ಮಂಗಳೂರು: ಮಧ್ವಾಚಾರ್ಯ ಜಯಂತಿ ಆಚರಣೆ

Mangaluru: ತುಳುಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು 'ಮಧ್ವಾಚಾರ್ಯ ಜಯಂತಿ' ಕಾರ್ಯಕ್ರಮವು ಜರುಗಿತು.

Oct 21, 2026 - 17:17
ಮಂಗಳೂರು: ಮಧ್ವಾಚಾರ್ಯ ಜಯಂತಿ ಆಚರಣೆ

ಮಂಗಳೂರು: ಪ್ರತಿಯೊಬ್ಬ ವ್ಯಕ್ತಿಯು ಬಡ ಜನರಿಗೆ ಮಾಡುವ ಸೇವೆಯೇ ದೇವರಿಗೆ ಕಟ್ಟುವ ತೆರಿಗೆ. ಜನಸೇವೆಯು ಉಪಕಾರವಾಗುವುದಿಲ್ಲ ಅದನ್ನು ದೇವರಿಗೆ ಕಟ್ಟುವ ತೆರಿಗೆ ಎಂದು ಪರಿಗಣಿಸಬೇಕು ಇದು ಮಧ್ವಾಚಾರ್ಯರು ಕೊಟ್ಟಿರುವ ಸಂದೇಶ ಎಂದು ಉಡುಪಿಯ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ರಾಜಗೋಪಾಲಾಚಾರ್ ಹೇಳಿದರು. 

ತುಳುಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ನಡೆದ 'ಮಧ್ವಾಚಾರ್ಯ ಜಯಂತಿ' ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಮಾತನಾಡಿ, ಮಧ್ವಾಚಾರ್ಯರು ಈ ನಾಡು ಕಂಡ ಶ್ರೇಷ್ಠ ದಾರ್ಶನಿಕರು. ಅವರು ಬಡವ ಬಲ್ಲಿದ ಭೇದವಿಲ್ಲದೆ ಜಾತಿ ಧರ್ಮವ ಮೀರಿ ಎಲ್ಲರ ಏಳಿಗೆಯನ್ನು ಬಯಸುತ್ತಿದ್ದರು ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಫಿಕಾಡ್ ಮಾತನಾಡಿ, ಮಧ್ವಾಚಾರ್ಯರು ತುಳವರು ಮತ್ತು ತುಳು ಭಾಷೆಯ ಬೆಳವಣಿಗೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಮಧ್ಚಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ನುಡಿನಮನ ಸಲ್ಲಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ಕರ್ನಾಟಕ ಧಾರ್ಮಿಕ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಕೊರಿಯಾರ್ ವಂದಿಸಿದರು. ಗಣೇಶ್ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.