ದಿನ ಭವಿಷ್ಯ: ಇಂದು ಯಾರಿಗೆ ಶುಭ?
Daily Horoscope: ಇಂದು (ಭಾನುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಆರು ದಿನಗಳ ದುಡಿಮೆಯ ಬಳಿಕ ವಿರಾಮ.. ಕೃಷಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಬಂಧುಗಳ ಮನೆಯಲ್ಲಿ ಪಿತೃಕಾರ್ಯ ಸಂಸಾರದಲ್ಲಿ ಪ್ರೀತಿ, ವಿಶ್ವಾಸ,ಸಮಾಧಾನಗಳ ವಾತಾವರಣ. ಗೃಹಿಣಿಯರಿಗೆ ಆನಂದದ ಅನುಭವ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
ವೃಷಭ:
ಶರೀರ, ಮನಸ್ಸುಗಳಿಗೆ ಒಂದು ದಿನದ ವಿಶ್ರಾಂತಿ.. ಪ್ರವಾಸದಲ್ಲಿರುವವರಿಗೆ ಹಳೆಯ ಗೆಳೆಯರ ಭೇಟಿ. ಬಂಧುಗಳ ಮನೆಯಲ್ಲಿ ಪೂರ್ವಜರಿಗೆ ಶ್ರದ್ಧಾಂಜಲಿ. ಇಷ್ಟದೇವರ ಆಲಯ ಸಂದರ್ಶನ. ಮಕ್ಕಳ ಪ್ರತಿಭೆ ಪ್ರದರ್ಸನಕ್ಕೆ ವಿಶೇಷ ಸಂದರ್ಭ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.
ಮಿಥುನ:
ಪೂರ್ಣಾರೋಗ್ಯದಿಂದ ಸಂತೃಪ್ತ ಮನಸ್ಸು.. ಬಾಲ್ಯದ ಒಡನಾಡಿಯ ಅನಿರೀಕ್ಷಿತ ದರ್ಶನ. ಪಿತ್ರಾರ್ಜಿತ ಆಸ್ತಿ ಅಭಿವೃದ್ಧಿ ಕಾರ್ಯ ವೀಕ್ಷಣೆ. ಲೇವಾದೇವಿ ವ್ಯವಹಾರ ಹಿಡಿಸದು. ಧಾರ್ಮಿಕ ಚಿಂತನೆಯಲ್ಲಿ ಮನಸ್ಸು ಲೀನ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಕರ್ಕಾಟಕ:
ವಿರಾಮದ ಆನಂದವನ್ನು ವೃದ್ಧಿಗೊಳಿಸಿದ ನೆಂಟರು.. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಕೈತುಂಬಾ ಲಾಭ. ಕೃಷಿಯಲ್ಲಿ ಹೊಸ ಪ್ರಯೋಗ ಮುಂದುವರಿಕೆ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಶಸ್ತ್ರವೈದ್ಯರಿಗೆ ಕೀರ್ತಿ ತರುವ ಕ್ಷಣಗಳು. ಗಣೇಶ ಕವಚ, ಶಿವಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.
ಸಿಂಹ:
ಸಹೋದ್ಯೋಗಿಗಳೊಡನೆ ಸಂತೋಷಕೂಟ.. ಉದ್ಯೋಗಾಸಕ್ತ ಹುಡುಗರಿಗೆ ಮಾರ್ಗದರ್ಶನ. ಐಟಿ ಉದ್ಯೋಗಿಗಳಿಗೆ ಆಪ್ತಸಲಹಾ ಕಾರ್ಯಕ್ರಮ. ಬಂಧುವರ್ಗದಲ್ಲಿ ಪಿತೃಗಳ ಸ್ಮರಣೆ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಆನಂದದ ದಿನ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಆದಿತ್ಯ ಹೃದಯ ಓದಿ.
ಕನ್ಯಾ:
ಸರ್ಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಮನಶ್ಶಾಂತಿ.. ಹಳೆಯ ಒಡನಾಡಿಯ ಪುನರ್ಮಿಲನ. ಕುಟುಂಬದ ಹಿರಿಯರ ಭೇಟಿ. ಕುಲದೇವರ ದೇವಾಲಯ, ನಾಗಸನ್ನಿಧಿ ಸಂದರ್ಶನ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ಗಣೇಶ ಕವಚ, ಹನುಮಾನ್ ಚಾಲೀಸಾ, ನವಗ್ರಹ ಸ್ತೋತ್ರ ಓದಿ.
ತುಲಾ:
ಸಹೋದ್ಯೋಗಿಯ ಮನೆಯ ಪಿತೃಕಾರ್ಯದಲ್ಲಿ ಭಾಗಿ.. ಅವಿವಾಹಿತರಿಗೆ ಶುಭಯೋಗ. ಮಹಿಳೆಯರ ಸ್ವೋದ್ಯೋಗ ಯೋಜನೆಗೆ ನಿರೀಕ್ಷೆ ಮೀರಿದ ಯಶಸ್ಸು. ಪರಿಸರ, ಪ್ರಕೃತಿ ಸಂರಕ್ಷಣೆಯ ಕಾರ್ಯದಲ್ಲಿ ಭಾಗಿ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ವೃಶ್ಚಿಕ:
ಉದ್ಯೋಗಾಸಕ್ತರಿಗೆ ಶುಭ ಸಮಾಚಾರ.. ಲೇವಾದೇವಿ ವ್ಯವಹಾರದಲ್ಲಿ ತೃಪ್ತಿಕರ ಲಾಭ. ಯಂತ್ರೋಪಕರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಮೆಕಾನಿಕ್ ವೃತ್ತಿಯವರಿಗೆ ಉದ್ಯೋಗಾವಕಾಶ. ದೂರಪ್ರವಾಸ ಕೈಗೊಂಡ ಹಿರಿಯರ ಪುನರಾಗಮನ. ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಅಷ್ಟಲಕ್ಷ್ಮೀ ಸ್ತೋತ್ರ ಓದಿ.
ಧನು:
ಆಂತರಿಕ ಸಾಧನೆಯಲ್ಲಿ ಪ್ರಗತಿ.. ಸಾಹಿತ್ಯ ಸಂಗೀತಾದಿ ಕಲಾಸಂಬಂಧಿ ಚಟುವಟಿಕೆಗಳಲ್ಲಿ ಆಸಕ್ತಿ. ಹಳೆಯ ಗೆಳೆಯರ ಸಂಪರ್ಕದಿಂದ ಹರ್ಷ. ಧಾರ್ಮಿಕ ಚಿಂತನೆಯಲ್ಲಿ ಮನಸ್ಸು ಲೀನ. ಯಂತ್ರೋಪಕರಣ ಬಿಡಿಭಾಗಗಳಿಗೆ ಅಧಿಕ ಬೇಡಿಕೆ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಮಕರ:
ಕೆಲಸದ ಒತ್ತಡಗಳಿಗೆ ಒಂದು ದಿನದ ವಿರಾಮ.. ಮನೆಮಂದಿಯೊಂದಿಗೆ ಪಿತೃಕಾರ್ಯದಲ್ಲಿ ಭಾಗಿ. ಬಂಧುಗಳ ಮನೆಯಲ್ಲಿ ಸಂತೋಷಕೂಟ. ಟೈಲರಿಂಗ್ ವೃತ್ತಿಯವರಿಗೆ ಅನುಕೂಲ. ಬಂಧುಗಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ. ಗಣಪತಿ ಅಥರ್ವಶೀರ್ಷ, ವೇದಸಾರ ಶಿವಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಕುಂಭ:
ವಾರವಿಡೀ ಅವಿಶ್ರಾಂತ ದುಡಿದರೂ ದೇಹಕ್ಕೆ ವಿಶ್ರಾಂತಿ ಇಲ್ಲ. ಉತ್ಪನ್ನಗಳಿಗಾಗಿ ಬಂದ ಬೇಡಿಕೆಗಳ ಕಡೆಗೆ ಗಮನ ಹರಿಸುವ ಅನಿವಾರ್ಯತೆ. ಸಮಾಜ ಸೇವಾ ಕಾರ್ಯಗಳತ್ತ ಗಮನ. ಮನೆಯಲ್ಲಿ ಹಿರಿಯರು, ಸಂಗಾತಿ, ಮಕ್ಕಳಿಗೆ ಸಂಭ್ರಮ.ರಾತ್ರಿ ಪ್ರಯಾಣದಲ್ಲಿ ಎಚ್ಚರ. ಗಣೇಶ ಕವಚ,ನರಸಿಂಹ ಕವಚ, ಶನಿಮಹಾತ್ಮೆ ಓದಿ.
ಮೀನ:
ಸಂಸಾರ,ಉದ್ಯೋಗ, ವ್ಯವಹಾರಗಳಲ್ಲಿ ಬಳಲಿದ ಬಳಿಕ ವಿರಾಮ.. ತಾಯಿಯ ಯೋಗಕ್ಷೇಮ ವಿಚಾರಣೆ. ಗುರುಹಿರಿಯರ ಭೇಟಿಗಾಗಿ ಸಣ್ಣ ಪ್ರಯಾಣ ಸಂಭವ. ಮನೆಮಂದಿಯ ಆರೋಗ್ಯ ಉತ್ತಮ. ಪಾಲುದಾರಿಕೆಯಲ್ಲಿ ಸಣ್ಣ ಉದ್ಯಮದ ಯೋಜನೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.