ಶೇ 85 ರಷ್ಟು ಭಾರತೀಯರಿಗೆ ಸ್ವಂತ ಉದ್ಯಮ ಆರಂಭಿಸುವ ಆಸೆ: ಲಿಂಕ್ಡ್‌ಇನ್ ವರದಿ

LinkedIn: ಶೇ 85 ರಷ್ಟು ಭಾರತೀಯರಿಗೆ ಸ್ವಂತ ಉದ್ಯಮ ಆರಂಭಿಸುವ ಆಸೆ ಹೊಂದಿದ್ದಾರೆ ಎಂದು ಲಿಂಕ್ಡ್‌ಇನ್ ವರದಿ ತಿಳಿಸಿದೆ.

Nov 26, 2026 - 19:18
Nov 26, 2026 - 19:18
ಶೇ 85 ರಷ್ಟು ಭಾರತೀಯರಿಗೆ ಸ್ವಂತ ಉದ್ಯಮ ಆರಂಭಿಸುವ ಆಸೆ: ಲಿಂಕ್ಡ್‌ಇನ್ ವರದಿ

ನವದೆಹಲಿ: ದೇಶದ ಶೇ.85 ರಷ್ಟು ಜನರು ಸ್ವಂತ ಉದ್ಯಮ ಆರಂಭಿಸುವ ಆಸಕ್ತಿ ಹೊಂದಿದ್ದಾರೆ. ಇದು ಜಾಗತಿಕ ಸರಾಸರಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂದು ಲಿಂಕ್ಡ್‌ಇನ್‌ನ ವರದಿ ತಿಳಿಸಿದೆ. 
 
ಯುವಜನರು ಈ ಬದಲಾವಣೆಗೆ ಪ್ರಮುಖ ಕಾರಣವಾಗಿದ್ದು, ಶೇ.94 ರಷ್ಟು ಜನರೇಷನ್ ಝೆಡ್ (Gen Z) ಮತ್ತು ಶೇ.90 ರಷ್ಟು ಮಿಲೇನಿಯಲ್ಸ್ ಉದ್ಯಮಶೀಲತೆಯ ಆಸಕ್ತಿ ಹೊಂದಿದ್ದಾರೆ. 
 
ಕಳೆದ 2022 ರಿಂದ ಲಿಂಕ್ಡ್‌ಇನ್‌ನಲ್ಲಿ ತಮ್ಮ ಪ್ರೊಫೈಲ್‌ಗೆ 'ಫೌಂಡರ್' ಎಂದು ಸೇರಿಸಿಕೊಂಡವರ ಸಂಖ್ಯೆ ಶೇ.190 ರಷ್ಟು ಹೆಚ್ಚಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.90ಕ್ಕೂ ಹೆಚ್ಚು ಭಾರತೀಯ ಸಣ್ಣ ಉದ್ಯಮ ಮಾಲೀಕರು ಎಐ ಬಳಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.