ವಿವೇಕಾನಂದ ಪದವಿ ಕಾಲೇಜಿನ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಾ.ವರದರಾಜ ಚಂದ್ರಗಿರಿ ಅಧಿಕಾರ ಸ್ವೀಕಾರ

Vivekananda Degree College: ವಿವೇಕಾನಂದ ಪದವಿ ಕಾಲೇಜಿನ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಾ.ವರದರಾಜ ಚಂದ್ರಗಿರಿ ಅಧಿಕಾರ ಸ್ವೀಕರಿಸಿದ್ದಾರೆ.

Nov 3, 2026 - 16:26
ವಿವೇಕಾನಂದ ಪದವಿ ಕಾಲೇಜಿನ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಾ.ವರದರಾಜ ಚಂದ್ರಗಿರಿ ಅಧಿಕಾರ ಸ್ವೀಕಾರ

ಪುತ್ತೂರು: ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಾ.ವರದರಾಜ ಚಂದ್ರಗಿರಿ ಹಾಗೂ ಸಂಚಾಲಕರಾಗಿ ಎ.ಮೋಹನ್ ಅಧಿಕಾರ ಸ್ವೀಕರಿಸಿದ್ದಾರೆ. 

ಕೋಶಾಧಿಕಾರಿಗಳಾಗಿ ಸುಕುಮಾರ್ ರಾವ್ ಎನ್.ಎಸ್ ಮತ್ತು ಸದಸ್ಯರುಗಳಾಗಿ ಯಶೋಧರ ಜೈನ್, ಎಸ್ ರಾಜಶೇಖರ್, ವೇಣುಗೋಪಾಲ ಭಟ್ ಎಂ, ಪೂರ್ಣ ಮಂಗಳ, ಮಾಲಿನಿ ಕಶ್ಯಪ್, ರಂಜಿತ್ ಜೈನ್  ಅವರುಗಳಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ ಕಡಬ ದೀಪ ಪ್ರದಾನ ಮಾಡಿ, ಜವಬ್ದಾರಿ ಹಸ್ತಾಂತರ ಮಾಡಿದರು.

ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಹಾಗೂ ಕಾಲೇಜಿನ ನಿಕಟ ಪೂರ್ವ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್, ಕಾಲೇಜಿನ ಪ್ರಾರ್ಚಾಯ ಶ್ರೀಕೃಷ್ಣ ಗಣರಾಜ ಭಟ್ ಎಸ್ ಮತ್ತು ವಿಭಾಗದ ಮುಖ್ಯಸ್ಥರುಗಳು ಹಾಜರಿದ್ದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.