ವಿವೇಕಾನಂದ ಪಿಯು ಕಾಲೇಜಿನಲ್ಲಿ ಖೋಖೋ ಪಂದ್ಯಾವಳಿ
Vivekananda PU College: ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ಖೋಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಪದವಿ-ಪೂರ್ವ ವಿಭಾಗದ ವತಿಯಿಂದ, 'ಜಿಲ್ಲಾ ಮಟ್ಟದ ಖೋಖೋ ಪಂದ್ಯಾವಳಿ'ಯು ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ಸಹಯೋಗದಲ್ಲಿ ಅದೇ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಈ ಪಂದ್ಯಾವಳಿಯನ್ನು ಮಂಗಳೂರಿನ ಕೆನರಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಕಾರ್ತಿಕ್ ಎನ್ ಉದ್ಘಾಟಿಸಿ, ಮಾತನಾಡಿದರು. 'ಖೋಖೋ ಕೇವಲ ಮನರಂಜನೆಯ ಆಟವಲ್ಲ. ಇದು ದೈಹಿಕ ಆರೋಗ್ಯ, ಮಾನಸಿಕ ಚುರುಕುತನ, ಶಿಸ್ತು, ಸಹಕಾರ ಮತ್ತು ಕ್ರೀಡಾಸ್ಫೂರ್ತಿಯನ್ನು ಬೆಳೆಸುವ ಅತ್ಯುತ್ತಮ ಕ್ರೀಡೆಯಾಗಿದೆ' ಎಂದು ಹೇಳಿದರು.

ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಮುರಳಿಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಜ್ಯೋತಿ ಹಾಗೂ ದಯಾಮಣಿ ಉಪಸ್ಥಿತರಿದ್ದರು.
ಇದೇ ಪಂದ್ಯಾವಳಿಯಲ್ಲಿ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳಾದ ತರುಣ್ ಕುಮಾರ್, ಸಾತ್ವಿಕ್ ಮತ್ತು ದೇಶ್ಚಿತ್ ಯಸ್ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಇವರುಗಳಿಗೆ ಪವನ್ ಕುಮಾರ್ ತರಬೇತಿ ನೀಡಿದ್ದಾರೆ.