ಸಂತ ಫಿಲೋಮಿನಾ ಕಾಲೇಜು: ವಲಯ ಮಟ್ಟದ ಎನ್ಎಸ್ಎಸ್ ಅಂತರ ಕಾಲೇಜು ನೃತ್ಯ ಸ್ಪರ್ಧೆ

St. Philomena College: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ವಲಯ ಮಟ್ಟದ ಎನ್ಎಸ್ಎಸ್ ಅಂತರ ಕಾಲೇಜು ನೃತ್ಯ ಸ್ಪರ್ಧೆ ನಡೆಯಿತು.

Oct 28, 2026 - 18:26
ಸಂತ ಫಿಲೋಮಿನಾ ಕಾಲೇಜು: ವಲಯ ಮಟ್ಟದ ಎನ್ಎಸ್ಎಸ್ ಅಂತರ ಕಾಲೇಜು ನೃತ್ಯ ಸ್ಪರ್ಧೆ

ಪುತ್ತೂರು: ಇಲ್ಲಿನ ಸ೦ತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ವತಿಯಿಂದ, ವಲಯ ಮಟ್ಟದ ಅಂತರ ಕಾಲೇಜು ವೈಯಕ್ತಿಕ & ಗುಂಪು ನೃತ್ಯ ಸ್ಪರ್ಧೆಯನ್ನು ಈಚೆಗೆ ಸಿಲ್ವರ್ ಜುಬಿಲಿ ಮೆಮೋರಿಯಲ್ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು. 
 
ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆಂಟನಿ ಪ್ರಕಾಶ್ ಮೊಂತೆರೊ ಅಧ್ಯಕ್ಷತೆ ವಹಿಸಿ, 'ಎನ್ಎಸ್ಎಸ್' ಮಹತ್ವ ಮತ್ತು ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿಯ ಅಗತ್ಯತೆಯ ಕುರಿತು ಮಾತನಾಡಿದರು. 
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ನಾಯಕತ್ವ, ಸಂವಹನ, ಸಹಕಾರ ಹಾಗೂ ಸಾಮಾಜಿಕ ಸೇವೆಯಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
 
ಎನ್ಎಸ್ಎಸ್ ಅಧಿಕಾರಿ ಡಾ.ಕೆ.ಚಂದ್ರಶೇಖರ್ ಮಾತನಾಡಿ, ಘಟಕದ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
 
ಘಟಕ ನಾಯಕಿ ಶಿಲ್ಪ ಸ್ವಾಗತಿಸಿದರು. ಬಿಕಾಂ ವಿದ್ಯಾರ್ಥಿನಿ ಲವಿಕಾ ವಂದಿದರು. ಸೌಜನ್ಯ ಕಾರ್ಯಕ್ರಮ ನಿರ್ವಹಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.