Ramayana: ಮೊದಲ ದಿನವೇ ರೂ.127.50 ಕೋಟಿ ಗ್ರಾಸ್ ಕಲೆಕ್ಷನ್!
Ramayana: ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ' ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡಿದೆ.
Ramayana: ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ' ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದ್ದು, ಪ್ರೇಕ್ಷಕರು ಕೂಡ ಮನಸೊತ್ತಿದ್ದಾರೆ.
ಸ್ಯಾಕ್ನಿಲ್ಕ್ ಪ್ರಕಾರ, ಮೊದಲ ದಿನವಾದ ಗುರುವಾರದಂದು ಭಾರತದಲ್ಲಿ 25,200 ಶೋಗಳು ಪ್ರದರ್ಶನಗೊಂಡಿದ್ದು, ರೂ.64.85 ಕೋಟಿ ನೆಟ್ ಗಳಿಕೆ ಕಂಡಿದೆ. ಹಿಂದಿ ಆವೃತ್ತಿ 20,678 ಪ್ರದರ್ಶನಗಳಿಂದ ರೂ.47.50 ಕೋಟಿ, ಕನ್ನಡ ಆವೃತ್ತಿ 1,197 ಪ್ರದರ್ಶನಗಳಿಂದ ರೂ.7.25 ಕೋಟಿ, ತೆಲುಗು ಆವೃತ್ತಿ 1,776 ಪ್ರದರ್ಶನಗಳಿಂದ ರೂ.6 ಕೋಟಿ, ತಮಿಳು ಆವೃತ್ತಿ 992 ಪ್ರದರ್ಶನಗಳಿಂದ ರೂ.2.60 ಕೋಟಿ ಹಾಗೂ ಮಲಯಾಳಂ ಆವೃತ್ತಿ 557 ಪ್ರದರ್ಶನಗಳಿಂದ ರೂ.1.50 ಕೋಟಿ ಕಲೆಕ್ಷನ್ ಮಾಡಿದೆ.
ಈ ಮೂಲಕ ವಿಶ್ವಾದ್ಯಂತದ ಒಟ್ಟು ರೂ.127.50 ಕೋಟಿ ಗ್ರಾಸ್ ಗಳಿಕೆಯಾಗಿದೆ.
ಲಂಕೇಶ್ವರ ರಾವಣನಾಗಿ ಯಶ್ ಆರ್ಭಟಿಸಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದು, ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನಾಗಿ ಸನ್ನಿ ಡಿಯೋ ಬಣ್ಣ ಹಚ್ಚಿದ್ದಾರೆ.
ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. 'ಪ್ರೈಮ್ ಫೋಕಸ್ ಸ್ಟುಡಿಯೋಸ್' ಮಾಲೀಕ ನಮಿತ್ ಮಲ್ಹೋತ್ರಾ ಜೊತೆಗೂಡಿ, ತಮ್ಮದೇ ಸ್ವಂತ ಬ್ಯಾನರ್ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್'ನಡಿ ಯಶ್, ಈ ಬಿಗ್-ಬಜೆಟ್ ಸಿನಿಮಾವನ್ನು ನಿರ್ಮಿಸಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್ನಿಂದ ಹಿಡಿದು ಇನ್ಸ್ಟಾ, ಎಕ್ಸ್, ಫೇಸ್ಬುಕ್, ಯೂಟ್ಯೂಬ್, ನ್ಯೂಸ್ ಆಪ್ವರೆಗೆ ಎಲ್ಲ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.