ಶೇ.85 ರಷ್ಟು ಏರಿಕೆಯ ನಿರೀಕ್ಷೆ: ಏಳು ಷೇರುಗಳ ಮೇಲೆ ವಿಶ್ಲೇಷಕರ ಚಿತ್ತ!
Stock Market: ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಹೂಡಿಕೆಗೆ ಉತ್ತಮ ಅವಕಾಶಗಳನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಸದ್ಯಕ್ಕೆ ಈ ಏಳು ಕಂಪನಿಗಳ ಷೇರುಗಳು ಲಾಭ ತಂದುಕೊಡಬಲ್ಲವು.
ಬೆಂಗಳೂರು: ಇರಾನ್ ಬಿಕ್ಕಟ್ಟು ಮತ್ತೆ ಉಲ್ಬಣಿಸಿರುವುದರಿಂದ ಈ ವಾರ ಷೇರು ಮಾರುಕಟ್ಟೆ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುವ ಸಾಧ್ಯತೆ ಇಲ್ಲ. ಆದರೆ, ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಹೂಡಿಕೆಗೆ ಉತ್ತಮ ಅವಕಾಶಗಳನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಸದ್ಯಕ್ಕೆ ಈ ಏಳು ಕಂಪನಿಗಳ ಷೇರುಗಳು ಲಾಭ ತಂದುಕೊಡಬಲ್ಲವು. ವಿಶ್ಲೇಷಕರ ಅಂದಾಜಿನ ಪ್ರಕಾರ, ಈ ಷೇರುಗಳಲ್ಲಿ ಮುಂದಿನ ದಿನಗಳಲ್ಲಿ ಶೇ.50 ರಿಂದ ಶೇ.85 ರವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.
ನವೆಂಬರ್ 17, 2026ರ ವಹಿವಾಟಿನ ಮುಕ್ತಾಯದ ಬೆಲೆ ಹಾಗೂ ವಿಶ್ಲೇಷಕರ ಒಮ್ಮತದ ಆಧಾರದ ಮೇಲೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ 'ಆಯೆ ಫೈನಾನ್ಸ್' ಮೊದಲ ಸ್ಥಾನದಲ್ಲಿದೆ. ಈ ಕಂಪನಿಯ ಷೇರಿನಲ್ಲಿ ಶೇ. 85.31 ರಷ್ಟು ಏರಿಕೆಯ ಸಾಧ್ಯತೆಯನ್ನು ಅಂದಾಜಿಸಲಾಗಿದೆ.
ಆನ್‌ಲೈನ್ ಆಹಾರ ವಿತರಣಾ ಮತ್ತು ತ್ವರಿತ ವಾಣಿಜ್ಯ ಕ್ಷೇತ್ರದ 'ಸ್ವಿಗ್ಗಿ' ಷೇರಿನಲ್ಲಿ ಶೇ.75.90 ರಷ್ಟು ಏರಿಕೆಯ ನಿರೀಕ್ಷೆಯಿದೆ. ನಾಲ್ವರು ವಿಶ್ಲೇಷಕರು ಈ ಷೇರಿಗೆ 'ಸ್ಟ್ರಾಂಗ್ ಬೈ' ಶಿಫಾರಸು ನೀಡಿದ್ದಾರೆ. ಏಳು ಕಂಪನಿಗಳ ಪೈಕಿ ಹೆಚ್ಚಿನ ವಿಶ್ಲೇಷಕರ ಬೆಂಬಲ ಹೊಂದಿರುವ ಷೇರು ಇದಾಗಿದೆ.
ಪವನ ವಿದ್ಯುತ್ ಕ್ಷೇತ್ರದ 'ಸುಜ್ಲಾನ್ ಎನರ್ಜಿ' ಷೇರಿನಲ್ಲಿ ಶೇ.74.17 ರಷ್ಟು ಏರಿಕೆಯ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಸೌರಶಕ್ತಿ ಕ್ಷೇತ್ರದ 'ಎಮ್ಮ್ವೀ ಫೋಟೊವೋಲ್ಟಾಯಿಕ್ ಪವರ್' ಷೇರಿನಲ್ಲಿ ಶೇ.56.51 ರಷ್ಟು ಏರಿಕೆಯ ನಿರೀಕ್ಷೆಯಿದೆ.
ಜೀವ ವಿಮಾ ಕ್ಷೇತ್ರದ 'ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್' ಷೇರಿನಲ್ಲಿ ಶೇ.53.27 ರಷ್ಟು ಏರಿಕೆಯ ಸಾಧ್ಯತೆಯನ್ನು ವಿಶ್ಲೇಷಕರು ಗುರುತಿಸಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದ 'ಶೋಭಾ ಲಿಮಿಟೆಡ್' ಶೇ. 52.09 ರಷ್ಟು ಹಾಗೂ ಎಲೆಕ್ಟ್ರಾನಿಕ್ಸ್ ಮರುಉತ್ಪಾದನೆ ಮತ್ತು ಸೇವಾ ಕ್ಷೇತ್ರದ 'ಜಿಎನ್‌ಜಿ ಎಲೆಕ್ಟ್ರಾನಿಕ್ಸ್' ಶೇ. 51.62 ರಷ್ಟು ಏರಿಕೆಯ ನಿರೀಕ್ಷೆ ಹೊಂದಿವೆ.
ನಿರೀಕ್ಷಿತ ಏರಿಕೆಯ ಪ್ರಮಾಣವನ್ನು ಗಮನಿಸಿದರೆ, ಈ ಏಳು ಷೇರುಗಳು ಹೂಡಿಕೆದಾರರ ಗಮನ ಸೆಳೆಯುತ್ತವೆ.
| ಕಂಪನಿ | NSE ಕೋಡ್ | ಮುಕ್ತಾಯದ ಬೆಲೆ (ರೂ) | ನಿರೀಕ್ಷಿತ ಏರಿಕೆ |
| Aye Finance | AYE | 159.30 | 85.31% |
| Swiggy | SWIGGY | 188.50 | 75.90% |
| Suzlon Energy | SUZLON | 37.19 | 74.17% |
| Emmvee Photovoltaic | EMMVEE | 272.64 | 56.51% |
| ICICI Prudential Life | ICICIPRULI | 453.20 | 53.27% |
| Sobha | SOBHA | 1,290.40 | 52.09% |
| GNG Electronics | EBGNG | 527.40 | 51.62% |
ಹೂಡಿಕೆದಾರರು ಗಮನಿಸಬೇಕಾದ ಅಂಶ: ಈ ಏರಿಕೆಯ ಶೇಕಡಾವಾರುಗಳು ವಿಶ್ಲೇಷಕರ ಅಂದಾಜಿನ ಆಧಾರದಲ್ಲಿವೆ. ಇವು ಖಚಿತ ಬೆಲೆ ಗುರಿಗಳಲ್ಲ. ಹೀಗಾಗಿ ಇವುಗಳನ್ನು ಮಾರುಕಟ್ಟೆಯ ವ್ಯಾಪಕ ಒಮ್ಮತವೆಂದು ಪರಿಗಣಿಸಬಾರದು.