ಮಂಗಳೂರು: ಸಂಚಾರ ದಕ್ಷಿಣ ಪೊಲೀಸ್ ಠಾಣೆ ಸ್ಥಳ ಬದಲಾವಣೆ
Mangaluru: ಇಲ್ಲಿನ ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಸ್ಥಳ ಬದಲಾವಣೆಯಾಗಿದೆ.
ಮಂಗಳೂರು: ಇಲ್ಲಿನ ಸಂಚಾರ ದಕ್ಷಿಣ ಪೊಲೀಸ್ ಠಾಣೆಯು ಈ ಹಿಂದೆ ಜಪ್ಪಿನಮೊಗೆರು, ರಾಷ್ಟ್ರೀಯ ಹೆದ್ದಾರಿ-66ರ ಬಳಿಯ ವಾಹನ ಗ್ಯಾರೇಜ್ ಮಾಲೀಕರ ಸಂಘದ ಸಮೀಪದ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಪ್ರಸ್ತುತ, ಠಾಣೆಯ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಸ್ಥಳಾಂತರಿಸಲಾಗಿದ್ದು, ಇನ್ಮುಂದೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಠಾಣೆಯ ವಿಳಾಸ:
ಡೋರ್ ನಂ. 5-78, ಪುಷ್ಪ ನಿವಾಸ
ಶ್ರೀ ಕೃಷ್ಣ ಕಲ್ಯಾಣ ಮಂಟಪದ ಎದುರುಗಡೆ,
ಸಂಕೋಳಿಗೆ, ಕೋಟೆಕಾರ್ ಗ್ರಾಮ,
ಉಳ್ಳಾಲ ತಾಲೂಕು -575023
ದೂರವಾಣಿ ಸಂಖ್ಯೆ: 0824-2220850
ಮೊ.ಸಂ 9480805371
Google Map Location: https://maps.app.goo.gl/38Mscz54ZL6AHXfJ9
ಸಾರ್ವಜನಿಕರು ಸಂಚಾರ ದಕ್ಷಿಣ ಪೊಲೀಸ್ ಠಾಣೆಗೆ ಸಂಬಂಧಿಸಿದ ದೂರುಗಳು ಹಾಗೂ ಇತರೆ ಪೊಲೀಸ್ ಸೇವೆಗಳಿಗಾಗಿ ಮುಂದಿನ ದಿನಗಳಲ್ಲಿ ಈ ಮೇಲ್ಕಂಡ ಹೊಸ ವಿಳಾಸವನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.