Physics Wallah: ದ್ವಿಗುಣವಾಗಲಿದೆಯೇ 'ಫಿಸಿಕ್ಸ್ ವಾಲಾ' ಷೇರು ಬೆಲೆ?

Physics Wallah: ಸದ್ಯಕ್ಕೆ ಅತ್ಯಂತ ಅಗ್ಗವಾಗಿರುವ ಷೇರುಗಳಲ್ಲಿ 'ಫಿಸಿಕ್ಸ್ ವಾಲಾ' ಕೂಡ ಒಂದು. ಆದರೆ ಈ ಷೇರು ಮುಂದಿನ ದಿನಗಳಲ್ಲಿ ಹೂಡಿಕೆದಾರರಿಗೆ ಭಾರೀ ಲಾಭ ತಂದುಕೊಡುವ ನಿರೀಕ್ಷೆಯಿದೆ.

Nov 5, 2026 - 11:13
Nov 5, 2026 - 11:14
Physics Wallah: ದ್ವಿಗುಣವಾಗಲಿದೆಯೇ 'ಫಿಸಿಕ್ಸ್  ವಾಲಾ' ಷೇರು ಬೆಲೆ?

Physics Wallah: ಸದ್ಯಕ್ಕೆ ಅತ್ಯಂತ ಅಗ್ಗವಾಗಿರುವ ಷೇರುಗಳಲ್ಲಿ 'ಫಿಸಿಕ್ಸ್  ವಾಲಾ' ಕೂಡ ಒಂದು. ಆದರೆ ಈ ಷೇರು ಮುಂದಿನ ದಿನಗಳಲ್ಲಿ ಹೂಡಿಕೆದಾರರಿಗೆ ಭಾರೀ ಲಾಭ ತಂದುಕೊಡುವ ನಿರೀಕ್ಷೆಯಿದೆ. 

ದೇಶದ ಪ್ರಮುಖ ಎಜುಟೆಕ್ ಸಂಸ್ಥೆ ಫಿಸಿಕ್ಸ್‌ವಾಲಾ ಷೇರುಗಳ ಖರೀದಿಗೆ, ಮೊತಿಲಾಲ್ ಓಸ್ವಾಲ್ ಬ್ರೋಕರೇಜ್ ಸಂಸ್ಥೆ ಶಿಫಾರಸು ಮಾಡಿದೆ. ಪ್ರತಿ ಷೇರಿಗೆ ರೂ.200 ಗುರಿ ಬೆಲೆ ನಿಗದಿಪಡಿಸಿದೆ. ಆದರೆ, ಮಂಗಳವಾರ ಸಂಸ್ಥೆ ಪ್ರಕಟಿಸಿದ ಎರಡನೇ ತ್ರೈಮಾಸಿಕದ ಫಲಿತಾಂಶ ಈ ಷೇರಿನ ಬೆಳೆಯನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ.

ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆ ರೂ.143.6 ಕೋಟಿ ನಿವ್ವಳ ಲಾಭ ಗಳಿಸಿದ್ದು,  ಆದಾಯದಲ್ಲಿ ಶೇ.18 ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಸ್ಥೆಯ ನಿವ್ವಳ ಲಾಭ ಎರಡು ಪಟ್ಟು ಹೆಚ್ಚಳವಾಗಿದೆ.

ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಸಂಸ್ಥೆ ರೂ.69.7 ಕೋಟಿ ನಿವ್ವಳ ಲಾಭ ಗಳಿಸಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ.88.3 ಕೋಟಿ ನಷ್ಟ ಅನುಭವಿಸಿತ್ತು ಎಂದು ಸಂಸ್ಥೆ ಪ್ರಕಟಿಸಿದೆ.

ಇದೇ ವೇಳೆ, ಸಂಸ್ಥೆಯ ಕಾರ್ಯಾಚರಣೆಗಳಿಂದ ಬಂದ ಆದಾಯದಲ್ಲಿ ಶೇ.18 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ರೂ.1,051.2 ಕೋಟಿಯಿದ್ದ ಆದಾಯ ಪ್ರಸಕ್ತ ವರ್ಷದ ಇದೇ ಅವಧಿಯಲ್ಲಿ ರೂ.1,242.3 ಕೋಟಿಗೆ ಏರಿಕೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯ ರೂ.1,050.3 ಕೋಟಿ ಇತ್ತು.
 
ಲೇಖಕರು: ಸುರಭಿ ಭಟ್
ಇಮೇಲ್: bhatsurabhi311@gmail.com

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.