ಮಂಗಳೂರು: ನ.29 ರಂದು 'ಸಾಯಿ ಮಾ' ಫೋಟೊ ಪ್ರೇಮ್-ಸ್ಟುಡಿಯೋ ಶುಭಾರಂಭ
Mangaluru: ನ.29 ರಂದು 'ಸಾಯಿ ಮಾ' ಫೋಟೊ ಪ್ರೇಮ್-ಸ್ಟುಡಿಯೋ ಶುಭಾರಂಭವಾಗಲಿದೆ.
ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನ ಗಣೇಶ್ ಮಹಲ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭವಾಗುತ್ತಿರುವ 'ಸಾಯಿ ಮಾ' ಫ್ರೇಮ್ಸ್, ಸ್ಟುಡಿಯೋ, ಬ್ಯಾಗ್ಸ್, ಆಲ್ಬಂ ಮತ್ತು ಗಿಫ್ಟ್ ಐಟಮ್ಸ್ ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭ ನ.29 ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಸ್ಥಾಪಕ ಪ್ರೊ.ಹಿಲ್ಡಾ ರಾಯಪ್ಪನ್ ಅವರು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಈ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕದ್ರಿ ದೇವಸ್ಥಾನದ ವೇದಮೂರ್ತಿ ಕೃಷ್ಣ ಅಡಿಗ, ಗಣೇಶ್ ಮಹಲ್ ಮಾಲೀಕ ಡಾ.ನರಸಿಂಹಮೂರ್ತಿ ಹಾಗೂ ಎಸ್‌ಕೆಪಿಎ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರವರ್ತಕ ಅಬಿನಂದನ್ ಎಂ.ಸಿ ಮತ್ತು ಶೈಲೇಶ್ ಕುಮಾರ್ ಮನವಿ ಮಾಡಿದ್ದಾರೆ.
ಸಾಯಿ ಮಾ ಮಳಿಗೆಯಲ್ಲಿ ನಿಮ್ಮ ಫೋಟೊ ಅಥವಾ ಇನ್ಯಾವುದೇ ಗಿಫ್ಟ್ ನೀಡಲು ಬಯಸುವ ಫೋಟೊಗಳಿಗೆ ಅಂದ-ಚಂದವಾದ ಫ್ರೇಮ್ ಹಾಕಿ ಕೊಡಲಾಗುತ್ತದೆ. ಸ್ಟುಡಿಯೋ ಮೂಲಕ ನಿಮ್ಮ ಫೋಟೋ ಜೊತೆಗೆ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳ ಆಲ್ಫಂಗಳನ್ನು ಕೂಡ ಮಾಡಿಕೊಡಲಾಗುತ್ತದೆ. ಇವುಗಳ ಹೊರತಾಗಿ ಇಲ್ಲಿ ಹೊಸ ವಿನ್ಯಾಸದ ಆಕರ್ಷಕ ಬ್ಯಾಗ್ ಮತ್ತು ಗಿಫ್ಟ್ ಐಟಂಗಳು ಕೂಡ ಮಾರಾಟಕ್ಕೆ ಲಭ್ಯವಿದೆ.