ್ಲ್ಯಾಂಪ್ಗಳು, ಟೈಲ್ಗೇಟ್ ಮೇಲೆ 'ಬೇಯಾನ್' ಎಂದು ಬರೆಯಲಾಗಿದೆ. 17-ಇಂಚಿನ ಅಲಾಯ್ ವೀಲ್ಗಳು ತನ್ನದಾಗಿಸಿಕೊಂಡಿಕೊಂಡಿದೆ.
ಹೊಸ 'ಬೇಯಾನ್' ಅಟ್ಲಾಸ್ ವೈಟ್, ಟೈಟಾನಿಯಂ ಬ್ಲ್ಯಾಕ್, ಫಿರಿ ರೆಡ್, ಕ್ಲಾಸಿ ಬ್ಲ್ಯೂ, ಗೋಲ್ಡನ್ ಬ್ರೌನ್ ಮತ್ತು ಇಕೋಟೋನಿಕ್ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಈ ಎಸ್ಯುವಿ 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 505 ಲೀ.ನಷ್ಟು ಬೂಟ್ ಸ್ಪೇಸ್ನ್ನು ಪಡೆದಿದೆ.
ಇದು ಶಕ್ತಿಯುವವಾದ ಪವರ್ಟ್ರೇನ್ನ್ನು ಹೊಂದಿದೆ. 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 115 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 144 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯೂನುವಲ್ ಟ್ರಾಸ್ಮಿಷನ್ / ಸಿವಿಟಿ ಗೇರ್ಬಾಕ್ಸ್ನ್ನು ಪಡೆದಿದೆ. 18.6 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ.
ನೂತನ 'ಹ್ಯುಂಡೈ ಬೇಯಾನ್' ಕ್ಯಾಬಿನ್ ವಿನ್ಯಾಸವು ಬೊಂಬಾಟ್ ಆಗಿದೆ. 12.3-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ, ಪನೋರಮಿಕ್ ಸನ್ರೂಫ್, 8-ವೇ ಪವರ್-ಅಡ್ಜಸ್ಟಬಲ್ ಡ್ರೈವರ್ ಸೀಟ್, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್ಲೆಸ್ ಫೋನ್ ಚಾರ್ಜರ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಹಾಗೂ ಡ್ರೈವ್ ಮೋಡ್ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಎಸ್ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್ಬ್ಯಾಗ್ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್ಗಳನ್ನು ಒಳಗೊಂಡಿದೆ.