ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ರ್ಯಾಂಕ್ ಪಟ್ಟಿ ಪ್ರಕಟ

ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇದರ 2023-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಲ್ಲಿ ಒಟ್ಟು ಎಂಟು ರ್‍ಯಾಂಕ್‌ಗಳನ್ನು ಘೋಷಿಸಲಾಗಿದೆ.

Nov 12, 2026 - 23:17
Nov 12, 2026 - 23:17
ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ರ್ಯಾಂಕ್ ಪಟ್ಟಿ ಪ್ರಕಟ

ಪುತ್ತೂರು: ಇಲ್ಲಿನ ವಿವೇಕಾನಂದ(vivekananda) ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇದರ 2023-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಪದವಿ(degree) ಪರೀಕ್ಷೆಯಲ್ಲಿ(exams) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಲ್ಲಿ ಒಟ್ಟು ಎಂಟು ರ್‍ಯಾಂಕ್‌ಗಳನ್ನು ಘೋಷಿಸಲಾಗಿದೆ. ಬಿ.ಎ. ವಿಭಾಗದಲ್ಲಿ ಸುಮನಾ (95.41%) ಪ್ರಥಮ ರ್‍ಯಾಂಕ್‌(ವಾಮನ ಆಚಾರ್ಯ ಮತ್ತು ಸುಮಿತಾ ದಂಪತಿಗಳ ಪುತ್ರಿ), ಬಿಎಸ್ಸಿ ವಿಭಾಗದಲ್ಲಿ ಅನುಶ್ರೀ ಜಿ ಪ್ರಭು(96.38%) ಪ್ರಥಮ ರ್‍ಯಾಂಕ್‌(ಜಿ. ಪುರುಷೋತ್ತಮ ಪ್ರಭು, ಜಿ.ವಿದ್ಯಾ ಪ್ರಭು ದಂಪತಿಗಳ ಪುತ್ರಿ), ಬಿಬಿಎ ವಿಭಾಗದಲ್ಲಿ ಅನುಶ್ರೀ(94.21%) ಪ್ರಥಮ ರ್ಯಾಂಕ್ (ಪ್ರದೀಪ್, ಗೀತಾ. ಬಿ ದಂಪತಿಯ ಪುತ್ರಿ), ಬಿಕಾಂ ವಿಭಾಗದಲ್ಲಿ ಶರಣ್ಯ ವಿ.ಆರ್ (98.79%) ಪ್ರಥಮ ರ್‍ಯಾಂಕ್‌ (ರಾಮಚಂದ್ರ ವಿ, ವಾಣಿ ರಾಮಚಂದ್ರ ದಂಪತಿಯ ಪುತ್ರಿ) ಹಾಗೂ ಸಿಂಧೂರ ವಿ.ಎಸ್ (98.29%) ದ್ವಿತೀಯ ರ್‍ಯಾಂಕ್‌ (ಶ್ರೀ ಪತಿ ವಿ, ವೀಣಾ ಶ್ರೀಪತಿ ದಂಪತಿಯ ಪುತ್ರಿ) ಅಂತೆಯೇ ಬಿಸಿಎ ವಿಭಾಗದಲ್ಲಿ ಮಹಿ ಜೆ. ಹೆಗ್ಡೆ (96.13%) ಪ್ರಥಮ ರ್‍ಯಾಂಕ್‌( ಜಯರಾಮ ಹೆಗ್ಡೆ, ಗಾಯತ್ರಿ ದೇವಿ ಪಿ ದಂಪತಿಯ ಪುತ್ರಿ), ಶ್ರೀನಿಧಿ ಎ (95.3%) ದ್ವಿತೀಯ ರ್‍ಯಾಂಕ್‌ ( ಗೋವಿಂದ ಪ್ರಸಾದ್, ವಿದ್ಯಾ ದಂಪತಿಯ ಪುತ್ರ) ಹಾಗೂ ಸಮೃದ್ಧಿ (94.96%) ತೃತೀಯ ರ್‍ಯಾಂಕ್‌(ಶೇಖರ ಪೂಜಾರಿ, ಸುಮಿತ್ರ ಬಿ.ಕೆ. ದಂಪತಿಯ ಪುತ್ರಿ)ಗಳನ್ನು ಗಳಿಸಿರುತ್ತಾರೆ.  


ಸ್ನಾತಕೋತ್ತರ ಪದವಿಯಲ್ಲಿ 2024-26ರ ಸಾಲಿನಲ್ಲಿ ಒಟ್ಟು ಎರಡು ರ್‍ಯಾಂಕ್‌ಗಳು ಲಭಿಸಿದ್ದು ಎಂ.ಕಾಂ ವಿಭಾಗದಲ್ಲಿ ಪವನ್ ರಾಜ್ (9.05 ಸಿಜಿಪಿಎ) ಪ್ರಥಮ ರ್‍ಯಾಂಕ್‌( ರಘು ಮತ್ತು ಸುನಿತಾ ದಂಪತಿ  ಪುತ್ರ) ಹಾಗೂ ಎಂ. ಎ ಜೆ ಎಂ ಸಿ ಯಲ್ಲಿ ಪಂಚಮಿ ಕುಮಾರಿ. ಬಿ (8.09 ಸಿಜಿಪಿಎ) ಪ್ರಥಮ ರ್‍ಯಾಂಕ್‌( ವೆಂಕಟರಮಣ ಭಟ್ ಬಿ ಮತ್ತು ಗುಣಶ್ರೀ ದಂಪತಿಯ  ಪುತ್ರಿ)  ಪಡೆದುಕೊಂಡಿರುತ್ತಾರೆ ಎಂದು ಕಾಲೇಜಿನ ಪ್ರಾಚಾರ್ಯ ಶ್ರೀಕೃಷ್ಣ ಗಣರಾಜ ಭಟ್ ಎಸ್ ಮತ್ತು ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಪ್ರಕಾಶ್ ಕುಮಾರ್ ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.