ದೀಪಾವಳಿಯಂದು ಲಕ್ಷ್ಮೀ ಪೂಜೆಯ ಮಹತ್ವ

Diwali: ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿಯು ಅತ್ಯಂತ ವಿಶೇಷ, ಸಂಭ್ರಮದ ಹಬ್ಬವಾಗಿದೆ.

Nov 8, 2026 - 18:03
Nov 8, 2026 - 18:04
ದೀಪಾವಳಿಯಂದು ಲಕ್ಷ್ಮೀ ಪೂಜೆಯ ಮಹತ್ವ

Diwali: ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿಯು ಅತ್ಯಂತ ವಿಶೇಷ, ಸಂಭ್ರಮದ ಹಬ್ಬವಾಗಿದೆ. ಕತ್ತಲೆಯನ್ನು ಸರಿಸಿ ಬೆಳಕನ್ನು ತರುವ ಈ ಹಬ್ಬವು ಕೇವಲ ದೀಪಗಳ ಹಬ್ಬ ಮಾತ್ರವಲ್ಲ, ಬದಲಿಗೆ ನಮ್ಮ ಜೀವನದಲ್ಲಿ ಸಮೃದ್ಧಿಯನ್ನು ಆಹ್ವಾನಿಸುವ ದಿನ. ದೀಪಾವಳಿಯ ಪ್ರಮುಖ ಆಚರಣೆಗಳಲ್ಲಿ ಅದು ಲಕ್ಷ್ಮಿ ಪೂಜೆಯೂ ಒಂದು. ಸಂಪತ್ತು ಮತ್ತು ಸಮೃದ್ಧಿಯ ಅದಿದೇವತೆಯಾದ ಲಕ್ಷ್ಮಿಯನ್ನು ಆರಾಧಿಸುವುದರ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ.

ಸಾಕ್ಷತ್ ಲಕ್ಷ್ಮಿದೇವಿಯನ್ನು ಕೇವಲ ಲೌಕಿಕ ಸಂಪತ್ತು ಅಥವಾ ಸಿರಿವಂತಿಕೆಯ ದೇವತೆ ಮಾತ್ರ ಅಲ್ಲ. ಆಕೆಯ ಭೌತಿಕ, ಆಧ್ಯಾತ್ಮಿಕ, ಬೌದ್ಧಿಕ ಸಿರಿವಂತಿಕೆಯ ಶಕ್ತಿ. ಹಿಂದೂ ಧರ್ಮದಲ್ಲಿ ಲಕ್ಷ್ಮಿದೇವಿಯ ಅಷ್ಟರೂಪಗಳನ್ನು ಅತ್ಯಂತ ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸ್ವಚ್ಛತೆ, ಶಿಸ್ತು ಮತ್ತು ಸಕಾರಾತ್ಮಕ ವಾತಾವರಣವಿರುವ ಮನೆಗಳಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಹೀಗಾಗಿ ದೀಪಾವಳಿಯ ಸಂದರ್ಭದಲ್ಲಿ ಮನೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಬಣ್ಣಬಣ್ಣದ ರಂಗೋಲಿಗಳಿಂದ ಅಲಂಕರಿಸುವುದರ ಜೊತೆಗೆ, ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣಗಳನ್ನು ಕಟ್ಟುವ ಸಂಪ್ರದಾಯವಿದೆ. ಇವೆಲ್ಲವೂ ಮನೆಗೆ ಸೌಂದರ್ಯವನ್ನು ನೀಡುವುದರ ಜತೆಗೆ, ಶುಭ, ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಸ್ವಾಗತಿಸುವ ಸಂಕೇತಗಳಾಗಿವೆ.

ಪೌರಾಣಿಕ ಹಿನ್ನೆಲೆಯ ಪ್ರಕಾರ, ಪ್ರಭು ಶ್ರೀರಾಮನು 14 ವರ್ಷಗಳ ವನವಾಸವನ್ನು ಮುಗಿಸಿ, ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಹಿಂದುರಿಗಿದ ದಿನವನ್ನು ದೀಪಾವಳಿಯನ್ನಾಗಿ ಆಚರಿಸಲಾಗುತ್ತದೆ. ಅಯೋಧ್ಯೆಯ ಜನರು ತಮ್ಮ ಅಚ್ಚುಮೆಚ್ಚಿನ ರಾಜನ ಸ್ವಾಗತಕ್ಕಾಗಿ ದೀಪಗಳನ್ನು ಬೆಳಗಿ ಸಂಭ್ರಮಿಸುವ ಸಂಕೇತವಾಗಿ ದೀಪಾವಳಿ ಆಚರಣೆಗೆ ಬಂತು. 

ಈ ಶುಭ ಸಂದರ್ಭದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಯಶಸ್ಸಿನ ಪ್ರತೀಕವಾಗಿರುವ ಲಕ್ಷ್ಮಿ ಮತ್ತು ಗಣೇಶ ಕೂಡಾ ಬಂದರು ಎಂದು ನಂಬಲಾಗಿದೆ.  

ಲಕ್ಷ್ಮಿ ದೇವಿಯು ಸಂಪತ್ತು, ಸಮೃದ್ಧಿ ಮತ್ತು ಐಶ್ವರ್ಯದ ಅಧಿದೇವತೆಯಾಗಿದ್ದು, ಆಕೆಯನ್ನು ಪೂಜಿಸುವುದರಿಂದ ಆರ್ಥಿಕ ಸಮೃದ್ಧಿ ಹಾಗೂ ಯಶಸ್ಸು ಲಭಿಸುತ್ತದೆ ಎಂಬ ನಂಬಿಕೆಯಿದೆ. ಗಣೇಶನು ವಿಘ್ನನಿವಾರಕನಾಗಿದ್ದು, ಯಾವುದೇ ಹೊಸ ಕಾರ್ಯ ಅಥವಾ ಉದ್ಯಮವನ್ನು ಆರಂಭಿಸುವ ಮುನ್ನ ಆತನನ್ನು ಪ್ರಾರ್ಥಿಸುವುದು ವಾಡಿಕೆ. ದೀಪಾವಳಿಯಂದು ಲಕ್ಷ್ಮಿ ಮತ್ತು ಗಣೇಶ ಇಬ್ಬರನ್ನೂ ಒಟ್ಟಿಗೆ ಪೂಜಿಸುವ ಸಂಪ್ರದಾಯವಿದೆ. ಇದು ಸಂಪತ್ತು ಮತ್ತು ಬುದ್ಧಿವಂತಿಕೆಯ ಸಮನ್ವಯವನ್ನು ಸಂಕೇತಿಸುತ್ತದೆ. ಸಂಪಾದಿಸಿದ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಬಳಸಲು ಬುದ್ಧಿವಂತಿಕೆ ಮತ್ತು ವಿವೇಚನೆಯೂ ಅಗತ್ಯ ಎಂಬ ಸಂದೇಶವನ್ನು ಈ ಪೂಜಾ ಪದ್ಧತಿ ಸಾರುತ್ತದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.