ಭಾರತ ಟೆಸ್ಟ್ ತಂಡ: ಮೂರನೇ ಕ್ರಮಾಂಕದಲ್ಲಿನ್ನು ಪಡಿಕ್ಕಲ್‌ ಫಿಕ್ಸ್‌?

India Test Team: ಭಾರತ ಟೆಸ್ಟ್ ತಂಡದ ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಆಡುವ ನಿರೀಕ್ಷೆಯಿದೆ.

Nov 24, 2026 - 20:08
Nov 24, 2026 - 20:21
ಭಾರತ ಟೆಸ್ಟ್ ತಂಡ: ಮೂರನೇ ಕ್ರಮಾಂಕದಲ್ಲಿನ್ನು ಪಡಿಕ್ಕಲ್‌ ಫಿಕ್ಸ್‌?

India Test Team: ಚೇತೇಶ್ವರ ಪೂಜಾರ ಬಳಿಕ ಭಾರತದ ಟೆಸ್ಟ್ ತಂಡದಲ್ಲಿ ಮೂರನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನಕ್ಕೆ ಸೂಕ್ತ ಆಟಗಾರನ ಹುಡುಕಾಟ ಮುಂದುವರಿದಿತ್ತು. 
 
ಕಳೆದ 32 ಟೆಸ್ಟ್‌ಗಳಲ್ಲಿ ಏಳು ಆಟಗಾರರನ್ನು ಈ ಸ್ಥಾನದಲ್ಲಿ ಪ್ರಯೋಗಿಸಿದರೂ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಇದೀಗ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ತಮ್ಮ ಪ್ರದರ್ಶನದಿಂದ ಭರವಸೆ ಮೂಡಿಸಿದ್ದಾರೆ. 
 
ಶ್ರೀಲಂಕಾ ವಿರುದ್ಧ 167 ರನ್‌ಗಳ ಶತಕ, ಕೊಲಂಬೊದಲ್ಲೂ ಮತ್ತೊಂದು ಶತಕ ಹಾಗೂ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ 80 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ತಾಳ್ಮೆ ಮತ್ತು ಆಕ್ರಮಣಕಾರಿ ಆಟದ ಸಮತೋಲನದಿಂದ ಪಡಿಕ್ಕಲ್ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಯ್ಕೆಯಾಗಿ ಕಾಣಿಸಿಕೊಂಡಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.