Jailer-2: ಜೈಲರ್-2 ಬರೋಬ್ಬರಿ 600 ಕೋಟಿ ಗಳಿಕೆಯತ್ತ!
Jailer-2: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ತಮಿಳಿನ ಆಕ್ಷನ್ - ಕಾಮಿಡಿ ಥ್ರಿಲ್ಲರ್ ಸಿನಿಮಾ 'ಜೈಲರ್ 2' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.
Jailer-2: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ತಮಿಳಿನ ಆಕ್ಷನ್ - ಕಾಮಿಡಿ ಥ್ರಿಲ್ಲರ್ ಸಿನಿಮಾ 'ಜೈಲರ್ 2' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.
ಸ್ಯಾಕ್ನಿಲ್ಕ್ ಪ್ರಕಾರ, 7 ದಿನವಾದ ಬುಧವಾರದಂದು ರೂ.28.15 ಕೋಟಿ ನೆಟ್ ಗಳಿಕೆಯಾಗಿದ್ದು, 14,470 ಶೋಗಳು ಪ್ರದರ್ಶನಗೊಂಡಿವೆ. ಈ ಮೂಲಕ ವಿಶ್ವಾದ್ಯಂತ ರೂ.576.45 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ರಜನಿಕಾಂತ್ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಶಿವ ರಾಜ್‌ಕುಮಾರ್, ಮೋಹನ್‌ಲಾಲ್, ಹೃತಿಕ್ ರೋಷನ್, ವಿದ್ಯಾ ಬಾಲನ್, ಎಸ್.ಜೆ.ಸೂರ್ಯ, ರಮ್ಯಾ ಕೃಷ್ಣನ್, ಮಿಥುನ್ ಚಕ್ರವರ್ತಿ, ಜಾಕಿ ಶ್ರಾಫ್, ಸುರಾಜ್ ವೆಂಜಾರಮೂಡು, ಯೋಗಿ ಬಾಬು ಹಾಗೂ ಮಿರ್ನಾ ಮೆನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್‌ನಡಿ ನಿರ್ಮಿಸಲಾಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.