ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಘೋಷಣೆ: ನಾಳೆ ಪ್ರಶಸ್ತಿ ಪ್ರದಾನ
Sri Maharshi Valmiki Award: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ 2026-27ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ನಾಳೆ (ಅ.26) ಆಚರಿಸಲಾಗುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ 2026-27ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವ ಸಂಬಂಧ ಜಲಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ಜಿ.ಟಿ.ಚಂದ್ರಶೇಖರಪ್ಪ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಸ್ವೀಕೃತವಾದ ಒಟ್ಟು 137 ಅರ್ಜಿಗಳನ್ನು ಪರಿಶೀಲಿಸಿ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ವಿಜ್ಞಾನ ಹಾಗೂ ತಂತ್ರಜ್ಞಾನ ಹಾಗೂ ಸಾಮಾಜಿಕ ಸೇವೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿ ಪುರಸ್ಕೃತರ ವಿವರ:
1) ತೇಜಸ್ವಿ ಕಟ್ಟಿಮನಿ
ವಿಳಾಸ: ಅಂಬಿಕೊಪ್ಪ, ಧಾರವಾಡ ಜಿಲ್ಲೆ
ಕ್ಷೇತ್ರ: ಶೈಕ್ಷಣಿಕ ಕ್ಷೇತ್ರ
ವಿಭಾಗ: ಬೆಳಗಾವಿ
2) ತಿಪ್ಪಣ್ಣ ಮರಿಕುಂಟೆ
ವಿಳಾಸ: ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ
ಕ್ಷೇತ್ರ: ಸಾಹಿತ್ಯ ಕ್ಷೇತ್ರ
ವಿಭಾಗ: ಬೆಂಗಳೂರು
3) ಆರ್.ಎಂ.ಮುನಿರಾಜು
ವಿಳಾಸ: ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಕ್ಷೇತ್ರ: ಸಾಂಸ್ಕೃತಿಕ ಸೇವೆ
ವಿಭಾಗ: ಬೆಂಗಳೂರು
4) ಡಾ.ಚಂದ್ರನಾಯಕ್ ಎಸ್
ವಿಳಾಸ: ಸರಸ್ವತಿ ಪುರಂ ಮೈಸೂರು ಜಿಲ್ಲೆ
ಕ್ಷೇತ್ರ: ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರ
ವಿಭಾಗ: ಬೆಂಗಳೂರು ಕೇಂದ್ರ
5) ಜೆ.ಪಿ.ರಾಜು
ವಿಳಾಸ: ಕುಶಾಲನಗರ ತಾಲೂಕು, ಕೊಡಗು ಜಿಲ್ಲೆ
ಕ್ಷೇತ್ರ: ಸಾಮಾಜಿಕ ಸೇವೆ
ವಿಭಾಗ: ಮೈಸೂರು
6) ಶಿವನಗೌಡ ಹೊನ್ನನಗೌಡ ಪಾಟೀಲ
ವಿಳಾಸ: ಶಿರಹಟ್ಟಿ ತಾಲೂಕು, ಗದಗ ಜಿಲ್ಲೆ
ಕ್ಷೇತ್ರ: ಸಾಮಾಜಿಕ ಸೇವೆ
ವಿಭಾಗ: ಬೆಳಗಾವಿ
7) ನಂದಕುಮಾರ ಮಾಲಿ ಪಾಟೀಲ
ವಿಳಾಸ: ಪಂಚಶೀಲ ನಗರ, ಕಲಬುರಗಿ ಜಿಲ್ಲೆ
ಕ್ಷೇತ್ರ: ಸಾಮಾಜಿಕ ಸೇವೆ
ವಿಭಾಗ: ಕಲಬುರಗಿ
8) ಕೇತಮ್ಮ
ವಿಳಾಸ: ಯಳಂದೂರು ತಾಲೂಕು, ಚಾಮರಾಜನಗರ ಜಿಲ್ಲೆ
ಕ್ಷೇತ್ರ: ಸಾಮಾಜಿಕ ಸೇವೆ.
ವಿಭಾಗ: ಮೈಸೂರು
9) ಬಿ.ಜಿ.ಕೃಷ್ಣಪ್ಪ
ವಿಳಾಸ: ಗೋಕುಲ ಬಡಾವಣೆ, ತುಮಕೂರು ಜಿಲ್ಲೆ
ಕ್ಷೇತ್ರ: ಸಾಮಾಜಿಕ ಸೇವೆ
ವಿಭಾಗ: ಬೆಂಗಳೂರು
10) ವೆಂಕಟರಾಮ್
ವಿಳಾಸ: ಮಾಲೂರು ಪಟ್ಟಣ, ಕೋಲಾರ ಜಿಲ್ಲೆ
ಕ್ಷೇತ್ರ: ಸಾಮಾಜಿಕ ಸೇವೆ
ವಿಭಾಗ: ಬೆಂಗಳೂರು
ತಲಾ ರೂ.5 ಲಕ್ಷ ನಗದು, 25 ಗ್ರಾಂ ಚಿನ್ನದ ಪದಕ:
ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯಡಿ ಆಯ್ಕೆಯಾದ ಪ್ರತಿಯೊಬ್ಬ ಸಾಧಕರಿಗೆ ರೂ.5 ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಬಂಗಾರದ ಪದಕ ನೀಡಿ ಗೌರವಿಸಲಾಗುತ್ತದೆ. ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ.
ವಾಲ್ಮೀಕಿ ಜ್ಯೋತಿ ಮೆರವಣಿಗೆ:
ವಾಲ್ಮೀಕಿ ಜಯಂತಿಯ ಅಂಗವಾಗಿ ಬೆಂಗಳೂರಿನ ಬಸವನಗುಡಿಯ ಶ್ರೀ ಮಹರ್ಷಿ ವಾಲ್ಮೀಕಿ ಮಹಾ ಸಂಸ್ಥಾನದ ಆದಿಗುರು ಪೀಠದ ಶ್ರೀ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ವಾಲ್ಮೀಕಿ ಜ್ಯೋತಿ ಮೆರವಣಿಗೆ ಆರಂಭವಾಗಲಿದೆ. ಶ್ರೀ ಬಸವೇಶ್ವರ ವೃತ್ತದಿಂದ ವಿವಿಧ ಸಾಂಸ್ಕೃತಿಕ ಹಾಗೂ ಬುಡಕಟ್ಟು ಕಲಾತಂಡಗಳ ಪ್ರದರ್ಶನದೊಂದಿಗೆ ಮೆರವಣಿಗೆ ಮುಂದುವರಿಯಲಿದೆ.
ನಂತರ ಶಾಸಕರ ಭವನದ ಮುಂಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿನ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುವುದು. ಬಳಿಕ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.