ದಿನಭವಿಷ್ಯ: ಇವತ್ತು ಯಾರಿಗೆ ಶುಭ ಫಲ?
Daily Horoscope: ಇಂದು (ಭಾನುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಮನಸ್ಸಿಗೆ ಮುದನೀಡುವ ರವಿವಾರ.. ಕಾರ್ಯಾಲಯಕ್ಕೆ ವಿರಾಮ, ಸಂಸಾರದ ಕಡೆಗೆ ಗಮನ. ಉದ್ಯಮಿಗಳಿಗೆ ಅನಿರೀಕ್ಷಿತ ಲಾಭ. ಹೊಸ ಕ್ಷೇತ್ರಗಳಿಗೆ ಪಾದಾರ್ಪಣೆ. ದೇವತಾ ಕಾರ್ಯಗಳಲ್ಲಿ ಮಗ್ನತೆ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
ವೃಷಭ:
ಅನಿರೀಕ್ಷಿತ ಧನಾಗಮ ಯೋಗ.. ಉದ್ಯಮಗಳ ಬೆಳವಣಿಗೆ ಅಬಾಧಿತ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ. ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಗೆ ಪ್ರೋತ್ಸಾಹ ಪ್ರಕೃತಿ ಸಂರಕ್ಷಣೆಯ ಕಾರ್ಯಗಳಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.
ಮಿಥುನ:
ವಿರಾಮದ ದಿನ ಹೊಸ ಕನಸುಗಳು.. ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು. ಪ್ರಾಮಾಣಿಕ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ. ಮಕ್ಕಳ ಜ್ಞಾನ ವಿಸ್ತರಣೆಗೆ ವಿಶೇಷ ವ್ಯವಸ್ಥೆ. ಮನೆಯವರ ಆರೋಗ್ಯ ಉತ್ತಮ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.
ಕರ್ಕಾಟಕ:
ನಿಯೋಜಿತ ಕಾರ್ಯಗಳ ಸಮರ್ಥ ನಿರ್ವಹಣೆ.. ಜ್ಞಾನವೃದ್ಧಿಯ ಪ್ರಯತ್ನಕ್ಕೆ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಪ್ರಾಪ್ತ ವಯಸ್ಕರಿಗೆ ಕಂಕಣ ಭಾಗ್ಯ. ಹೋಟೆಲ್ ಉದ್ಯಮಿಗಳಿಗೆ ಹಠಾತ್ ನಷ್ಟ. ಗಣೇಶ ಪಂಚರತ್ನ, ಗಜೇಂದ್ರಮೋಕ್ಷ ಸ್ತೋತ್ರ, ಶನಿಸ್ತೋತ್ರ ಓದಿ.
ಸಿಂಹ:
ಪ್ರಕೃತಿ ಸಹಜ ಸಂಗತಿಗಳಿಗೆ ವಿರೋಧ ಬೇಡ.. ಒಡನಾಡಿಗಳ ಸ್ವಾಭಿಮಾನಕ್ಕೆ ಗೌರವ ಸಲ್ಲಲಿ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಹತ್ತಿರದ ದೇವಾಲಯಕ್ಕೆ ಸಂದರ್ಶನ. ಕುಟುಂಬದಲ್ಲಿ ಸರ್ವರಿಗೂ ಆರೋಗ್ಯ ವೃದ್ಧಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಕನ್ಯಾ:
ನಿರ್ದಿಷ್ಟ ಗುರಿಯ ಕಾರ್ಯಗಳ ಮುನ್ನಡೆ.. ಸಮಾಜದಲ್ಲಿ ಶಿಸ್ತಿನ ಕೆಲಸದಿಂದ ಗೌರವ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ಶಿಕ್ಷಿತರಿಗೆ ಸೂಕ್ತ ಅವಕಾಶಗಳು ಗೋಚರ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ರವಿಸ್ತೋತ್ರ ಓದಿ.
ತುಲಾ:
ಕೊಂಚ ಹಗುರವಾದ ಗೃಹಕೃತ್ಯಗಳ ಹೊರೆ.. ಉದ್ಯೋಗಸ್ಥರಿಗೆ ವಿರಾಮದ ಆನಂದ. ಉದ್ಯೋಗಾಸಕ್ತರಿಗೆ ಸೂಕ್ತ ಅವಕಾಶ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಅನಿಯೋಜಿತ ಪ್ರಯಾಣದ ಸಾಧ್ಯತೆ. ಗಣೇಶ ದ್ವಾದಶನಾಮ ಸ್ತೋತ್ರ, ಹನುಮಾನ್ ಕವಚ, ಅಷ್ಟಲಕ್ಷ್ಮೀ ಸ್ತೋತ್ತ ಓದಿ.
ವೃಶ್ಚಿಕ:
ಇಡೀ ದಿನ ಸಂತೃಪ್ತಿಯ ಅನುಭವ.. ಉದ್ಯಮದಲ್ಲಿ ಅಪೂರ್ವ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯಿಂದ ಲಾಭ. ಲೇವಾದೇವಿ ಹಾಗೂ ಸಟ್ಟಾ ವ್ಯವಹಾರದಿಂದ ದೂರವಿರಿ. ಸಂಗೀತ, ಹರಿಕಥೆ ಶ್ರವಣಕ್ಕೆ ಸಮಯ ಮೀಸಲು. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಧನು:
ಉದ್ಯೋಗದ ಚಿಂತೆಗಳಿಗೆ ವಿರಾಮ.. ಪಾಲುದಾರಿಕೆ ಉದ್ಯಮ ಆರಂಭಕ್ಕೆ ವಿಘ್ನ. ಕೃಷಿ ಕ್ಷೇತ್ರದಲ್ಲಿ ಹೊಸ ಬಗೆಯ ಬೆಳೆಗಳ ಪ್ರಯೋಗ ತೃಪ್ತಿಕರ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಆದಾಯ ಹೆಚ್ಚಳ. ಪೂರ್ವ ದಿಕ್ಕಿನಿಂದ ಶುಭ ಸಮಾಚಾರ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ಮಕರ:
ಉದ್ಯೋಗ ಸ್ಥಾನದ ಚಿಂತೆ ಇಂದಿಲ್ಲ.. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸಿದ ತೃಪ್ತಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ. ಯಂತ್ರೋಪಕರಣ ಬಿಡಿಭಾಗಗಳಿಗೆ ಬೇಡಿಕೆ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ , ಹನುಮಾನ್ ಚಾಲೀಸಾ ಓದಿ.
ಕುಂಭ:
ಸಲಹೆಗಳಿಗೆ ಶೀಘ್ರ ಸ್ಪಂದನದಿಂದ ತ್ವರಿತ ಯಶಸ್ಸು.. ಉತ್ಪನ್ನಗಳ ಗುಣಮಟ್ಟ ಸುಧಾರಣೆಯಿಂದ ಹೆಚ್ಚಿದ ಬೇಡಿಕೆ. ಯಂತ್ರೋಪಕರಣಗಳ ಖರೀದಿಗೆ ಧನವ್ಯಯ. ಗೃಹೋತ್ಪನ್ನಗಳಿಗೆ ಗ್ರಾಹಕರ ಮೆಚ್ಚುಗೆ. ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಸಾಮರಸ್ಯ ವೃದ್ಧಿ. ಗಣೇಶ ದ್ವಾದಶನಾಮ ಸ್ತೋತ್ರ, ಕೃಷ್ಣಾಷ್ಟೋತ್ತರ ಶತನಾಮಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಉದ್ಯಮದ ವ್ಯಾಪ್ತಿ ಮತ್ತಷ್ಟು ವಿಸ್ತರಣೆ.. ಸಾಮಾಜಿಕ ವಲಯದಲ್ಲಿ ಅನುಕೂಲಕರ ಸ್ಪಂದನ. ಧಾರ್ಮಿಕ ರಂಗದಲ್ಲಿ ಗೌರವ ವೃದ್ಧಿ. ಕೃಷಿಕರಿಗೆ ಆನಂದ ತರುವ ದಿನ. ಸಂಸಾರದಲ್ಲಿ ನೆಮ್ಮದಿಯ ಅನುಭವ. ಗಣೇಶ ಕವಚ ಸ್ಗೋತ್ರ, ದತ್ತಾತ್ರೇಯ ಸ್ಗೋತ್ರ, ಶನಿಮಹಾತ್ಮೆ ಓದಿ.