ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027.. ಬರಹಗಳ ಆಹ್ವಾನ

Sankranti Havyaka Literature Festival 2027: ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027ಕ್ಕೆ ಬರಹಗಳನ್ನು ಆಹ್ವಾನಿಸಲಾಗಿದೆ.

Nov 6, 2026 - 16:31
Nov 6, 2026 - 16:31
ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027.. ಬರಹಗಳ ಆಹ್ವಾನ

ಬೆಂಗಳೂರು: ಕರ್ನಾಟಕದ ಕರಾವಳಿ (ಕಾಸರಗೋಡು ಸೇರಿ), ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷೆಯ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ಆರಂಭಗೊಂಡ, ಹವ್ಯಕ ಭಾಷೆಗಾಗಿ ಮೀಸಲಾಗಿರುವ 'ಹವ್ಯಕ ವಿಶ್ವ' ಎಂಬ ಡಿಜಿಟಲ್‌ ವೇದಿಕೆಯ (ವೆಬ್‌ಸೈಟ್‌) ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ 'ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027' ಎಂಬ ಶೀರ್ಷಿಕೆಯ ಅಡಿಯಲ್ಲಿ ಹವ್ಯಕ ಭಾಷೆಯ ಸಾಹಿತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹವ್ಯಕ ಭಾಷಾ ಸಾಹಿತ್ಯಾಸಕ್ತರಿಂದ ಬರಹಗಳನ್ನು ಆಹ್ವಾನಿಸಲಾಗಿದೆ.
 
ಕಥೆ, ಕವನ, ಪ್ರಬಂಧ ಮತ್ತು ಲಘು ಬರಹ- ಈ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 
 
1. ಕಥೆ: ವಿಷಯ- ವಿಷಯದ ಆಯ್ಕೆ ಸ್ಪರ್ಧಿಗಳ ವಿವೇಚನೆಗೆ ಬಿಟ್ಟದ್ದು
2. ಕವನ: ವಿಷಯ- ಹಳ್ಳಿ ಮನೆಯೋ/ಬದುಕೋ, ಪೇಟೆ ಮನೆಯೋ/ಬದುಕೋ
3. ಪ್ರಬಂಧ: ಹವ್ಯಕ ಸಂಸ್ಕೃತಿಯ ಸಂರಕ್ಷಣೆಲಿ ಯುವ ಪೀಳಿಗೆಯ ಜವಾಬ್ದಾರಿ
4. ಲಘುಬರಹ: ವಿಷಯ ಆಯ್ಕೆ ಸ್ಪರ್ಧಿಗಳ ವಿವೇಚನೆಗೆ ಬಿಟ್ಟದ್ದು
 
ಆಯ್ಕೆಯಾದ ಬರಹಗಳಿಗೆ ಮೊದಲ ಬಹುಮಾನ ರೂ.3,000 ನಗದು, ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ದ್ವಿತೀಯ ಬಹುಮಾನವಾಗಿ ರೂ.1,500 ನಗದು, ಫಲಕ ಮತ್ತು ಪ್ರಮಾಣಪತ್ರ ಕೊಡಲಾಗುತ್ತದೆ.
 
ಆಸಕ್ತರು ಬರಹಗಳನ್ನು ಕಳುಹಿಸಲು ಕೊನೆಯ ದಿನ ಡಿ.1, 2026 ಆಗಿದ್ದು, ಫಲಿತಾಂಶವನ್ನು 2027ರ ಸಂಕ್ರಾಂತಿ ದಿನ (ಜನವರಿ 14) ಪ್ರಕಟಿಸಲಾಗುತ್ತದೆ.
 
ಬರಹಗಳು ಯೂನಿಕೋಡ್‌, ನುಡಿ ಫಾಂಟ್‌ನಲ್ಲಿ ಇರಬೇಕು. ವರ್ಡ್‌, ಪಿಡಿಎಫ್‌, ಕಾಗದದಲ್ಲಿ ಬರೆದು, ನಂತರ ಸ್ಕ್ಯಾನ್‌ ಮಾಡಿಯೂ ಕಳುಹಿಸಬಹುದು.
 
ಬರಹಗಳನ್ನು ಕಳುಹಿಸಬೇಕಾದ ಇ-ಮೇಲ್‌ ವಿಳಾಸ: editor@havyakavishwa.com, havyakavishwa@gmail.com
ವಾಟ್ಸ್ಆ್ಯಪ್: +91 6360604365
 
* ಎಲ್ಲ ಬರಹಗಳು ಕಡ್ಡಾಯವಾಗಿ ಹವ್ಯಕ ಭಾಷೆಯಲ್ಲೇ ಇರಬೇಕು.
* ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು
 
ಹೆಚ್ಚಿನ ಮಾಹಿತಿಗೆ havyakavishwa.comಗೆ ಭೇಟಿ ನೀಡಬಹುದು

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.