Day2Day News: ನಿಮ್ಮೊಳಗಿನ ಬರಹಗಾರನಿಗೆ ವೇದಿಕೆ.. ಡೇ2ಡೇ ನ್ಯೂಸ್ ದೀಪಾವಳಿ ವಿಶೇಷಾಂಕಕ್ಕೆ ಬರಹಗಳ ಆಹ್ವಾನ
Day2Day News Diwali Special Edition: ಡೇ2ಡೇ ನ್ಯೂಸ್ ದೀಪಾವಳಿ ವಿಶೇಷಾಂಕಕ್ಕೆ ಬರಹಗಳನ್ನು ಆಹ್ವಾನಿಸಿದೆ.
ಬೆಂಗಳೂರು/ ಮಂಗಳೂರು: ಕರ್ನಾಟಕದ ಮೊತ್ತಮೊದಲ ಶಾರ್ಟ್ ನ್ಯೂಸ್ ಆ್ಯಪ್ ಎಂಬ ಹೆಗ್ಗಳಿಕೆಯ 'ಡೇ2ಡೇ ನ್ಯೂಸ್ ' (Day2Day News) ಇದೇ ಮೊದಲ ಬಾರಿಗೆ 'ದೀಪಾವಳಿ ವಿಶೇಷಾಂಕ–2026' ಅನ್ನು ವಿನೂತನ ಡಿಜಿಟಲ್ ರೂಪದಲ್ಲಿ ಹೊರತರಲು ಸಜ್ಜಾಗಿದೆ.
ಈ ವಿಶೇಷ ಪ್ರಯತ್ನದ ಭಾಗವಾಗಿ, ಸಾಹಿತ್ಯಾಸಕ್ತರು, ಉದಯೋನ್ಮುಖ ಬರಹಗಾರರು ಹಾಗೂ ಸೃಜನಶೀಲ ಮನಸ್ಸುಗಳಿಗೆ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರಿಂದ ಕಿರು ಕವಿತೆ, ಕಥೆ, ಲೇಖನ ಸೇರಿದಂತೆ ವಿವಿಧ ಪ್ರಕಾರದ ಬರಹಗಳನ್ನು ಆಹ್ವಾನಿಸಲಾಗಿದೆ.
ಬರೆಯುವ ಆಸಕ್ತಿ ಇದ್ದರೂ ಸೂಕ್ತ ವೇದಿಕೆಯ ಕೊರತೆಯಿಂದ ತಮ್ಮ ಪ್ರತಿಭೆಯನ್ನು ಹೊರಜಗತ್ತಿಗೆ ಪರಿಚಯಿಸಲು ಸಾಧ್ಯವಾಗದವರಿಗೂ ಈ ವಿಶೇಷಾಂಕ ಉತ್ತಮ ಅವಕಾಶವಾಗಲಿದೆ. ಬರವಣಿಗೆ ಎಂದರೆ ಕೇವಲ ಪ್ರಸಿದ್ಧ ಸಾಹಿತಿಗಳ ಸ್ವತ್ತಲ್ಲ, ಬದುಕಿನ ಅನುಭವಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಪ್ರತಿಯೊಬ್ಬರಲ್ಲೂ ಒಬ್ಬ ಬರಹಗಾರನಿರುತ್ತಾನೆ. ಅಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಡೇ2ಡೇ ನ್ಯೂಸ್ ಈ ವಿನೂತನ ಹೆಜ್ಜೆಯನ್ನಿಟ್ಟಿದೆ.
ಯಾವೆಲ್ಲ ಬರಹಗಳನ್ನು ಕಳುಹಿಸಬಹುದು?
ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸಲು ಆಸಕ್ತರು ಕಿರು ಕವಿತೆಗಳು, ಕಿರು ಕಥೆಗಳು, ಕಿರು ಲೇಖನಗಳು, ಸ್ಫೂರ್ತಿದಾಯಕ ಬರಹಗಳು, ಜೀವನಾನುಭವದ ಬರಹಗಳು, ಹಾಸ್ಯ ಬರಹಗಳು ಹಾಗೂ ದೀಪಾವಳಿಯ ವಿಶೇಷತೆಯನ್ನು ಸಾರುವ ಬರಹಗಳನ್ನು ಕಳುಹಿಸಬಹುದು.
ಸಾಮಾಜಿಕ ಕಳಕಳಿಯ ವಿಚಾರಗಳು, ಬದುಕಿನ ಸಣ್ಣಪುಟ್ಟ ಅನುಭವಗಳು, ಮಾನವೀಯ ಸಂಬಂಧಗಳು, ಯಶಸ್ಸಿನ ಹಾದಿಯ ಸವಾಲುಗಳು, ಸಾಧಕರ ಜೀವನಗಾಥೆಗಳು, ಹಬ್ಬದ ಸಂಭ್ರಮ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಮಹತ್ವ ಸೇರಿದಂತೆ ಓದುಗರ ಮನಸ್ಸಿಗೆ ತಟ್ಟುವ ವಿಭಿನ್ನ ವಿಷಯಗಳ ಬರಹಗಳಿಗೆ ಅವಕಾಶವಿದೆ.
ಬರಹಗಳು ಸರಳವಾಗಿದ್ದರೂ ಪರಿಣಾಮಕಾರಿಯಾಗಿರಲಿ; ಓದುಗರಿಗೆ ಹೊಸ ಚಿಂತನೆ ನೀಡುವಂತಿರಲಿ. ಸಣ್ಣ ಬರಹದ ಮೂಲಕವೂ ದೊಡ್ಡ ಸಂದೇಶವನ್ನು ತಲುಪಿಸಬಹುದು ಎಂಬ ಆಶಯದೊಂದಿಗೆ ಪ್ರತಿಭಾವಂತರನ್ನು ಈ ವೇದಿಕೆಗೆ ಆಹ್ವಾನಿಸಲಾಗಿದೆ.
ಡಿಜಿಟಲ್ ಮಾಧ್ಯಮದಲ್ಲಿ ಸಾಹಿತ್ಯಕ್ಕೆ ಹೊಸ ವೇದಿಕೆ:
ಮುದ್ರಣ ಮಾಧ್ಯಮದ ಸಾಹಿತ್ಯ ಪುರವಣಿಗಳು ಹಾಗೂ ವಿಶೇಷಾಂಕಗಳ ಪರಂಪರೆಯನ್ನು ಆಧುನಿಕ ಡಿಜಿಟಲ್ ಮಾಧ್ಯಮದೊಂದಿಗೆ ಬೆಸೆಯುವ ಪ್ರಯತ್ನ ಇದಾಗಿದೆ. ಮೊಬೈಲ್ ಮೂಲಕ ಸುದ್ದಿಗಳನ್ನು ಓದುವ ಹೊಸ ತಲೆಮಾರಿಗೆ ಸಾಹಿತ್ಯದ ರುಚಿಯನ್ನು ಪರಿಚಯಿಸುವುದರ ಜತೆಗೆ, ಹೊಸ ಬರಹಗಾರರನ್ನು ಓದುಗರಿಗೆ ಪರಿಚಯಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಬರಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಅವುಗಳನ್ನು ಆಯ್ದು ಓದುಗರ ಮುಂದೆ ವ್ಯವಸ್ಥಿತವಾಗಿ ಪ್ರಸ್ತುತಪಡಿಸುವ ವೇದಿಕೆ ದೊರೆಯುವುದು ಹೊಸ ಬರಹಗಾರರಿಗೆ ಮಹತ್ವದ ಸಂಗತಿ. ಈ ನಿಟ್ಟಿನಲ್ಲಿ ಡೇ ಟು ಡೇ ನ್ಯೂಸ್ ದೀಪಾವಳಿ ವಿಶೇಷಾಂಕವು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ವೇದಿಕೆಯಾಗುವ ಆಶಯ ಹೊಂದಿದೆ.
ಆಯ್ಕೆಯಾದ ಬರಹಗಳನ್ನು 'ಡೇ2ಡೇ ನ್ಯೂಸ್' ದೀಪಾವಳಿ ವಿಶೇಷ ಪುಟಗಳಲ್ಲಿ ಪ್ರಕಟಿಸಲಾಗುವುದು. ಹೀಗಾಗಿ, ಬರೆಯುವ ಆಸಕ್ತಿ ಹೊಂದಿರುವವರು ತಮ್ಮ ಕಲ್ಪನೆಗಳಿಗೆ ಅಕ್ಷರ ರೂಪ ನೀಡಿ, ತಮ್ಮ ಅನುಭವ ಮತ್ತು ಭಾವನೆಗಳನ್ನು ಹೆಚ್ಚಿನ ಓದುಗರೊಂದಿಗೆ ಹಂಚಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.
ನಿಮ್ಮ ಬರಹಕ್ಕೂ ಸಿಗಲಿ ಓದುಗರ ಮೆಚ್ಚುಗೆ:
ಬರಹಗಾರರಾಗಲು ದೊಡ್ಡ ಅನುಭವವೇ ಬೇಕೆಂದಿಲ್ಲ, ಬರೆಯುವ ಆಸಕ್ತಿ, ಹೊಸತನದ ಆಲೋಚನೆ ಮತ್ತು ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಸುವ ಕೌಶಲ ಇದ್ದರೆ ಸಾಕು. ವಿದ್ಯಾರ್ಥಿಗಳು, ಯುವಜನರು, ಗೃಹಿಣಿಯರು, ಉದ್ಯೋಗಿಗಳು, ಹಿರಿಯರು ಹಾಗೂ ಸಾಹಿತ್ಯಾಸಕ್ತರು ಸೇರಿದಂತೆ ಎಲ್ಲ ವಯೋಮಾನದವರೂ ಈ ಅವಕಾಶವನ್ನು ಬಳಸಿಕೊಳ್ಳಬಹುದು.
ನಿಮ್ಮೊಳಗಿನ ಬರಹಗಾರನಿಗೆ ವೇದಿಕೆ ನೀಡಲು, ನಿಮ್ಮ ಪ್ರತಿಭೆಯನ್ನು ಪ್ರೋತ್ಸಾಹಿಸಲು ಮತ್ತು ನಿಮ್ಮ ಬರಹವನ್ನು ಓದುಗರಿಗೆ ತಲುಪಿಸಲು ಡೇ ಟು ಡೇ ನ್ಯೂಸ್ ಸಿದ್ಧವಾಗಿದೆ. ಆಸಕ್ತರು ತಮ್ಮ ಕಿರು ಬರಹಗಳನ್ನು ಕಳುಹಿಸಬಹುದು.
ಡೇ2ಡೇ ನ್ಯೂಸ್ - ಭವಿಷ್ಯದ ಮಾಧ್ಯಮ!
ಒಂದೇ ಸ್ವೈಪ್ನಲ್ಲಿ ಸುದ್ದಿಯ ಜಗತ್ತು
ಸೂಚನೆ: ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ, ನವೆಂಬರ್ 5 ವಾಟ್ಸ್ಆ್ಯಪ್ ಸಂಖ್ಯೆ 7070708646