KEA: ವಿವಿಧ ಹುದ್ದೆಗಳ ನೇಮಕಾತಿ.. ಲಿಖಿತ ಪರೀಕ್ಷೆ ದಿನಾಂಕ ಪ್ರಕಟ

KEA: ವಿವಿಧ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ದಿನಾಂಕಗಳನ್ನು ಕೆಇಎ ಪ್ರಕಟಿಸಿದೆ.

Nov 5, 2026 - 21:14
KEA: ವಿವಿಧ ಹುದ್ದೆಗಳ ನೇಮಕಾತಿ.. ಲಿಖಿತ ಪರೀಕ್ಷೆ ದಿನಾಂಕ ಪ್ರಕಟ

ಬೆಂಗಳೂರು: ವಿವಿಧ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. 
 
ಕಾರಾಗೃಹ ಇಲಾಖೆಯ ವಾರ್ಡರ್ ಕಮ್ ನರ್ಸಿಂಗ್, ವಾರ್ಡರ್, ದ್ವಿತೀಯ ದರ್ಜೆ ಬೋಧಕರು ಗ್ರೇಡ್-2 ಹುದ್ದೆಗಳಿಗೆ ನ.20 ರಂದು ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
 
ಕಾರಾಗೃಹ ಇಲಾಖೆಯ ವಾರ್ಡರ್ , ದ್ವಿತೀಯ ದರ್ಜೆ ಬೋಧಕರು ಗ್ರೇಡ್ -2 ಒಟ್ಟು 576 ಹುದ್ದೆಗಳಿಗೆ ನ.21 ರಂದು ಸಾಮಾನ್ಯ ಜ್ಞಾನ ಪರೀಕ್ಷೆ ಜರುಗಲಿದೆ.
 
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲಾ ಶಿಕ್ಷಕರ 767 ಹುದ್ದೆಗಳಿಗೆ ನ.22 ರಿಂದ 30 ರವರೆಗೆ ವಿವಿಧ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
 
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈ ದಿನಾಂಕಗಳಂದು ನಡೆಯುವ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಿ ಮಾಡಿಕೊಂಡು ಪರೀಕ್ಷೆ ಬರೆಯಲು ಕೆಇಎ ಕೋರಿದೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.