ದಿನ ಭವಿಷ್ಯ: ಇವತ್ತು ಯಾರಿಗೆ ಶುಭ?
Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ನಿಷ್ಠುರದ ನುಡಿ ಬೇಡ.. ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಖಚಿತ. ವಸ್ತ್ರ, ಸಿದ್ಧ ಉಡುಪು,ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಅಶಕ್ತರಿಗೆ ನೆರವಾಗುವ ಅವಕಾಶ..ಆಶಾ ಭಾವನೆಯನ್ನು ಹೆಚ್ಚಿಸಿಕೊಳ್ಳಿ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ ಶನಿಮಹಾತ್ಮೆ ಓದಿ.
ವೃಷಭ:
ಉದರದ ಆರೋಗ್ಯದ ಕಡೆಗೆ ಗಮನ ಇರಲಿ.. ಕನ್ಯಾನ್ವೇಷಿಗಳಿಗೆ ಶುಭ ವಾರ್ತೆ. ಅಲ್ಪಾವಧಿ ಹೂಡಿಕೆಗಳು ಬೇಡ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಸ್ಟೇಶನರಿ, ಪುಸ್ತಕ ವ್ಯಾಪಾರಿಗಳಿಗೆ ಅನುಕೂಲ. ಗಣಪತಿ ಅಥರ್ವಶೀರ್ಷ ದತ್ತಾತ್ರೇಯ ಸ್ತೋತ್ರ, ಅಷ್ಟಲಕ್ಷ್ಮೀ ಸ್ತೋತ್ರ ಓದಿ.
ಮಿಥುನ:
ನಯವಂಚಕರಿಂದ ದೂರವಿರಿ.. ಅಧ್ಯಾತ್ಮ ಜೀವಿಗಳಿಗೆ ಆಂತರಿಕ ಸಮಾಧಾನ. ಗೃಹಿಣಿಯರಿಗೆ ತಕ್ಕಮಟ್ಟಿಗೆ ಕ್ಷೇಮದ ದಿನ. ಸಜ್ಜನರ ಸಹವಾಸದಿಂದ ಆನಂದ. ಗಣಪತಿ ಅಥರ್ವಶೀರ್ಷ, ರಸಮರಕ್ಷಾ ದ್ತೋತ್ರ, ಆದಿತ್ಯ ಹೃದಯ ಓದಿ.
ಕರ್ಕಾಟಕ
ನಂಬಿ ಮೋಸ ಹೋಗಬೇಡಿ.. ಎಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಅನುಕೂಲ. ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ. ತಿಂಡಿ, ತೀರ್ಥ ವ್ಯಾಪಾರಿಗಳಿಗೆ ಲಾಭ. ತೋಟಗಾರಿಕೆ ಬೆಳೆಗಳಿಂದ ಲಾಭ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಸಿಂಹ:
ಸತ್ಕರ್ಮಿಗಳ ನೈತಿಕ ಬಲ ವೃದ್ಧಿ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಆಸ್ತಿ, ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸರ್ಕಾರಿ ನೌಕರರಿಗೆ ಸತ್ವಪರೀಕ್ಷೆ. ರಾತ್ರಿಯ ಹೊತ್ತಿನಲ್ಲಿ ದೂರ ಪ್ರಯಾಣ ಬೇಡ. ಗಣೇಶ ದ್ವಾದಶನಾಮ ಸ್ತೋತ್ರ, ನರದಹ ಕವಚ, ಲಕ್ಷ್ಮೀಸ್ತೋತ್ರ ಓದಿ.
ಕನ್ಯಾ:
ಮುಜುಗರದಿಂದ ಪಾರಾದ ಸಜ್ಜನರು.. ಹೊಲಿಗೆ, ಕಸೂತಿ ಬಲ್ಲವರಿಗೆ ಅದೃಷ್ಟದ ದಿನ. ಬಂಧುಗಳ ಮನೆಯ ಶುಭಕಾರ್ಯಕ್ಕೆ ಸಹಾಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ತೋಟಗಾರಿಕೆಯಲ್ಲಿ ಆಸಕ್ತಿ. ಗಣಪತಿ ಅಥರ್ವಶೀರ್ಷ, ವೆಂಕಟೇಶ್ವರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ತುಲಾ:
ಕೆಲವು ವರ್ಗದ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ.. ಲಲಿತಕಲೆಗಳಲ್ಲಿ ಪರಿಶ್ರಮ ಉಳ್ಳವರಿಗೆ ಸಂತೃಪ್ತಿ. ಸಾಮೂಹಿಕ ಪ್ರಾರ್ಥನೆಯಿಂದ ಸಮಾಜಕ್ಕೆ ಒಳಿತು. ಕರಕುಶಲ ಸಾಮಗ್ರಿ ವ್ಯಾಪಾರದಲ್ಲಿ ಲಾಭ. ಸಜ್ಜನರು ಅಪವಾದದ ಭೀತಿಯಿಂದ ಪಾರು. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.
ವೃಶ್ಚಿಕ:
ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು ಸಾಧನೆ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಭೂ ವ್ಯವಹಾರ ಕುದುರಿಸಲು ಪ್ರಯತ್ನ. ಕೈಮಗ್ಗದ ಕೆಲಸ ಬಲ್ಲವರಿಗೆ ಅವಕಾಶ. ಕೇಟರಿಂಗ್ ವ್ಯವಹಾರಸ್ಥರ ಸಮಸ್ಯೆ ಪರಿಹಾರ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ ಶಿವಾಷ್ಟೋತ್ತರ ಶತನಾಮ ಸ್ತೋತ್ರ ಓದಿ.
ಧನು:
ನೆಲ, ಜಲ ಸಂರಕ್ಷಣೆಯ ಕಾರ್ಯಗಳಲ್ಲಿ ಭಾಗಿ.. ಸಹೋದ್ಯೋಗಿ ಮಿತ್ರರಿಗೆ ಮಾರ್ಗದರ್ಶನ. ಸಣ್ಣ ಹೂಡಿಕೆಗಳಲ್ಲಿ ಸಾಮಾನ್ಯ ಲಾಭ. ಶಿಕ್ಷಕ ವರ್ಗದ ಹಿತರಕ್ಷಣೆಗೆ ಪ್ರಯತ್ನ. ಮಕ್ಕಳಲ್ಲಿ ಧಾರ್ಮಿಕ, ನೈತಿಕ ಪ್ರಜ್ಞೆ ವೃದ್ಧಿಗೆ ಸಹಾಯ. ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ರ, ಅಷ್ಡಲಕ್ಷ್ಮೀ ಸ್ಗೋತ್ರ ಓದಿ.
ಮಕರ:
ಶಿಕ್ಷಕ ವರ್ಗಕ್ಕೆ ಸಮಾಧಾನದ ದಿನ.. ನಿತ್ಯೋಪಯೋಗಿ ಸಾಮಗ್ರಿ ವಿತರಕರಿಗೆ ಸಡಿಲಾದ ಪೂರೈಕೆ ಒತ್ತಡ. ಹಿರಿಯರ ಆರೋಗ್ಯ ಸುಧಾರಣೆ. ನಷ್ಟವಿಲ್ಲದ ಪರೋಪಕಾರ ಮಾಡುವ ಅವಕಾಶ. ಅನ್ಯರ ಸದ್ಗುಣಗಳನ್ನು ಪ್ರಶಂಸಿಸಿರಿ. ಗಣೇಶ ಕವಚ, ದೇವೀಸ್ತೋತ್ರ, ಹನುಮಸನ್ ಚಾಲೀಸಾ ಓದಿ.
ಕುಂಭ:
ನಿತ್ಯ. ಸಂಪದಭಿವೃದ್ಧಿ.. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಗ್ನತೆ. ಯಂತ್ರೋಪಕರಣ ವ್ಯಾಪಾರಿಗಳ ಪಾಲಿಗೆ ಶುಭದಿನ. ಯುವಜನರ ಪಾಲುಗೊಳ್ಳುವಿಕೆಯಲ್ಲಿ ಶ್ರಮದಾನ. ಇಷ್ಟದೇವರ ದರ್ಶನದಿಂದ ಶುಭ. ಗಣೇಶ ತ್ರಿಶತಿ ದ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲ.. ಬಂಧುವರ್ಗದ ಜನರಿಗೆ ಸಹಾಯ. ಭೂ ವ್ಯವಹಾರದಲ್ಲಿ ಲಾಭ. ಬಂಗಾರದ ಕೆಲಸ ಬಲ್ಲವರಿಗೆ ಸದವಕಾಶ. ತಿಂಡಿ, ತಿನಿಸು ವ್ಯಾಪಾರಿಗಳಿಗೆ ಅನುಕೂಲದ ದಿನ. ಗಣೇಶ ಅಷ್ಡಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆಓದಿ.